Advertisement

ಗಟ್ಟಿ ಕಥೆಗೊಂದು ಕಾಮಿಡಿ ಟಚ್‌: ಮಧ್ಯಮ ವರ್ಗದ ಹುಡುಗನಾಗಿ ಸತೀಶ್‌

05:27 PM Jul 15, 2022 | Team Udayavani |

ನೀನಾಸಂ ಸತೀಶ್‌ ಸಿಕ್ಕಾಪಟ್ಟೆ ಎಕ್ಸೈಟ್‌ ಆಗಿ ಎದುರು ನೋಡುತ್ತಿದ್ದಾರೆ. ಅದಕ್ಕೆ ಕಾರಣ “ಪೆಟ್ರೋಮ್ಯಾಕ್ಸ್‌’. ಸತೀಶ್‌ ನಟನೆಯ ಈ ಚಿತ್ರ ಇಂದು ತೆರೆಕಾಣುತ್ತಿದೆ. ಈಗಾಗಲೇ ಟ್ರೇಲರ್‌ ಮೂಲಕ ಸದ್ದು ಮಾಡಿರುವ ಈ ಚಿತ್ರವನ್ನು ವಿಜಯ ಪ್ರಸಾದ್‌ ನಿರ್ದೇಶಿಸಿದ್ದಾರೆ.

Advertisement

ಅವರ ಸಿನಿಮಾಗಳಲ್ಲಿ ಸಹಜವಾಗಿ ಇರುವ ಡಬಲ್‌ ಮೀನಿಂಗ್‌ ಡೈಲಾಗ್‌ಗಳು, ಚೇಷ್ಟೇ ಎಲ್ಲವೂ ಈ ಚಿತ್ರದಲ್ಲೂ ಇದೆ. ಜೊತೆಗೆ ಅದರಾಚೆ ಒಂದು ವಿಭಿನ್ನವಾದ ಕಥೆ ಇದೆ. ಅದೇ ಕಾರಣದಿಂದ ಸತೀಶ್‌ ಈ ಸಿನಿಮಾ ಮೇಲೆ ನಂಬಿಕೆ ಇಟ್ಟಿರೋದು. ಈ ಬಗ್ಗೆ ಮಾತನಾಡುವ ಸತೀಶ್‌, “ಪೆಟ್ರೋಮ್ಯಾಕ್ಸ್‌ ನನ್ನ ಕೆರಿಯರ್‌ನಲ್ಲಿ ಒಂದು ವಿಭಿನ್ನ ಸಿನಿಮಾ. ನಾಲ್ವರು ಅನಾಥ ಮಕ್ಕಳ ಕಥೆಯನ್ನಿಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಈ ಚಿತ್ರದಲ್ಲಿ ಒಂದು ಗಟ್ಟಿಕಥೆ ಇದೆ. ನಿಜವಾಗಿಯೂ ಅನಾಥರೆಂದರೆ ಯಾರು, ಸಂಬಂಧಗಳಿಂದ ಕಳಚಿಕೊಳ್ಳುವವರ ಮನಸ್ಥಿತಿಯನ್ನು ಇಲ್ಲಿ ಹೇಳಲಾಗಿದೆ. ಚಿತ್ರದಲ್ಲಿ ಸೆಂಟಿಮೆಂಟ್‌ಗೂ ಹೆಚ್ಚಿನ ಜಾಗವಿದೆ’ ಎನ್ನುತ್ತಾರೆ.

ಇನ್ನು, ಇತ್ತೀಚೆಗೆ ಬಿಡುಗಡೆಯಾಗಿರುವ ಟ್ರೇಲರ್‌ನಲ್ಲಿ ಒಂದಷ್ಟು ಡಬಲ್‌ ಮೀನಿಂಗ್‌ ಡೈಲಾಗ್‌ ಗಳಿವೆ. ಈ ತರಹದ ಸಂಭಾಷಣೆ ಪಡ್ಡೆ ಹುಡುಗರನ್ನು ಸೆಳೆಯುತ್ತದೆ. ಹಾಗಾದರೆ, ಈ ಸಿನಿಮಾ ಕೇವಲ ಒಂದೇ ಕೆಟಗರಿಗೆ ಸೀಮಿತನಾ ಎಂದು ನೀವು ಕೇಳಬಹುದು. ಇದಕ್ಕೆ ಸತೀಶ್‌ ಉತ್ತರಿಸೋದು ಹೀಗೆ, “ಇದು ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್‌. ಇಡೀ ಕುಟುಂಬ ಜೊತೆಯಾಗಿ ನೋಡಬಹುದು. ಅಲ್ಲಲ್ಲಿ ಒಂದಷ್ಟು ಫ‌ನ್‌, ಚೇಷ್ಟೆ ಸಂಭಾಷಣೆಗಳಿವೆಯಷ್ಟೇ. ಇಲ್ಲಿ ಯಾರಿಗೂ ಮುಜುಗರ ತರುವಂತಹ ಅಂಶಗಳು ಇಲ್ಲ. ಸಿನಿಮಾ ಕಥೆ ಹೇಳುವಾಗಲೇ ನಿರ್ದೇಶಕರು ಚೇಷ್ಟೆ ಡೈಲಾಗ್‌, ದೃಶ್ಯಗಳ ಬಗ್ಗೆಯೂ ಹೇಳಿದ್ದರು. ಚಿತ್ರದಲ್ಲಿ ಸತೀಶ್‌ ಮನೆ ಊಟ ಡೆಲಿವರಿ ಮಾಡುವಂತಹ ಮಧ್ಯಮ ವರ್ಗದ ಹುಡುಗನ ಪಾತ್ರ ಮಾಡಿದ್ದಾರೆ. ಮೊದಲ ಬಾರಿಗೆ ಈ ತರಹದ ಪಾತ್ರ ಮಾಡಿರುವುದರಿಂದ ಸತೀಶ್‌ ನಿರೀಕ್ಷೆ ಹೆಚ್ಚಿದೆ.

Advertisement

Udayavani is now on Telegram. Click here to join our channel and stay updated with the latest news.

Next