Advertisement

ಫ್ಯಾಂಟಮ್ ಈಗ “ವಿಕ್ರಾಂತ್ ರೋಣ”: ಬುರ್ಜ್ ಖಲೀಫಾದಲ್ಲಿ ರಾರಾಜಿಸಲಿದೆ ಕಿಚ್ಚನ ಕಟೌಟ್

05:30 PM Jan 21, 2021 | Team Udayavani |

ಬೆಂಗಳೂರು: ಕನ್ನಡದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ನಿರ್ದೇಶಕ ಅನೂಪ್ ಭಂಡಾರಿ ಕಾಂಬಿನೇಷನಲ್ಲಿ ಮೂಡಿಬರುತ್ತಿರುವ ‘ಫ್ಯಾಂಟಮ್’ ಸಿನಿಮಾದ ಶೀರ್ಷಿಕೆಯನ್ನು ‘ವಿಕ್ರಾಂತ್ ರೋಣ’ ಎಂದು ಬದಲಾಯಿಸಿದೆ.

Advertisement

ಈ ಕುರಿತಾಗಿ ಟ್ವೀಟ್ ಮಾಡಿರುವ  ನಿರ್ದೇಶಕ ಅನೂಪ್ ಭಂಡಾರಿ ‘ಫ್ಯಾಂಟಮ್’ ಸಿನಿಮಾ ಹೊಸ ಶೀರ್ಷಿಕೆಯೊಂದಿಗೆ ತೆರೆಮೇಲೆ ಬರಲಿದ್ದು, ಮುಂಬರುವ ಜನವರಿ 31 ರಂದು ಪ್ರಪಂಚದ ಅತೀ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾ ದ ಮೇಲೆ ಚಿತ್ರದ ಹೊಸ ಶೀರ್ಷಿಕೆಯ ಲೋಗೋ ವನ್ನು ಬಿಡುಗಡೆಗೊಳಿಸಲಾಗುವುದು ಎಂದಿದ್ದಾರೆ.

ಸಿನಿಮಾದ ಶೀರ್ಷಿಕೆ ಬದಲಾಗುವ ಕುರಿತಾಗಿ ಈ ಹಿಂದೆಯೇ ಹಲವಾರು ಗಾಳಿ ಸುದ್ದಿಗಳು ಹರಿದಾಡಿದ್ದು, ಇದಕ್ಕೆ ಪೂರಕವಾಗುವಂತೆ ನಿರ್ದೇಶಕ ಅನೂಪ್ ಕೂಡಾ ಟ್ಟೀಟ್ ಸಂದೇಶ ಕಳುಹಿಸುವ ಮೂಲಕ ಜನವರಿ 21 ರಂದು ಚಿತ್ರಕ್ಕೆ ಸಂಬಂಧಿಸಿದಂತೆ ಬಿಗ್ ಅಪ್ ಡೇಟ್ ನೀಡಲಿದ್ದೇವೆ ಎಂದಿದ್ದರು. ಆ ಬಿಗ್ ಅಪ್ ಡೇಟ್ ಶೀರ್ಷಿಕೆ ಬದಲಾವಣೆಯೇ ಇರಬಹುದಾ ಅಥವಾ ಬೇರೆ ಏನಾದರೂ ಇರಬಹುದಾ ಎಂಬ ಹಲವು  ಪ್ರಶ್ನೆಗಳು ಸಿನಿ ಪ್ರಿಯರಲ್ಲಿ ಮೂಡಿದ್ದು, ಇದೀಗ ಆ ಎಲ್ಲಾ ಪ್ರಶ್ನೆಗಳಿಗೆ ಚಿತ್ರತಂಡ ತೆರೆ ಎಳೆದಿದೆ.

ಇದನ್ನೂ ಓದಿ:‘ಪರಾಕ್ರಂ ದಿವಸ್’ ಆಚರಣೆಗೆ ಮೋದಿ ಕೋಲ್ಕತ್ತಾಗೆ ಭೇಟಿ ಖಚಿತ : ಪಿಎಮ್ಒ

ಈ ಕುರಿತಾಗಿ ನಟ ಸುದೀಪ್ ಕೂಡಾ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಮಾತನಾಡಿದ್ದು, ಚಿತ್ರದ ಪ್ರಮುಖ ಪ್ರಾತ್ರವಾಗಿರುವ ವಿಕ್ರಾಂತ್ ರೋಣ ಎಂಬ ಹೆಸರನ್ನೆ ಚಿತ್ರದ ಶೀರ್ಷಿಕೆಯನ್ನಾಗಿಸುವ ಕುರಿತು ಸುಳಿವು ನೀಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next