Advertisement

ರಾಜ್ಯದ ಸುಮಾರು 20 ಜಿಲ್ಲೆಗಳಲ್ಲಿ ಪೆಟ್ರೋಲ್‌ ದರ 100+

02:37 AM Jun 17, 2021 | Team Udayavani |

ಬೆಂಗಳೂರು : ರಾಜ್ಯದ ಸುಮಾರು 20 ಜಿಲ್ಲೆಗಳಲ್ಲಿ ಪೆಟ್ರೋಲ್‌ ದರ 100 ರೂ. ದಾಟಿದೆ. ಬೆಂಗಳೂರಿನಲ್ಲಿ ಇನ್ನೇನು ಒಂದೆರಡು ದಿನಗಳಲ್ಲಿ ಶತಕ ಬಾರಿಸಲಿದೆ.

Advertisement

ರಾಜ್ಯದಲ್ಲಿ ಮೊದಲು ಪೆಟ್ರೋಲ್‌ ಶತಕ ಬಾರಿಸಿದ್ದು ಬಳ್ಳಾರಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ. ಬುಧವಾರ ದಾವಣಗೆರೆ ಜಿಲ್ಲೆಯಲ್ಲಿ ಅತಿ ಹೆಚ್ಚು, ಅಂದರೆ ಪ್ರತೀ ಲೀ. ಪೆಟ್ರೋಲ್‌ ಗೆ 101.87 ರೂ. ಇದ್ದರೆ, ಕಡಿಮೆ ಎಂದರೆ ದಕ್ಷಿಣ ಕನ್ನಡದಲ್ಲಿ 99.09 ರೂ. ಇದೆ. ಬೆಂಗಳೂರು ಗ್ರಾಮಾಂತರ ಮತ್ತು ಚಾಮರಾಜನಗರದಲ್ಲಿ 100 ರೂ.ಗೆ ಒಂದು ಪೈಸೆಯಷ್ಟೇ ಕಡಿಮೆ.

ಎಲ್ಲೆಲ್ಲಿ 100+
ಬಾಗಲಕೋಟೆ (100.38), ಬಳ್ಳಾರಿ (101.92), ಬೀದರ್‌ (100.41), ಚಿಕ್ಕಮಗಳೂರು (100.71), ಚಿತ್ರದುರ್ಗ (101.05), ದಾವಣಗೆರೆ (101.87), ಗದಗ (100.72), ಕಲಬುರಗಿ (100.34), ಹಾಸನ (100.12), ಹಾವೇರಿ (100.35), ಕೊಡಗು (100.98), ಕೋಲಾರ (100.01), ಕೊಪ್ಪಳ (100.96), ಮಂಡ್ಯ (100.06), ರಾಯಚೂರು (100.68), ರಾಮನಗರ (100.38), ಶಿವಮೊಗ್ಗ (101.22), ತುಮಕೂರು (101.11), ಉತ್ತರ ಕನ್ನಡ (100.10), ಯಾದಗಿರಿ (100.63)

ಎಲ್ಲೆಲ್ಲಿ 99+
ಬೆಂಗಳೂರು (99.89), ಬೆಂಗಳೂರು ಗ್ರಾಮಾಂತರ (99.99), ಬೆಳಗಾವಿ (99.81), ವಿಜಯಪುರ (99.70), ಚಾಮರಾಜನಗರ (99.99), ಚಿಕ್ಕಬಳ್ಳಾಪುರ (99.89), ಧಾರವಾಡ (99.68), ಮೈಸೂರು (99.45), ಉಡುಪಿ (99.37), ದಕ್ಷಿಣ ಕನ್ನಡ (99.09).

Advertisement

Udayavani is now on Telegram. Click here to join our channel and stay updated with the latest news.

Next