Advertisement

ನಾಯಕರ ನಡುವಿನ ಸಣ್ಣಪುಟ್ಟ ಅಸಮಾಧಾನಗಳು ಶೀಘ್ರದಲ್ಲೇ ಇತ್ಯರ್ಥ: ಕೃಷ್ಣ ಬೈರೇಗೌಡ

01:05 PM Jul 31, 2023 | Team Udayavani |

ಕಲಬುರಗಿ: ನಮ್ಮ ತಂಡದ ನಾಯಕರುಗಳ ನಡುವೆ ಇರುವ ಸಣ್ಣಪುಟ್ಟ ಅಸಮಾಧಾನಗಳಿಗೆ  ಶೀಘ್ರದಲ್ಲೇ ಇತ್ಯರ್ಥಗೊಳ್ಳಲಿದೆ ಎಂದು ರಾಜ್ಯದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

Advertisement

ಕಂದಾಯ ಇಲಾಖೆಯ ವಿಭಾಗ ಮಟ್ಟದ ಪ್ರಗತಿ ಪರಶೀಲನಾ ಸಭೆಗೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಜನಪ್ರಿಯ ಯೋಜನೆ ಅತ್ಯಂತ ಯಶಸ್ವಿ ಅಗುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದವರು ಹತಾಶರಾಗಿದ್ದಾರೆ. ಹೀಗಾಗಿ ಗುಲ್ಲೆಬ್ಬಿಸುತ್ತಿದ್ದಾರೆ. ಬಿಜೆಪಿಯವರು ತಮ್ಮ ಮನೆಯ ಹುಳುಕನ್ನು ಮುಚ್ಚಿಕೊಳ್ಳಲು ರಾಜಕೀಯ ಬೆರೆಸುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ವಾಗ್ದಾಳಿ ನಡೆಸಿದರು.

ವಿಧಾನಸಭಾ ಚುನಾವಣೆ ಮುಗಿದು ಎರಡು ತಿಂಗಳಾದರೂ ವಿಧಾನಸಭೆ, ಪರಿಷತನಲ್ಲಿ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಿಕೊಳ್ಳಲು ಆಗದವರು, ಅವರ ಮನೆಯ ಹುಳುಕನ್ನು ಮುಚ್ಚಿಕೊಳ್ಳಲು ಸರ್ಕಾರದ ವಿರುದ್ದ ಪ್ರಚಾರಕ್ಕೆ ಮುಂದಾಗಿದ್ದಾರೆ ಎಂದು ಟೀಕಿಸಿದರು.

ವಿಧಾನಸಭೆಯಲ್ಲಿ ಹಾಗೂ ವಿಧಾನ ಪರಿಷತ್ ನಲ್ಲಿ ವಿಪಕ್ಷ ನಾಯಕ ಯಾರೆಂದು ಜನ ಕೇಳುವುದಕ್ಕೆ ಮುಂದಾಗಿದ್ದು, ಬಜೆಟ್ ಪಾಸ್ ಆದರೂ ಕೂಡ ವಿರೋಧ ಪಕ್ಷದ ನಾಯಕನ ಆಯ್ಕೆಯಾಗದೇ ಇರುವುದು ಕರ್ನಾಟಕ ವಿಧಾನಸಭಾ ಇತಿಹಾಸದಲ್ಲಿ ಇದೊಂದು ಕಪ್ಪು ಚುಕ್ಕಿ ಹಾಗೂ ಅವಮಾನ ಎಂದು ಸಚಿವ ಬೈರೇಗೌಡ ತಿವಿದರು.

ಶಾಸಕಾಂಗ ಸಭೆಯಲ್ಲಿ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ಕ್ಷಮೆ ಕೇಳಿದ್ದಾರೆ ಎಂಬ ಮಾತಿಗೆ ಪ್ರತಿಕ್ರಿಯೆ ನೀಡಿದ ಅವರು, ಬಿ.ಆರ್.ಪಾಟೀಲ್ ಕ್ಷಮೆ ಕೇಳಿದ್ದಾರೆಂದು ನಾವು ಯಾರು ಸಹ ಹೇಳಿಲ್ಲ. ಅವರ ಮನಸ್ಸಿಗೆ ನೋವಾಗಿದ್ದು,ಅದನ್ನು ಪಕ್ಷದ ವೇದಿಕೆಯಲ್ಲಿ ಬಗೆಹರಿಸುತ್ತೇವೆ. ನಮ್ಮ ವೈಯಕ್ತಿಕ ವಿಚಾರಗಳನ್ನು ಬದಿಗಿಟ್ಟು, ಜನರ ಕೆಲಸ ಮಾಡಬೇಕಿದೆ. ಜನರ ಕೆಲಸವೇ ಮುಖ್ಯ ಹೊರತು ನಮ್ಮ ವೈಯಕ್ತಿಕ ವಿಚಾರವಲ್ಲ ಎಂದು ಹೇಳಿದರು.

Advertisement

ಇದನ್ನೂ ಓದಿ:ಗುಂಪಿನಿಂದ ಬೇರ್ಪಟ್ಟ ಮರಿ ಆನೆ; ತಾಯಿಯನ್ನು ಕಾಣದೆ, ದಿಕ್ಕುತೋಚದೆ ಕಾಫಿತೋಟದೆಲ್ಲೆಡೆ ಓಡಾಟ

ಅಭಿವೃದ್ಧಿ ವಿಚಾರಕ್ಕೆ ನಾವು ಕೇಳಿದಷ್ಟು ಹಣ ನಮಗೆ ಸಿಗುವುದಿಲ್ಲ. ಯಾರೂ ಪರಿಪೂರ್ಣರಲ್ಲ. ಹಾಗಂತ ಒಳ್ಳೆಯ ಆಡಳಿತ ಕೊಡುವಲ್ಲಿ ನಮ್ಮ ಗುರಿಯನ್ನು ಮರೆಯಬಾರದು. ನಮ್ಮ ತಂಡದ ನಾಯಕರ ನೇತೃತ್ವದಲ್ಲಿ ಸಣ್ಣ ಪುಟ್ಟ ವೈಮನಸ್ಸು ಇದ್ದಲ್ಲಿ ಅದನ್ನು ಬಗೆಹರಿಸುವ ಭರವಸೆ ನೀಡಿದರು.

ಇನ್ನೂ ಗೃಹಲಕ್ಷ್ಮಿ ಯೋಜನೆಯ ಪ್ರಜಾ ಪ್ರತಿನಿಧಿಗಳು ನೇಮಕ ಆಗದ ವಿಚಾರವಾಗಿ ಮಾತನಾಡಿದ ಅವರು, ಗೃಹಲಕ್ಷ್ಮಿ ಅನುಷ್ಠಾನಕ್ಕೆ ಪ್ರಜಾ ಪ್ರತಿನಿಧಿಗಳು ಕಡ್ಡಾಯವಿಲ್ಲ. ನನಗೆ ಮಾಹಿತಿ ಇರುವ ಪ್ರಕಾರ 80 ಲಕ್ಷ ಜನ ನೋಂದಣಿ ಮಾಡಿಕೊಂಡಿದ್ದು, ಮುಂದಿನ ಕೆಲ ದಿನಗಳಲ್ಲಿ ಪೂರ್ತಿಯಾಗಿ 1 ಕೋಟಿ 28 ಲಕ್ಷ ಕುಟುಂಬಗಳ ನೋಂದಣಿ ಆಗಲಿವೆ. ನಾವು ಹೇಳಿದ ದಿನಾಂಕದೊಳಗೆ ಎಲ್ಲರಿಗೂ ಈ ಯೋಜನೆಯ ಲಾಭ ಸಿಗುವ ಹಾಗೆ ಮಾಡುತ್ತೇವೆ ಎಂದು ಸಚಿವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next