Advertisement

ದುಬಾರಿ ಬೆಲೆಗೆ ಪೆಟ್ರೋಲ್‌ ಮಾರಾಟ

01:16 PM Apr 04, 2020 | Suhan S |

ಶ್ರೀರಂಗಪಟ್ಟಣ: ಜಿಲ್ಲೆಯ ಪೆಟ್ರೋಲ್‌ ಬಂಕ್‌ಗಳಲ್ಲಿ ಖಾಸಗಿ ದ್ವಿಚಕ್ರ ವಾಹನಗಳಿಗೆ ಕಳೆದ ಎರಡು ದಿನಗಳಿಂದ ಪೆಟ್ರೋಲ್‌ ಮಾರಾಟ ಸ್ಥಗಿತಗೊಳಿಸಿದ್ದರಿಂದ ದುಬಾರಿ ಬೆಲೆಗೆ ಅಕ್ರಮವಾಗಿ ಪೆಟ್ರೋಲ್‌ ಮಾರಾಟ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿದ್ದಾರೆ.

Advertisement

ಕೋವಿಎ್ 19 ವೈರಸ್‌ ಹರಡದಂತೆ ತಡೆಗಟ್ಟಲು ಲಾಕ್‌ಡೌನ್‌ ನಿಯಮ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನ ಸವಾರರು ಮನೆಯಲ್ಲಿರದೆ ದ್ವಿಚಕ್ರ ವಾಹನಗಳಲ್ಲಿ ಸುಖಾಸುಮ್ಮನೆ ರಸ್ತೆಯಲ್ಲಿ ಸಂಚರಿಸು ವುದನ್ನು ತಡೆಗಟ್ಟಲು ಜಿಲ್ಲಾಧಿಕಾರಿಗಳ ಆದೇಶದಂತೆ ದ್ವಿಚಕ್ರ ವಾಹನಗಳಿಗೆ ಪೆಟ್ರೋಲ್‌ ಸ್ಥಗಿತಗೊಳಿಸಲಾಗಿತ್ತು. ಅಗತ್ಯವಿದ್ದವರಿಗೆ ಆಯಾ ತಾಲೂಕು ಆಡಳಿತ ಪಾಸ್‌ ವಿತರಣೆ ಮಾಡಿ ಅವರಿಗೆ ಮಾತ್ರ ಪೆಟ್ರೋಲ್‌ ನೀಡುವಂತೆ ಸೂಚಿಸಲಾಗಿತ್ತು. ಕೆಲ ಬಂಕ್‌ಗಳಲ್ಲಿ ಇದನ್ನೇ ಬಂಡವಾಳ ಮಾಡಿಕೊಂಡು ಪೆಟ್ರೋಲ್‌ ಇಲ್ಲ ಎಂದು ಬಂಕ್‌ ಮುಂದೆ ಹಗ್ಗ ಕಟ್ಟಿ ಯಾರು ಬರದಂತೆ ಜಾಗ್ರತೆ ವಹಿಸಿ ಬಳಿಕ ರಾತ್ರಿ ಹೊತ್ತಿನಲ್ಲಿ ಒಂದು ಲೀಟರ್‌ಗೆ ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ದ್ವಿಚಕ್ರವಾಹನಗಳಿಗೆ ಪೆಟ್ರೋಲ್‌ ನೀಡಿರುವ ಬಗ್ಗೆ ಸಾರ್ವಜನಿಕರು ಆರೋಪಿಸಿದ್ದಾರೆ. ಪಂಪ್‌ ಹೌಸ್‌ – ಕೆಆರ್‌ ಎಸ್‌ ರಸ್ತೆಯಲ್ಲಿರುವ ಬಂಕ್‌ ಮಾಲೀಕರ ವಿರುದ್ಧ ಕೂಡಲೇ ತಾಲೂಕು ಆಡಳಿತ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next