Advertisement

200 ಚಿತ್ರಮಂದಿರಗಳಲ್ಲಿ ಪೆಟ್ರೋಮ್ಯಾಕ್ಸ್‌ : ಜು.15ಕ್ಕೆ ರಿಲೀಸ್‌

02:33 PM Jul 13, 2022 | Team Udayavani |

ನೀನಾಸಂ ಸತೀಶ್‌ ನಾಯಕರಾಗಿರುವ “ಪೆಟ್ರೋಮ್ಯಾಕ್ಸ್‌’ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿ ಹಿಟ್‌ಲಿಸ್ಟ್‌ ಸೇರಿದೆ. ಈಗ ಚಿತ್ರತಂಡ ಬಿಡುಗಡೆಯ ಭರಾಟೆಯಲ್ಲಿ ತೊಡಗಿದೆ. ಚಿತ್ರ ಜುಲೈ 15ರಂದು ಸುಮಾರು 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಅದಕ್ಕೆ ಕಾರಣ ಸಿನಿಮಾಕ್ಕಿರುವ ಬೇಡಿಕೆ. ನಿರ್ದೇಶಕ ವಿಜಯ್‌ ಪ್ರಸಾದ್‌ ತಮ್ಮದೇ ಒಂದು “ಬ್ರಾಂಡ್‌’ ಮೂಲಕ ಬೇಡಿಕೆಯ ನಿರ್ದೇಶಕ ಎನಿಸಿಕೊಂಡಿದ್ದಾರೆ.

Advertisement

ಈ ಕಾರಣದಿಂದ ಈಗ ಬಿಡುಗಡೆ ಯಾಗುತ್ತಿರುವ ಅವರ “ಪೆಟ್ರೋಮ್ಯಾಕ್ಸ್‌’ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ. ಈ ಹಿಂದೆ ವಿಜಯ ಪ್ರಸಾದ್‌ ನಿರ್ದೇಶಿಸಿದ “ನೀರ್‌ದೋಸೆ’ ಚಿತ್ರ ಕೂಡಾ ಹಿಟ್‌ ಆಗಿತ್ತು. ಇನ್ನು, ಚಿತ್ರಕ್ಕೆ ಸೆನ್ಸಾರ್‌ ಮಂಡಳಿಯಿಂದ “ಎ’ ಪ್ರಮಾಣ ಪತ್ರ ಸಿಕ್ಕಿದೆ.

ಇದನ್ನೂ ಓದಿ: ಜು.14 ಕ್ಕೆ  ಗಾಳಿಪಟ-2 ಎಣ್ಣೆ ಸಾಂಗ್‌ ರಿಲೀಸ್

ಆದರೆ, ನಾಯಕ ನಟ ನೀನಾಸಂ ಸತೀಶ್‌ ಹೇಳುವಂತೆ, ಇದು ಔಟ್‌ ಅಂಡ್‌ ಔಟ್‌ ಫ್ಯಾಮಿಲಿ ಓರಿಯೆಂಟೆಡ್‌ ಸಿನಿಮಾ. “ಚಿತ್ರಕ್ಕೆ “ಎ’ ಪ್ರಮಾಣ ಪತ್ರ ಸಿಕ್ಕಿದೆ ಎಂದ ಮಾತ್ರಕ್ಕೆ ಫ್ಯಾಮಿಲಿ ನೋಡದ ಸಿನಿಮಾವಲ್ಲ. ಚಿತ್ರದಲ್ಲಿ ಸಾಕಷ್ಟು ಎಮೋಶನಲ್‌ ಅಂಶಗಳಿದ್ದು, ಇಡೀ ಕುಟುಂಬ ನೋಡಬಹುದು. ಜೊತೆಗೆ ವಿಜಯ ಪ್ರಸಾದ್‌ ಅವರ ಫ‌ನ್‌ ಎಲಿಮೆಂಟ್ಸ್‌ಗಳಿಗೂ ಇಲ್ಲಿ ಕೊರತೆಯಿಲ್ಲ. ಅದೇ ಕಾರಣದಿಂದ ಚಿತ್ರವನ್ನು 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ’ ಎನ್ನುತ್ತಾರೆ.

ಸತೀಶ್‌ ನೀನಾಸಂ, ವಿಜಯ ಪ್ರಸಾದ್‌ ಹಾಗೂ ಸುಧಿ ಜಂಟಿಯಾಗಿ ನಿರ್ಮಿಸಿರುವ ಈ ಸಿನಿಮಾಕ್ಕೆ ಅನೂಪ್‌ ಸೀಳಿನ್‌ ಸಂಗೀತ ಸಂಯೋಜಿಸಿದ್ದಾರೆ. ವಿಜಯಲಕ್ಷ್ಮೀ ಸಿಂಗ್‌, ಕಾರುಣ್ಯ ರಾಮ್‌, ಅರುಣ್‌, ನಾಗಭೂಷಣ್‌ ಸೇರಿದಂತೆ ಅನೇಕರು ನಟಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next