Advertisement

ರೂಪಾಂತರಿ ಸೋಂಕಿಗೆ ಫೈಜರ್‌ ಪರಿಣಾಮಕಾರಿ

11:53 PM May 27, 2021 | Team Udayavani |

ಹೊಸದಿಲ್ಲಿ: ದೇಶದಲ್ಲಿ ಸೋಂಕಿನ 2ನೇ ಅಲೆ ಹೆಚ್ಚಲು ಕಾರಣವಾಗಿದೆ ಎಂದು ನಂಬಲಾಗಿರುವ ಬಿ.1.617.2 ರೂಪಾಂತರಿ ಸೋಂಕಿನ ವಿರುದ್ಧ ಹೆಚ್ಚು ಪರಿಣಾಮಕಾರಿಯಾಗಿ ತನ್ನ ಲಸಿಕೆ ಕೆಲಸ ಮಾಡುತ್ತದೆ ಎಂದು ಫೈಜರ್‌ ಹೇಳಿಕೊಂಡಿದೆ. ಈ ಬಗ್ಗೆ ಅದು ಕೇಂದ್ರ ಸರಕಾರಕ್ಕೆ ಮನವರಿಕೆ ಮಾಡಿಕೊಟ್ಟಿದೆ. ಜತೆಗೆ 12 ವರ್ಷ ಮೇಲ್ಪಟ್ಟವರಿಗೆ ಕೂಡಾ ಅದು ಪರಿಣಾಮಕಾರಿ ಫ‌ಲಿತಾಂಶ ತೋರಿಸಿದೆ ಎಂದು ತಿಳಿಸಿದೆ. 2ರಿಂದ 8 ಡಿ.ಸೆ. ತಾಪಮಾನದಲ್ಲಿ ಒಂದು ತಿಂಗಳ ಕಾಲ ಸಂಗ್ರಹಿಸಿ ಇರಿಸಲು ಅವಕಾಶ ಇದೆ ಎಂದೂ ಫೈಜರ್‌ ಕಂಪೆನಿ ವಿವರಿಸಿದೆ.

Advertisement

ಅನುಮತಿ ನೀಡಿದಲ್ಲಿ ಜುಲೈಯಿಂದ ಡಿಸೆಂಬರ್‌ ಅವಧಿಯಲ್ಲಿ 5 ಕೋಟಿ ಡೋಸ್‌ ಲಸಿಕೆ ಉತ್ಪಾದಿಸಲು ಸಾಧ್ಯ. ಅದಕ್ಕಿಂತ ಮೊದಲು ಪ್ರತಿಕೂಲ ಪರಿಣಾಮಗಳ ವಿರುದ್ಧ ಯಾವುದೇ ರೀತಿಯಲ್ಲಿ ಪರಿಹಾರ ಕೋರಿ ಸಲ್ಲಿಕೆಯಾಗುವ ದೂರು- ಮೊಕದ್ದಮೆಗಳಿಂದ ವಿನಾಯಿತಿ ನೀಡಬೇಕು ಎಂದು ಕೋರಿದೆ. ಈ ಬಗ್ಗೆ 2 ಸುತ್ತಿನ ಮಾತುಕತೆ ನಡೆದರೂ, ಸಹಮತಕ್ಕೆ ಬರಲಾಗಿಲ್ಲ.

ಶೀಘ್ರ ಸಿಗಲಿದೆ ಸ್ಪುಟ್ನಿಕ್‌ ಲಸಿಕೆ: ರಷ್ಯಾ ಅಭಿವೃದ್ಧಿಪಡಿಸಿರುವ ಸ್ಪುಟ್ನಿಕ್‌ ಲೈಟ್‌ ಸಿಂಗಲ್‌ ಡೋಸ್‌ ಲಸಿಕೆ ಶೀಘ್ರವೇ ದೇಶದಲ್ಲಿ ಲಭ್ಯವಾಗುವ ಸಾಧ್ಯತೆ ಇದೆ. ಸ್ಪುಟ್ನಿಕ್‌ ಲಸಿಕೆಯನ್ನು ಭಾರತದಲ್ಲಿ ಉತ್ಪಾದಿಸುವ ಸಂಸ್ಥೆಗಳಿಗೆ ಕ್ಷಿಪ್ರವಾಗಿ ಭಾರತದ ಔಷಧ ನಿಯಂತ್ರಣ ಮಹಾನಿರ್ದೇಶಕ (ಡಿಜಿಸಿಐ)ರಿಗೆ ಅಂಗೀಕಾರ ಪಡೆಯುವ ಬಗ್ಗೆ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಲಾಗಿದೆ. ಹೀಗಾಗಿ, ಮುಂದಿನ ಕೆಲವು ವಾರಗಳಲ್ಲಿ ಈ ಪ್ರಕ್ರಿಯೆ ಮುಕ್ತಾಯವಾಗಿ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next