ನವದೆಹಲಿ: ಟೆಕ್ನೊ ಮೊಬೈಲ್ ತನ್ನ ಮಹತ್ವಾಕಾಂಕ್ಷೆಯ ಸ್ಮಾರ್ಟ್ ಫೋನ್ ಫ್ಯಾಂಟಮ್ಎಕ್ಸ್ ಮೊಬೈಲನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಈ ಹೊಸ ಸ್ಮಾರ್ಟ್‌ಫೋನ್ ತನ್ನ ಸೆಗ್‍ಮೆಂಟ್‍ನಲ್ಲೇ ಮೊದಲ ಬಾರಿಗೆ ಕರ್ವ್ಡ್ ಅಮೋಲೆಡ್ ಪರದೆ ಹೊಂದಿದೆ. 25,999/- ರೂ. ಬೆಲೆ ಶ್ರೇಣಿಯಲ್ಲೇ ಕರ್ವ್ಡ್ ಅಮೋಲೆಡ್ ನೀಡಿರುವುದು ಹೆಗ್ಗಳಿಕೆ ಎಂದು ಕಂಪೆನಿ ಹೇಳಿಕೊಂಡಿದೆ.
ಫ್ಯಾಂಟಮ್ ಎಕ್ಸ್ ಮೊಬೈಲ್, 108 ಎಂಪಿ ಮತ್ತು, 50 ಎಂಪಿ + 13 ಎಂಪಿ + 8ಎಂಪಿ ಲೇಸರ್-ಫೋಕಸ್ಡ್ ಹಿಂಬದಿ ಕ್ಯಾಮರಾ ಹೊಂದಿದೆ. 48ಎಂಪಿ + 8 ಎಂಪಿ ಡುಯಲ್ ಸೆಲ್ಫೀ ಕ್ಯಾಮರಾ ಹೊಂದಿದೆ.
ಟ್ರಾನ್ಷನ್ ಇಂಡಿಯಾದ ಸಿಇಒ ಅರಿಜೀತ್ ತಲಪಾತ್ರ ಮಾತನಾಡಿ, “ಯುವ ಜನತೆಯನ್ನು ಗುರಿಯಾಗಿಸಿಕೊಂಡ ಬ್ರ್ಯಾಂಡ್ ಇದಾಗಿದ್ದು, ಯುವ ಸಮೂಹವನ್ನು ಗಮನದಲ್ಲಿಟ್ಟುಕೊಂಡು, ಫ್ಯಾಂಟಮ್ ಎಕ್ಸ್ ಅನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಈ ಸ್ಮಾರ್ಟ್‌ಫೋನ್ ಸುಸ್ಥಿರ ತಂತ್ರಜ್ಞಾನ ಆವಿಷ್ಕಾರಗಳ ಫಲಿತಾಂಶವಾಗಿದೆ.
ಫ್ಯಾಂಟಮ್ ಎಕ್ಸ್ಅನ್ನು ಅತ್ಯುನ್ನತ ಮಟ್ಟದ ತಂತ್ರಜ್ಞಾನ, ಅತ್ಯುತ್ತಮ ಬಳಕೆದಾರ ಅನುಭವ ಆಕರ್ಷಕ ವಿನ್ಯಾಸದ ಮೊಬೈಲ್ ಬಯಸುವ ವಿಭಿನ್ನ ಗ್ರಾಹಕರಿಗಾಗಿಯೇ ರಚಿಸಲಾಗಿದೆ ಎಂದರು.
ಇದನ್ನೂ ಓದಿ:ಫಾರ್ಮ್ ಹೌಸ್ ವಿವಾದ: ನಟ ಸಲ್ಮಾನ್ ಖಾನ್ ಬಳಿ 295 ಕೋಟಿ ರೂ. ವೆಚ್ಚ ಕೇಳಿದ ಎನ್‌ಆರ್‌ಐ
ಈ ಸ್ಮಾರ್ಟ್‌ಫೋನ್ ಇತ್ತೀಚೆಗೆ ಜಾಗತಿಕವಾಗಿ ಪ್ರಸಿದ್ಧವಾದ ಐಎಫ್ ಡಿಸೈನ್ ಅವಾರ್ಡ್ 2022 ಪಡೆದಿದೆ. ಈ ಪ್ರಶಸ್ತಿಯನ್ನು ʻಉತ್ಪನ್ನ ವಿನ್ಯಾಸಗಳ ಆಸ್ಕರ್ʼ ಅಂತಲೂ ಕರೆಯಲಾಗುತ್ತದೆ ಎಂದು ತಿಳಿಸಿದರು.
ಟೆಕ್ನೊ ಫ್ಯಾಂಟಮ್ ಎಕ್ಸ್‌ನ ವೈಶಿಷ್ಟ್ಯಗಳು:
6.7″ ಎಫ್ಎಚ್‌ಡಿ + ಎಎಂಒಎಲ್‌ಇಡಿ ಡಿಸ್ಪ್ಲೆ, 91% ಸ್ಕ್ರೀನ್ ಟು ಬಾಡಿ ರೇಷಿಯೊ, 90ಹರ್ಟ್ಜ್ ರಿಫ್ರೆಶ್ ರೇಟ್ ಹೊಂದಿದೆ. ಸ್ಮಾರ್ಟ್‌ಫೋನ್ ಎರಡೂ ಬದಿಗಳಲ್ಲಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಇದೆ.
ದೊಡ್ಡ ಡೇಟಾ ಸ್ಟೋರೇಜ್ ಮತ್ತು ಸೂಪರ್-ಫಾಸ್ಟ್ ಪ್ರೊಸೆಸಿಂಗ್‌ಗಾಗಿ 13gb RAM ಜೊತೆಗೆ 256gb ROM ಹೊಂದಿದೆ.
ಮೆಮೊರಿ ಕಾರ್ಡ್ ಮೂಲಕ ಸಂಗ್ರಹ ಸಾಮರ್ಥ್ಯವನ್ನು 512 ಜಿಬಿವರೆಗೆ ಹೆಚ್ಚಿಸಬಹುದು
ಮೀಡಿಯಾಟೆಕ್ ಹೀಲಿಯೋ ಜಿ95 ಪ್ರೊಸೆಸರ್ ಹೊಂದಿದ್ದು, 4700 ಎಂಎಎಚ್ ಬ್ಯಾಟರಿ ಇದ್ದು, ಬಾಕ್ಸ್‌ನೊಳಗೆ 33W ಫ್ಲ್ಯಾಶ್ ಚಾರ್ಜರ್ ಒಳಗೊಂಡಿದೆ.
ಮೇ 4 ರಿಂದ ಅಮೆಜಾನ್.ಇನ್ ನಲ್ಲಿ ಲಭ್ಯ. ಬೆಲೆ 25,999 ರೂ. ಜೊತೆಗೆ 2,999 ರೂ. ಮೊತ್ತದ ಉಚಿತ ಬ್ಲೂಟೂತ್ ಸ್ಪೀಕರ್ ಮತ್ತು ಒಂದು ಬಾರಿ ಸ್ಕ್ರೀನ್ ರಿಪ್ಲೇಸ್ಮೆಂಟ್ ಆಫರ್ ನೀಡಲಾಗಿದೆ.