ಸೂರತ್ : ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ನೇತೃತ್ವದ ಆಮ್ ಆದ್ಮಿ ಪಕ್ಷದ ಆಡಳಿತ ವಯಖರಿಯನ್ನು ಮೆಚ್ಚಿ ಹಲವಾರು ಮಂದಿ ಆಮ್ ಆದ್ಮಿ ಪಕ್ಷದತ್ತ ಮುಖಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಗುಜರಾತ್ ನ ದೊಡ್ಡ ಉದ್ಯಮಿ ಮಹೇಶ್ ಸಾವನಿ ಅವರನ್ನು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿಸೋಡಿಯಾ, ಗುಜರಾತ್ ನಲ್ಲಿ ನಮ್ಮ ಪಕ್ಷ ಬೆಳವಣಿಗೆ ಆಗುತ್ತಿರುವುದರ ಬಗ್ಗೆ ನಮಗೆ ಹೆಮ್ಮೆ ಇದೆ. ಗುಜರಾತ್ ನಲ್ಲಿ ಆಮ್ ಆದ್ಮಿ ಪಕ್ಷ ಬೆಳವಣಿಗೆಗೆ ಇದೂ ಕೂಡ ಒಂದು ಸಾಕ್ಷಿ. ಗುಜರಾತ್ ನ ದೊಡ್ಡ ಉದ್ಯಮಿ ಹಾಗೂ ದಾನಿ ಸವಾನಿ ನಮ್ಮ ಪಕ್ಷಕ್ಕೆ ಇಂದು(ಸೋಮವಾರ, ಜೂನ್ 28) ಸೇರಿರುವುದು ನಮಗೆ ಆನೆ ಬಲ ಬಂದಂತಾಗಿದೆ ಎಂದಿದ್ದಾರೆ.
ಇದನ್ನೂ ಓದಿ : ಕೇಂದ್ರಾಡಳಿತ ಪ್ರದೇಶವಾದ ಬಳಿಕ ಲಡಾಖ್ ನಲ್ಲಿ ಭಯೋತ್ಪಾದನೆ ಇಳಿಕೆ: ರಾಜ್ ನಾಥ್ ಸಿಂಗ್
4 ತಿಂಗಳೊಳಗೆ, ಎಎಪಿ(ಆಮ್ ಆದ್ಮಿ ಪಾರ್ಟಿ) ನ ವಿದ್ಯಾವಂತ ಯುವಕರ ತಂಡದ ಪರಿಶ್ರಮದಿಂದಾಗಿ ಗುಜರಾತ್ ನಲ್ಲಿ ಪಕ್ಷ ಬೆಳೆಯುತ್ತಿದೆ, ಉತ್ತಮ ಕೆಲಸ ಮಾಡುತ್ತಿದೆ. ದೆಹಲಿಯಲ್ಲಿ ಎಎಪಿ ಕೆಲಸವು ಜನಪ್ರಿಯತೆಯನ್ನು ಗಳಿಸಿದೆ ಮಾತ್ರವಲ್ಲ, ನಾಯಕರು ಮತ್ತು ಸ್ವಯಂಸೇವಕರ ಪ್ರಯತ್ನದಿಂದಾಗಿ ಗುಜರಾತ್ ನಲ್ಲಿನ ಕೆಲಸವೂ ಜನಪ್ರಿಯತೆಯನ್ನು ಗಳಿಸುತ್ತಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ದೇಶವನ್ನು ಅಭಿವೃದ್ಧಿ ಪತದತ್ತ ಕೊಂಡೊಯ್ಯುವ ಕಾರಣದಿಂದಾಗಿ ಎಎಪಿ ಯ ಕಾರ್ಯವನ್ನು ಮೆಚ್ಚಿ ದೇಶದಾದ್ಯಂತ ಇಂದು ಯುವಕರು ನಮ್ಮ ಪಕ್ಷವನ್ನು ಸೇರ್ಪಡೆಗೊಳ್ಳುತ್ತಿರುವುದು ನಮಗೆ ಹೊಸ ಭರವಸೆ ಮೂಡಿಸಿದೆ. ಏತನ್ಮಧ್ಯೆ, ಗುಜರಾತ್ ನ ಅಗ್ರ ಪಂಕ್ತಿಯ ಉದ್ಯಮಿಗಳಲ್ಲಿ ಒಬ್ಬರಾದ ಮಹೇಶ್ ಸಾವನಿ ನಮ್ಮೊಂದಿಗೆ ಕೈ ಜೋಡಿಸಿದ್ದಾರೆ. ನಮ್ಮ ಪಕ್ಷ ದೇಶದದ್ಯಂತ ಹೊಸ ಅಲೆಯನ್ನು ಸೃಷ್ಟಿಸಲಿದೆ ಎಂದು ಅವರು ಹೇಳಿದ್ದಾರೆ.
ಗುಜರಾತ್ ನಲ್ಲಿ ಬದಲಾವಣೆಯನ್ನು ಕಾಣುವ ತುರ್ತು ಅಗತ್ಯದ ಕುರಿತು ಮಾತನಾಡಿದ ಸಿಸೋಡಿಯಾ, “ಮಹೇಶ್ ಜಿ ಎಎಪಿಗೆ ಸೇರ್ಪಡೆಗೊಂಡಿರುವುದರಿಂದ, ಗುಜರಾತ್ ನ ಉದ್ಯಮ ಕ್ಷೇತ್ರ ಇನ್ನಷ್ಟು ಉತ್ತುಂಗಕ್ಕೆ ಕೊಂಡೊಯ್ಯುತ್ತಾರೆನ್ನುವುದರಲ್ಲಿ ಸಂಶಯವಿಲ್ಲ. ನಮ್ಮ ಪಕ್ಷವೂ ಅವರಿಗೆ ಸಂಪೂರ್ಣ ಬೆಂಬಲ ನೀಡುತ್ತದೆ. ಗುಜರಾತ್ ನಲ್ಲಿ ಎಎಪಿ ಯ ಬೆಳವಣಿಗೆ ಹೊಸ ಬದಲಾವಣೆಯ ಸಂಕೇತವಾಗಿದೆ. ಎಎಪಿ ಈ ಬದಲಾವಣೆ ರಾಜ್ಯಕ್ಕೆ ಮುಖ್ಯ ಎನ್ನುವ ದೃಷ್ಟಿಯಿಂದ ನಮ್ಮನ್ನು ಮುಂದಿನ ಚುನಾವಣೆಯಲ್ಲಿ ಆರಿಸುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ಇದನ್ನೂ ಓದಿ : ಕಾಂಗ್ರೆಸ್ ನಲ್ಲಿ ಸುರ್ಜೇವಾಲ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ: ಬಿಜೆಪಿ