ಹೊಸದಿಲ್ಲಿ: “ಭಾರತದಲ್ಲಿ ಇಸ್ಲಾಮಿಕ್ ಆಡಳಿ ತವನ್ನು ಜಾರಿ ಮಾಡುವ, ಮುಸ್ಲಿಮರನ್ನು ತೀವ್ರಗಾಮಿಗಳಾಗಿ ಬದಲಾಯಿಸುವ ಮತ್ತು ಮುಸ್ಲಿಮರು ಮತ್ತು ಇತರ ಸಮುದಾಯಗಳ ನಡುವಿನ ವಿಚಾರಗಳಿಗೆ ಕೋಮು ಬಣ್ಣ ನೀಡುವ ಹಿಡನ್ ಅಜೆಂಡಾವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ) ಹೊಂದಿದೆ.’
ಹೀಗೆಂದು ದೇಶದ ವಿವಿಧ ತನಿಖಾ ಮತ್ತು ಗುಪ್ತಚರ ಸಂಸ್ಥೆಗಳು ಕೇಂದ್ರ ಸರಕಾರಕ್ಕೆ ಮಾಹಿತಿ ನೀಡಿರುವುದಾಗಿ “ನ್ಯೂಸ್ 18′ ಆಂಗ್ಲ ಸುದ್ದಿವಾಹಿನಿ ವರದಿ ಮಾಡಿದೆ.
ವಿವಾದಿತ ಪಿಎಫ್ಐ ಸಂಘಟನೆ ಬಗ್ಗೆ ವಿವರ ನೀಡುವಂತೆ ಎಲ್ಲ ತನಿಖಾ, ಗುಪ್ತಚರ ಸಂಸ್ಥೆಗಳಿಗೆ ಕಳೆದ ತಿಂಗಳೇ ಕೇಂದ್ರ ಸರಕಾರ ಸೂಚಿಸಿತ್ತು. ಅದರಂತೆ, 2017ರಿಂದ 2022ರ ವರೆಗಿನ ವಿವಿಧ ಗುಪ್ತಚರ ವರದಿಗಳು, ಕೋರ್ಟ್ ತೀರ್ಪುಗಳು, ರಾಜ್ಯಗಳ ತನಿಖಾ ವರದಿಗಳನ್ನು ಸಂಗ್ರಹಿಸಿ ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗಿತ್ತು.
ಈ ವರದಿಯನ್ನು ಪಿಎಫ್ಐ ಸಿದ್ಧಾಂತ, ಜಾಗತಿಕ ಉಗ್ರ ಸಂಘಟನೆಗಳೊಂದಿಗೆ ನಂಟು, ತೀವ್ರಗಾಮಿ ಚಟುವಟಿಕೆಗಳು, ಹಣಕಾಸು, ಕೇಸುಗಳು ಸೇರಿದಂತೆ 11 ಭಾಗಗಳಾಗಿ ವಿಂಗಡಿಸಲಾಗಿದೆ. ಪಿಎಫ್ಐ ದೇಶ ವಿರೋಧಿ ಹಾಗೂ ಕೋಮು ಅಜೆಂಡಾವನ್ನು ಹೊಂದಿದ್ದು, ದೇಶಾದ್ಯಂತ ಹಿಂಸಾಚಾರ, ತೀವ್ರಗಾಮಿ ಚಟುವಟಿಕೆಗಳಲ್ಲಿ ಭಾಗಿ ಯಾಗಿದೆ. ಹಿಂದೂ ಸಂಘ ಟನೆಗಳ ಕಾರ್ಯಕರ್ತರ ಕೊಲೆಯಲ್ಲೂ ಇದರ ಸದಸ್ಯರು ಭಾಗಿಯಾಗಿದ್ದಾರೆ. ಪಿಎಫ್ಐ ನಿಷೇಧಿತ ಸಿಮಿ ಸಂಘಟನೆಯ ಮತ್ತೂಂದು ಮುಖ ಎಂದೂ ವರದಿಯಲ್ಲಿ ಉಲ್ಲೇಖೀಸಿರುವಾಗಿ “ನ್ಯೂಸ್ 18′ ವರದಿ ಹೇಳಿದೆ.