ಹೊಸದಿಲ್ಲಿ: ಸತತ ಆರನೇ ದಿನವಾಗಿರುವ ರವಿವಾರ ಪೆಟ್ರೋಲ್, ಡೀಸೆಲ್ ದರ ಕ್ರಮವಾಗಿ ಪ್ರತೀ ಲೀಟರ್‌ಗೆ 29 ಪೈಸೆ, 32 ಪೈಸೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಪ್ರತೀ ಲೀಟರ್ ಪೆಟ್ರೋಲ್‌ಗೆ 30 ಪೈಸೆ ಜಿಗಿದು 91.70 ರೂ., ಡೀಸೆಲ್‌ಗೆ 34 ಪೈಸೆ ಏರಿಕೆಯಾಗಿ 83.81 ರೂ.ಗಳಿಗೆ ತಲುಪಿದೆ. ಹೊಸದಿಲ್ಲಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್‌ಗೆ 88.73 ರೂ. ಡೀಸೆಲ್‌ಗೆ 79.06 ರೂ. ಆಗಿದೆ.
ರಾಜಸ್ಥಾನದ ಶ್ರೀಗಂಗಾನಗರದಲ್ಲಿ ಪ್ರತೀ ಲೀಟರ್ ಪೆಟ್ರೋಲ್‌ಗೆ 99.29 ರೂ., ಡೀಸೆಲ್‌ಗೆ 91.17 ರೂ. ಆಗಿದೆ. ದೇಶದಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಮೌಲ್ಯ ವರ್ಧಿತ ತೆರಿಗೆಯನ್ನು ತೈಲೋತ್ಪನ್ನಗಳ ಮೇಲೆ ವಿಧಿಸುತ್ತಿದೆ. ರಾಜ್ಯ ಸರಕಾರ ವ್ಯಾಟ್ ಶೇ.36 ಮತ್ತು ಪ್ರತೀ ಕಿಲೋಲೀಟರ್ ಪೆಟ್ರೋಲ್ ಮೇಲೆ 1,500 ರೂ. ಅನ್ನು ರೋಡ್ ಸೆಸ್, ಡೀಸೆಲ್ ಮೇಲೆ ಶೇ.26 ವ್ಯಾಟ್ ಮತ್ತು ಪ್ರತಿ ಕಿಲೋಲೀಟರ್ ಮೇಲೆ 1,750 ರೂ. ಸೆಸ್ ವಿಧಿಸಲಾಗುತ್ತದೆ. ಕಳೆದ ತಿಂಗಳು ಶೇ.2 ಕಡಿಮೆ ಮಾಡಿದ್ದರೂ, ದರ ಏರಿಕೆಯಾಗಿದೆ. ಪ್ರೀಮಿಯಮ್ ಪೆಟ್ರೋಲ್ ದರ ಶ್ರೀಗಂಗಾನಗರದಲ್ಲಿ ಪ್ರತೀ ಲೀಟರ್‌ಗೆ 102.07 ರೂ. ಆಗಿದೆ.
ಪರ್ಬನಿಯಲ್ಲಿ 100 ರೂ.: ಮಹಾರಾಷ್ಟ್ರದ ಪರ್ಬನಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್‌ಗೆ 100 ರೂ. ದಾಟಿದೆ. ಜಿಲ್ಲೆಯಲ್ಲಿ ಪೆಟ್ರೋಲ್‌ಗೆ 28 ಪೈಸೆ ಏರಿಕೆಯಾದ ಬಳಿಕ ಈ ಬೆಳವಣಿಗೆಯಾಗಿದೆ. ಪೆಟ್ರೋಲ್ ಪಂಪ್‌ಗ್ಳಲ್ಲಿ ತೆರಿಗೆ ಮತ್ತು ಇತರ ಅಂಶಗಳು ಸೇರಿಕೊಂಡು 100.16 ರೂ. ಆಗಿದೆ ಎಂದು ಜಿಲ್ಲಾ ಪೆಟ್ರೋಲ್, ಡೀಸೆಲ್ ಡೀಲರ್‌ಗಳ ಒಕ್ಕೂಟ ತಿಳಿಸಿದೆ.
ಎಲ್‌ಪಿಜಿ ಬೆಲೆ 50 ರೂ. ಏರಿಕೆ :
ಗೃಹೋಪಯೋಗಿ ಅಡುಗೆ ಅನಿಲ ದುಬಾರಿಯಾಗಲಿದೆ. ಸೋಮವಾರದಿಂದ ಅನ್ವಯವಾಗುವಂತೆ ದಿಲ್ಲಿಯಲ್ಲಿ 50 ರೂ. ಹೆಚ್ಚಿಸಲಾಗಿದೆ. ಹೊಸ ದರದಿಂದಾಗಿ ರಾಷ್ಟ್ರ ರಾಜಧಾನಿಯಲ್ಲಿ ಪರಿಷ್ಕೃತ ಎಲ್‌ಪಿಜಿ ಬೆಲೆ 769 ರೂ. ಆಗಲಿದೆ. 2020 ಡಿ.1ರ ಬಳಿಕ ಇದು ಮೂರನೇ ಏರಿಕೆಯಾಗಲಿದೆ. ಡಿ.16ರಂದು 50 ರೂ. ಹೆಚ್ಚಿಸಲಾಗಿತ್ತು.