Advertisement

ಪೆಟ್ರೋಲಿಯಂ ಉತ್ಪನ್ನ  ಜಿಎಸ್‌ಟಿ ವ್ಯಾಪ್ತಿಗೆ?

06:35 AM Dec 20, 2017 | Harsha Rao |

ಹೊಸದಿಲ್ಲಿ: ತೈಲೋತ್ಪನ್ನಗಳನ್ನು ಸರಕು ಮತ್ತು ಸೇವಾ (ಜಿಎಸ್‌ಟಿ) ವ್ಯಾಪ್ತಿಗೆ ತರುವ ಬಗ್ಗೆ ಕೇಂದ್ರ ಸರಕಾರ ಉತ್ಸುಕವಾಗಿದೆ. ಈ  ಬಗ್ಗೆ ರಾಜ್ಯ ಸರಕಾರಗಳ ನಡುವೆ ಒಮ್ಮತ ಮೂಡಬೇಕು ಎಂದು ಹಣಕಾಸು ಸಚಿವ ಅರುಣ್‌ ಜೇಟಿÉ ಹೇಳಿದ್ದಾರೆ. 

Advertisement

ರಾಜ್ಯಸಭೆಯಲ್ಲಿ ಮಾತನಾಡಿ, ಈ ಬಗ್ಗೆ ರಾಜ್ಯ ಸರಕಾರಗಳು ಶೀಘ್ರವೇ ಒಮ್ಮತಕ್ಕೆ ಬರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಕೆಲ ದಿನಗಳ ಹಿಂದಷ್ಟೇ ಮಾತನಾಡಿದ್ದ ಬಿಹಾರ ಉಪ ಮುಖ್ಯಮಂತ್ರಿ ಸುಶೀಲ್‌ ಮೋದಿ ತೈಲೋತ್ಪನ್ನ ಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವ ಬಗ್ಗೆ ಚರ್ಚೆಗಳು ನಡೆದಿವೆ ಎಂದು ಹೇಳಿದ್ದಾರೆ. 

ಒಂದು ವೇಳೆ ಜಿಎಸ್‌ಟಿ ವ್ಯಾಪ್ತಿಗೆ ಬಂದರೆ ದೇಶಾದ್ಯಂತ ಏಕಪ್ರಕಾರವಾಗಿ ಪೆಟ್ರೋಲಿಯಂ ಉತ್ಪನ್ನಗಳಿಗೆ ದರ ನಿಗದಿ ಮಾಡಲು ಸಾಧ್ಯವಾಗುತ್ತದೆ .

Advertisement

Udayavani is now on Telegram. Click here to join our channel and stay updated with the latest news.

Next