Advertisement
ಮಳವೂರು, ಬಜಪೆ, ಪೆರ್ಮುದೆ, ಎಕ್ಕಾರು, ಸೂರಿಂಜೆ, ಬಾಳ, ಜೋಕಟ್ಟೆ, ಮೂಡು ಶೆಡ್ಡೆ ಗ್ರಾಮ ಪಂಚಾಯತ್ ವ್ಯಾಪ್ತಿಯ 13 ಗ್ರಾಮ ಹಾಗೂ ಕಂದಾವರ ಗ್ರಾಮದ ಸೌಹಾರ್ದ ನಗರದ ಒಟ್ಟು 76 ಸಾವಿರ ಜನರು ಈಗ ಇದೇ ನೀರನ್ನು ಅವಲಂಭಿಸಿದ್ದಾರೆ.
Related Articles
Advertisement
7 ಓವರ್ ಹೆಡ್ ಟ್ಯಾಂಕ್ ಪೆರ್ಮುದೆ ಗ್ರಾ.ಪಂ. ವ್ಯಾಪ್ತಿ ಯಲ್ಲಿ 12 ಕೊಳವೆ ಬಾವಿಗಳಿದ್ದು, 7 ಓವರ್ ಹೆಡ್ ಟ್ಯಾಂಕ್ ಗಳಿವೆ. 1 ಸರಕಾರಿ ಬಾವಿ, 9 ಹ್ಯಾಂಡ್ ಕೊಳವೆ ಬಾವಿಗಳಿವೆ. ಪೆರ್ಮುದೆ ಪೇಟೆ, ನಿಡ್ಡೇಲ್, ಭ್ರಟಕೆರೆ, ಪೆರ್ಮುದೆ ಪದವು, ಮೆಣYಲ್, ಕುತ್ತೆತ್ತೂರು, ಮೆಣಸು ಕಾಡು, ಅದರ್ಶನಗರಕ್ಕೆ ಮಳವೂರು ಡ್ಯಾಂನ ನೀರು ಸರಬರಾಜು ಆಗುತ್ತಿದೆ. ಎಕ್ಕಾರು ಗ್ರಾ.ಪಂ.ವ್ಯಾಪ್ತಿಯಲ್ಲಿ 15 ಕೊಳವೆ ಬಾವಿಗಳಿದ್ದು, ಇದರಲ್ಲಿ ಎರಡು ಉಪಯೋಗವಾಗುತ್ತಿಲ್ಲ. 2 ತೆರೆದ ಬಾವಿ,6 ಓವರ್ ಹೆಡ್ ಟ್ಯಾಂಕ್‌ನಲ್ಲಿ 5 ಉಪ ಯೋಗವಾಗುತ್ತಿದೆ.ತೆಂಕ ಎಕ್ಕಾರು ಹೆಚ್ಚಿನ ಪ್ರದೇಶ ಹಾಗೂ ಬಡಗ ಎಕ್ಕಾರಿನ ಕೆಲವು ಪ್ರದೇಶಗಳಲ್ಲಿ ಮಳವೂರು ವೆಂಟೆಡ್ ಡ್ಯಾಂ ನೀರೇ ಆಶ್ರಯವಾಗಿದೆ. 11 ಕೊಳವೆ ಬಾವಿ
ಜೋಕಟ್ಟೆ ಗ್ರಾ.ಪಂ.ವ್ಯಾಪ್ತಿಯಲ್ಲಿ 11 ಕೊಳವೆ ಬಾವಿಗಳಿದ್ದು,3 ಕೊಳವೆ ಬಾವಿ ಗಳಲ್ಲಿ ನೀರು ಕಡಿಮೆಯಾಗಿದೆ. 5 ಓವರ್ ಹೆಡ್ ಟ್ಯಾಂಕ್‌ಗಳಿವೆ. ಎಂ.ಪಿ. ರೋಡ್,ಅರಿಕೆರೆ,ಪಂಚಾಯತ ಗುಡ್ಡೆ, ಬೊಟ್ಟು ಮನೆ,ನಡುಮನೆ,ಸಿಡಿಗುರಿ,ಮೈಂದ ಗುರಿ ಪ್ರದೇಶಗಳಿಗೆ ಮಳವೂರು ಡ್ಯಾಂನ ನೀರು ಸರಬರಾಜು ಆಗುತ್ತಿದೆ. ಬಾಳ ಗ್ರಾ.ಪಂ.ವ್ಯಾಪ್ತಿಯಲ್ಲಿ 9 ಕೊಳವೆ ಬಾವಿಗಳಿದ್ದು, 2ರಲ್ಲಿ ನೀರು ಕಡಿಮೆಯಾಗಿದೆ.3 ತೆರೆದ ಬಾವಿ ಇದೆ. 4 ಓವರ್ ಹೆಡ್ ಟ್ಯಾಂಕ್‌ಗಳಿವೆ. ಮಂಗಳಪೇಟೆ ಹೊಟ್ಟೆ ಕಾಯರ್, ಬಾಳ ಪದವು, ಕಳವಾರು ಅಶ್ರಯ ಕಾಲನಿ, ಕುರ್ಸು ಗುಡ್ಡೆ ಕಾಪಿಕಾಡು ಗುಡ್ಡೆ ಪ್ರದೇಶಗಳಿಗೆ ಮಳ ವೂರು ಡ್ಯಾಂ ನೀರು ಸರಬರಾಜು ಆಗುತ್ತಿದೆ. ಮೂಡುಶೆಡ್ಡೆ ಗ್ರಾ.ಪಂ. ವ್ಯಾಪ್ತಿಯಲ್ಲಿ 6 ಕೊಳವೆ ಬಾವಿ, 3 ತೆರೆದ ಬಾವಿಗಳಿವೆ. ಒಟ್ಟು 6 ಓವರ್ ಹೆಡ್ ಟ್ಯಾಂಕ್‌ಗಳಿವೆ. ಶಿವನಗರ ಹಾಗೂ ಮಹಾದೇವಿ ಮಂದಿರದ ಪ್ರದೇಶಗಳಿಗೆ ಮಳವೂರು ಡ್ಯಾಂ ನೀರು ಸರಬರಾಜು ಆಗುತ್ತಿದೆ. ಸೂರಿಂಜೆ ಗ್ರಾ.ಪಂ.ನಲ್ಲಿ ಕುಡಿಯುವ ನೀರಿಗಾಗಿ 2 ಕೊಳವೆ ಬಾವಿ. 3 ತೆರೆದ ಬಾವಿ,4 ಓವರ್ ಹೆಡ್ ಟ್ಯಾಂಕ್‌ಗಳಿವೆ. ಸೂರಿಂಜೆ, ಕೋಟೆ ಹಾಗೂ ದೇಲಂತ ಬೆಟ್ಟು ಪ್ರದೇಶಗಳಿಗೆ ಹಾಗೂ ಕಂದಾವರ ಗ್ರಾ.ಪಂ.ನ ಸೌಹಾರ್ದನಗರ ಪ್ರದೇಶಗಳಿಗೆ ಮಳವೂರು ವೆಂಟೆಡ್ ಡ್ಯಾಂ ನೀರು ಸರಬರಾಜು ಆಗುತ್ತಿದೆ. ಶುದ್ಧ ನೀರು
ಮಳವೂರು ವೆಂಟೆಡ್ ಡ್ಯಾಂ ನೀರು ಸರಬರಾಜಿನಿಂದಾಗಿ ಈ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಂತರ್ಜಲ ವೃದ್ಧಿಯ ಮೂಲಕ ಇತರೆಡೆ ಕಾಣಿಸಿದಷ್ಟು ಕೊಳವೆ ಬಾವಿ, ಬಾವಿಗಳಲ್ಲಿ ನೀರು ಕಡಿಮೆಯಾಗಿಲ್ಲ. ಕೊಳವೆ ಬಾವಿಗಿಂತ ಶುದ್ಧ ನೀರು ಈ ಪ್ರದೇಶಗಳಿಗೆ ಸಿಕ್ಕಿದೆ.ಒಟ್ಟಿನಲ್ಲಿ ಈ ಪ್ರದೇಶಗಳಿಗೆ ಪಲ್ಗುಣಿ ನದಿ ಜೀವನದಿಯಾಗಿದೆ. ನೀರು ಪೋಲಾಗದಂತೆ ಸೂಚನೆ
ಬಜಪೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗಾಗಿ 35 ಕೊಳವೆ ಬಾವಿಗಳಲ್ಲಿದ್ದು, 5ರಲ್ಲಿ ನೀರು ಕಡಿಮೆಯಾಗಿದೆ. 10 ಓವರ್ ಹೆಡ್ ಟ್ಯಾಂಕ್‌ಗಳಿದ್ದು, ಇಲ್ಲಿ 2 ದಿನಕ್ಕೊಮ್ಮೆ ನೀರು ಸರಬರಾಜಾಗುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಇತರ ಪ್ರದೇಶಗಳಿಗೆ ಮಳವೂರು ಡ್ಯಾಂನ ನೀರು ಸರಬರಾಜು ಆಗುತ್ತಿದೆ. ಈಗಾಗಲೇ ಗ್ರಾಮ ಪಂಚಾಯತ್ 6 ಪಂಪ್ ಅಪರೇಟರ್‌ಗಳಿಗೆ ನೀರು ಪೋಲಾಗದಂತೆ ನೋಡಿ ಕೊಳ್ಳಲು ಸೂಚಿಸಿದೆ. ನೀರಿನ ಬಳಕೆ ಕಡಿಮೆ
ಮಳವೂರು ವೆಂಟೆಡ್ ಡ್ಯಾಂ ನಿರ್ಮಾಣದ ಬಳಿಕ ಈ ಪರಿಸರದಲ್ಲಿ ಅಂತರ್ಜಲ ವೃದ್ಧಿಯಾಗಿದೆ. ಈ ಹಿಂದೆ ನದಿ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತಿತ್ತು. ಆದರೆ ಡ್ಯಾಂ ನಿರ್ಮಾಣದ ಬಳಿಕ ನೀರಿನ ಸದ್ಬಳಕೆಯಾಗುತ್ತಿದೆ. ಇದರಿಂದಾಗಿ ಕೊಳವೆ ಬಾವಿಗಳ ನೀರಿನ ಬಳಕೆಯೂ ಕಡಿಮೆಯಾಗಿದೆ. ನೀರಿನ ಸಮಸ್ಯೆ ಇಲ್ಲ
ಮಳವೂರು ವೆಂಟೆಡ್ ಡ್ಯಾಂನ ನೀರು ಇಲ್ಲದೇ ಇರುತ್ತಿದ್ದರೆ ಈ ಬಾರಿ ಜನವರಿ – ಫೆಬ್ರವರಿಯಲ್ಲೇ ನೀರಿನ ಸಮಸ್ಯೆ ಬರು ತ್ತಿತ್ತು. ಈ ಭಾಗದಲ್ಲಿ ಈಗ 450 ಅಡಿ ಆಳವಿರುವ ಕೊಳವೆ ಬಾವಿಗಳು ಮಾತ್ರ ಉಪಯೋಗವಾಗುತ್ತಿದೆ.ಉಳಿದವು ನೀರಿಲ್ಲದೆ ಬತ್ತಿ ಹೋಗಿವೆ. ಮಳವೂರು ಡ್ಯಾಂನ ನೀರು ನಿರಂತರವಾಗಿದ್ದು ಹೆಚ್ಚು ಶುದ್ಧವಾಗಿದೆ.ಗ್ರಾ.ಪಂ.ನ ಹೆಚ್ಚಿನ ಭಾಗಗಳಿಗೆ ಸರಬರಾಜಾಗುತ್ತಿದೆ.ಕೆಲವೆಡೆ ಪೈಪ್‌ಲೈನ್‌ಗಳಾಗದೆ ಇರುವುದರಿಂದ ಕೊಳವೆ ಬಾವಿ ನೀರು ಸರಬರಾಜು ಮಾಡಲಾಗುತ್ತದೆ.ಇದರಿಂದ ಈ ಭಾಗದಲ್ಲಿ ಹೆಚ್ಚಿನ ನೀರಿನ ಸಮಸ್ಯೆ ಈ ಬಾರಿ ಕಾಣಿಸಿಕೊಂಡಿಲ್ಲ.
– ಸುರೇಶ್ ಶೆಟ್ಟಿ,
ಅಧ್ಯಕ್ಷರು,ಎಕ್ಕಾರು ಗ್ರಾ.ಪಂ.