ಜೈಪುರ್(ರಾಜಸ್ಥಾನ): ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ವಿಧಿಸಿರುವ ವ್ಯಾಟ್ (ಮೌಲ್ಯವರ್ಧಿತ ತೆರಿಗೆ) ಅನ್ನು ಇಳಿಕೆ ಮಾಡಬೇಕೆಂದು ಒತ್ತಾಯಿಸಿ ರಾಜಸ್ಥಾನದಲ್ಲಿ ಪೆಟ್ರೋಲ್ ಬಂಕ್ ಗಳು ಶುಕ್ರವಾರ (ಸೆ.15)ದಿಂದ ಅನಿರ್ದಿಷ್ಟಾವಧಿವರೆಗೆ ಬಂದ್ ಆರಂಭಿಸಿವೆ.
ಇದನ್ನೂ ಓದಿ:Aditya L1: ನಾಲ್ಕನೇ ಹಂತದ ಕಕ್ಷೆ ಬದಲಾವಣೆ ಯಶಸ್ವಿಯಾಗಿ ಪೂರ್ಣಗೊಳಿಸಿದ ಆದಿತ್ಯ ಎಲ್ 1
ರಾಜಸ್ಥಾನ್ ಪೆಟ್ರೋಲಿಯಮ್ ಡೀಲರ್ಸ್ ಅಸೋಸಿಯೇಶನ್ (RPDYA) ಅನಿರ್ದಿಷ್ಟಾವಧಿ ಬಂದ್ ಗೆ ಕರೆ ನೀಡಿದೆ. ನೆರೆಯ ರಾಜ್ಯಗಳಿಗೆ ಹೋಲಿಸಿದರೆ ರಾಜಸ್ಥಾನದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಅಧಿಕ ವ್ಯಾಟ್ ಹೇರಲಾಗಿದೆ. ರಾಜಸ್ಥಾನದಲ್ಲಿ ಪೆಟ್ರೋಲ್ ಮೇಲೆ ಶೇ.18.20ರಷ್ಟು ಹಾಗೂ ಡೀಸೆಲ್ ಮೇಲೆ ಶೇ.16ರಷ್ಟು ವ್ಯಾಟ್ ವಿಧಿಸಲಾಗಿದೆ ಎಂದು ವರದಿ ತಿಳಿಸಿದೆ.
ಪಂಜಾಬ್ ಮತ್ತು ಗುಜರಾತ್ ನಲ್ಲಿ ಪೆಟ್ರೋಲ್ ಗೆ ಶೇ.13.77ರಷ್ಟು ಮತ್ತು ಡೀಸೆಲ್ ಗೆ ಶೇ.9.92ರಷ್ಟು ವ್ಯಾಟ್ ವಿಧಿಸಲಾಗಿದೆ. ರಾಜಸ್ಥಾನದಲ್ಲಿ ಪೆಟ್ರೋಲ್ , ಡೀಸೆಲ್ ಮೇಲೆ ಭಾರೀ ಪ್ರಮಾಣದಲ್ಲಿ ವ್ಯಾಟ್ ವಿಧಿಸಿದ್ದರಿಂದ ನಮ್ಮ ಆದಾಯದಲ್ಲಿ ನಷ್ಟ ಉಂಟಾಗುತ್ತಿದೆ ಎಂದು ರಾಜಸ್ಥಾನದ ಪೆಟ್ರೋಲ್ ಬಂಕ್ ಮಾಲೀಕರು ಆರೋಪಿಸಿದ್ದಾರೆ.
ರಾಜಸ್ಥಾನಕ್ಕೆ ಭೇಟಿ ನೀಡುವ ಮೊದಲೇ ಗ್ರಾಹಕರು ನೆರೆಯ ರಾಜ್ಯಗಳಿಂದಲೇ ಪೆಟ್ರೋಲ್, ಡೀಸೆಲ್ ಹಾಕಿಕೊಂಡು ಬರುತ್ತಿದ್ದಾರೆ. ಯಾಕೆಂದರೆ ನಮ್ಮಲ್ಲಿ ವ್ಯಾಟ್ ಅಧಿಕವಾಗಿರುವುದರಿಂದ ಬೆಲೆಯಲ್ಲಿ ಹೆಚ್ಚಳವಾಗುತ್ತಿದೆ ಎಂಬುದು ಗ್ರಾಹಕರ ದೂರು.
ಈ ನಿಟ್ಟಿನಲ್ಲಿ ರಾಜಸ್ಥಾನ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲಿನ ವ್ಯಾಟ್ ದರ ಇಳಿಸುವಂತೆ ಒತ್ತಾಯಿಸಿ ಬಂದ್ ಗೆ ಕರೆ ನೀಡಲಾಗಿದೆ ಎಂದು ಪೆಟ್ರೋಲ್ ಬಂಕ್ ಮಾಲೀಕರ ಸಂಘ ತಿಳಿಸಿದೆ.