Advertisement
ಅಳಿವೆಬಾಗಿಲು ಮುಖೇನ ಕಡಲಿಗೆ ಮೀನುಗಾರಿಕಾ ಬೋಟ್‌ಗಳ ಸಂಚಾರ ಹಾಗೂ ಮೀನುಗಾರಿಕೆ ಬಂದರ್‌ನಿಂದ ಬೆಂಗ್ರೆ ಹಾಗೂ ಹಳೆಯ ಬಂದರ್‌ನಿಂದ ಕಸ್ಬಾ ಬೆಂಗ್ರೆಗೆ ಸಂಚರಿಸುವ ಫೆರ್ರಿ (ಪ್ರಯಾಣಿಕ ಬೋಟು)ಸಂಚಾರಕ್ಕೂ ಸಂಚಕಾರ ತಂದಿದೆ.
ಫಲ್ಗುಣಿ ನದಿಯು ಸಮುದ್ರ ಸೇರುವ ಅಳಿವೆಬಾಗಿಲು ವ್ಯಾಪ್ತಿಯಲ್ಲಿ ಈ ಹಿಂದೆ ಕೆಲವು ಬೋಟ್‌ಗಳು ಮುಳುಗಿದ್ದು, ಅದರ ಪಳೆಯುಳಿಕೆಯನ್ನು ಇನ್ನೂ ತೆರವು ಮಾಡದ ಕಾರಣದಿಂದ ಬೋಟ್‌ಗಳ ಸುಗಮ ಸಂಚಾರಕ್ಕೆ ಸಂಕಷ್ಟ ಎದುರಾಗಿದೆ. ಕೆಲವು ವರ್ಷಗಳಲ್ಲಿ ಈ ಭಾಗದಲ್ಲಿ ಬೋಟ್ ಅವಘಡ ನಡೆದು ಉಳಿದ ಅವುಗಳ ಅವಶೇಷ ವನ್ನು ತೆರವು ಮಾಡುವ ಕಾರ್ಯಕ್ಕೆ ಮೀನು ಗಾರಿಕೆ ಇಲಾಖೆ ಹಾಗೂ ಬೋಟ್ ಮಾಲಕರು ಮನಸ್ಸು ಮಾಡಿಲ್ಲ.
Related Articles
ಮುಳುಗಿರುವ ಬೋಟ್‌ನ ಕೆಲವು ಭಾಗ ನೀರಿನಲ್ಲಿ ಕಾಣಿಸುತ್ತಿರುವ ಪರಿಣಾಮ ಫೆರ್ರಿ ಬೋಟ್, ಮೀನುಗಾರಿಕೆ ಬೋಟ್‌ನವರು ಈ ಸ್ಥಳವನ್ನು ತಪ್ಪಿಸಿಕೊಂಡು ಸಂಚರಿಸುತ್ತಿದ್ದಾರೆ. ಆದರೆ ಬೋಟ್ ಅವಶೇಷ ನೀರಿನಲ್ಲಿ ಇನ್ನಷ್ಟು ಆಳಕ್ಕೆ ಹೋದರೆ ಬೋಟ್‌ಗಳ ಸಂಚಾರಕ್ಕೆ ಬಹುದೊಡ್ಡ ಸಮಸ್ಯೆ ಎದುರಾಗಬಹುದು. ಇದನ್ನು ಮೀನುಗಾರಿಕೆ ಇಲಾಖೆ ಗಂಭೀರವಾಗಿ ಪರಿಗಣಿಸುವಂತೆ ಮೀನುಗಾರ ಮುಖಂಡರು ಆಗ್ರಹಿಸಿದ್ದಾರೆ.
Advertisement
ಎಚ್ಚರ ತಪ್ಪಿದರೆ ಅಪಾಯ!ಅಳಿವೆಬಾಗಿಲಿನಲ್ಲಿಯೂ ಇಂತಹುದೇ ಸಮಸ್ಯೆ ಇದೆ. ವಿಶೇಷವೆಂದರೆ ಇಲ್ಲಿ ಈ ಹಿಂದೆ ಅಪಘಾತಕ್ಕೀಡಾದ ಬೋಟ್‌ನ ಅವಶೇಷ ನೀರೊಳಗೆ ಸೇರಿದೆ. ರಾತ್ರಿ ವೇಳೆ ಯಲ್ಲಂತು ಬೋಟ್‌ಗಳು ಇಲ್ಲಿ ಸಂಚರಿಸುವುದರಿಂದ ಮುಳುಗಿರುವ ಬೋಟ್ ಗೊತ್ತೇ ಆಗುವುದಿಲ್ಲ. ಹೀಗಾಗಿ ಅತ್ಯಂತ ಎಚ್ಚರಿಕೆ ವಹಿಸಿಕೊಂಡು ಬೋಟ್ ಚಲಾಯಿಸಲಾಗುತ್ತಿದೆ. ಬೋಟ್‌ಗಳನ್ನು ತೆರವುಗೊಳಿಸದಿರಲು ಕಾರಣ?
ಕಡಲಿನಲ್ಲಿ ಭಾಗಶಃ ಮುಳುಗಡೆಯಾದ ಅಥವಾ ಅಪಾಯದಲ್ಲಿದ್ದ ಕೆಲವು ಬೋಟನ್ನು ಇತರ ಬೋಟ್‌ನವರು ಎಳೆದುಕೊಂಡು ಅಳಿವೆಬಾಗಿಲು ಮೂಲಕ ತೀರಕ್ಕೆ ತಂದ ಸಂದರ್ಭ ನೀರಲ್ಲೇ ಅವಶೇಷ ಬಾಕಿಯಾದ ಪ್ರಸಂಗವೂ ನಡೆದಿದೆ. ಮುಳುಗಡೆಯಾದ ಬೋಟ್ ತೆರವು ಮಾಡುವುದು ಮೀನುಗಾರಿಕೆ ಇಲಾಖೆಯ ಪ್ರಕಾರ ಬೋಟ್ ಮಾಲಕರ ಕರ್ತವ್ಯ. ಬೋಟುಗಳಿಗೆ ಹಾನಿಯಾದರೆ ಅದರ ನಿರ್ವಹಣೆಗಾಗಿ ವಿಮೆ ಮಾಡಲಾಗುತ್ತದೆ. ಆದರೆ ಕೆಲವೊಂದು ಕಾರಣಗಳನ್ನು ನೀಡಿ ವಿಮಾದಾರರು-ಬೋಟು ಮಾಲಕರ ಮಧ್ಯೆ ಸಮಸ್ಯೆ ಉಂಟಾಗುತ್ತಲೇ ಇರುತ್ತದೆ. ಹೀಗಾಗಿ ಹಣ ದೊರೆಯದೆ ಬೋಟು ಮಾಲಕರಿಗೆ ಮುಳುಗಡೆಯಾಗುವ ಬೋಟನ್ನು ತೆಗೆಯಲು ಸಾಧ್ಯವಾಗುತ್ತಿಲ್ಲ.