ಲಕ್ನೋ: ಆರ್ ಬಿಐಯ 2000 ರೂ. ನೋಟು ಬದಲಾವಣೆ ನಿಯಮದಿಂದ ಜನರು ಗೊಂದಲಕ್ಕೆ ಒಳಗಾಗಿದ್ದಾರೆ. ನೋಟು ಎಕ್ಸ್ ಚೆಂಜ್ ಮಾಡಿಕೊಳ್ಳಲು ಸೆ.30 ರವರೆಗೆ ಸಮಯವನ್ನು ನೀಡಿದೆ. ಆದರೆ ಜನ ಇನ್ನು ಕೂಡ ಒಂದಷ್ಟು ಗೊಂದಲಕ್ಕೆ ಒಳಗಾಗಿದ್ದಾರೆ.
2000 ರೂ.ನೋಟು ಕೊಟ್ಟದ್ದಕ್ಕಾಗಿ ವ್ಯಕ್ತಿಯೊಬ್ಬ ಪಜೀತಿಗೆ ಸಿಲುಕಿರುವ ಘಟನೆ ತಾರ್ ಪ್ರದೇಶದ ಜಲೌನ್ ನಲ್ಲಿ ನಡೆದಿದೆ.
ವ್ಯಕ್ತಿಯೊಬ್ಬ ಪೆಟ್ರೋಲ್ ಹಾಕಿಸಿಕೊಳ್ಳಲು ಬಂದಿದ್ದಾನೆ. ಪೆಟ್ರೋಲ್ ಹಾಕಿದ ಬಳಿಕ 2000 ರೂ. ನೋಟನ್ನು ಸಿಬ್ಬಂದಿಗೆ ನೀಡಿದ್ದಾನೆ. ಸಿಬ್ಬಂದಿ ಚಿಲ್ಲರೆ ಇಲ್ಲದೆ ಹಾಗೂ ಸದ್ಯ 2 ಸಾವಿರ ನೋಟಿನ ಬಗ್ಗೆ ನಡೆಯುತ್ತಿರುವ ಸ್ಥಿತಿಯ ಬಗ್ಗೆ ಅರಿತು, ಸ್ಕೂಟರ್ ಗೆ ಹಾಕಿದ ಪೆಟ್ರೋಲ್ ನ್ನು ಸಣ್ಣ ಪೈಪ್ ವೊಂದನ್ನು ಬಳಸಿ ಹೊರಕೆ ತೆಗೆದಿದ್ದಾನೆ.
ನಿಗರ್ ಪರ್ವೀನ್ ಎನ್ನುವವರು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ವೈರಲ್ ಆಗಿದ್ದು, ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಎಂದು ಪೊಲೀಸರು ಹೇಳಿದ್ದಾರೆ.
ಪೆಟ್ರೋಲ್ ಬಂಕ್ ಸಿಬ್ಬಂದಿ ಕ್ರಮ ಕೈಗೊಳ್ಳಬೇಕೆಂದು ಕೆಲ ನೆಟ್ಟಿಗರು ಆಗ್ರಹಿಸಿದ್ದಾರೆ. ಇನ್ನು ಕೆಲವರು ಪ್ರಸ್ತುತ ಸ್ಥಿತಿಯನ್ನು ಉಲ್ಲೇಖಿಸಿದ್ದಾರೆ.
2 ಸಾಔಇರ ನೋಟುಗಳನ್ನು ತೆಗೆದುಕೊಳ್ಳುವುದು ಕಷ್ಟವಲ್ಲ. ಗ್ರಾಹಕರು ಅಷ್ಟೇ ಮೊತ್ತದ ಪೆಟ್ರೋಲ್ ಹಾಕಿದರೆ ನಮಗೇನು ಸಮಸ್ಯೆಯಿಲ್ಲ. ಆದರೆ ಸಣ್ಣ ಮೊತ್ತದ ಪೆಟ್ರೋಲ್ ಹಾಕಿ 2 ಸಾವಿರ ನೋಟು ಕೊಟ್ಟು ಚಿಲ್ಲರೆ ಕೇಳಿದರೆ ನಮಗೆ ಕಷ್ಟವಾಗುತ್ತದೆ ಎಂದು ಪೆಟ್ರೋಲ್ ಪಂಪ್ ಮ್ಯಾನೇಜರ್ ರಾಜೀವ್ ಗಿರ್ಹೋತ್ರಾ ಹೇಳುತ್ತಾರೆ.