Advertisement

ಕೇರಳ, ಪಂಜಾಬ್‌ನಲ್ಲಿ ಪೆಟ್ರೋಲ್‌, ಡೀಸೆಲ್‌ ತುಟ್ಟಿ

12:37 AM Feb 04, 2023 | |

ತಿರುವನಂತಪುರ/ ಚಂಡೀಗಢ: ಸಿಎಂ ಪಿಣರಾಯಿ ವಿಜಯನ್‌ ನೇತೃತ್ವದ ಕೇರಳ ಸರಕಾರ ಶುಕ್ರವಾರ ತನ್ನ ಮುಂಗಡಪತ್ರವನ್ನು ಮಂಡಿಸಿದೆ. ಇದರ ಪರಿಣಾಮ ಆ ರಾಜ್ಯದಲ್ಲಿ ಮದ್ಯ ಹಾಗೂ ಇಂಧನದ ಬೆಲೆ ಇನ್ನಷ್ಟು ಏರಲಿದೆ!

Advertisement

ಪೆಟ್ರೋಲ್‌, ಡೀಸೆಲ್‌, ಮದ್ಯದ ಮೇಲೆ ಸಾಮಾಜಿಕ ಸುರûಾ ಸೆಸ್‌ ಹೇರಿರುವುದೇ ಇದಕ್ಕೆ ಕಾರಣ. ಆದಾಯದ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸಲು ಸರಕಾರ ಈ ಕ್ರಮ ತೆಗೆದುಕೊಂಡಿದೆ. ಮುಂಗಡಪತ್ರ ಮಂಡಿಸಿದ ವಿತ್ತಸಚಿವ ಕೆ.ಎನ್‌. ಬಾಲಗೋಪಾಲ್‌, 500ರಿಂದ 999 ರೂ. ನಡುವೆ ಬೆಲೆಯಿರುವ ಭಾರತದಲ್ಲಿ ತಯರಾಗಿರುವ ವಿದೇಶಿ ಮದ್ಯದ ಪ್ರತೀ ಬಾಟಲ್‌ ಮೇಲೆ 20 ರೂ. ಸೆಸ್‌ ಹಾಕಲಾಗುತ್ತದೆ. ಬೆಲೆ 1000 ರೂ. ದಾಟಿದರೆ ಈ ದರ 40 ರೂ.ಗೇರುತ್ತದೆ ಎಂದಿದ್ದಾರೆ. ಇದೇ ವೇಳೆ, ಅಗತ್ಯ ವಸ್ತುಗಳ ಬೆಲೆಯೇರಿಕೆ ನಿಯಂತ್ರಣಕ್ಕಾಗಿ ಸರಕಾರ 2,000 ಕೋಟಿ ರೂ. ಅನುದಾನ ಮೀಸಲಿಟ್ಟಿರುವುದಾಗಿ ಘೋಷಿದ್ದಾರೆ.

ಪಂಜಾಬ್‌ನಲ್ಲಿ ತೈಲಕ್ಕೆ ಸೆಸ್‌: ಮುಖ್ಯಮಂತ್ರಿ ಭಗವಂತ್‌ ಮಾನ್‌ ನೇತೃತ್ವದ ಪಂಜಾಬ್‌ ಸರಕಾರ ಪ್ರತೀ ಲೀಟರ್‌ ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲೆ 90 ಪೈಸೆ ಸೆಸ್‌ ವಿಧಿಸಲು ನಿರ್ಧರಿಸಿದೆ.

ಇದರಿಂದ ರಾಜ್ಯದಲ್ಲಿ ಇಂಧನಗಳ ಬೆಲೆ ಮತ್ತಷ್ಟು ದುಬಾರಿಯಾಗಲಿದೆ. ಶುಕ್ರವಾರ ಸಚಿವ ಸಂಪುಟ ಸಭೆ ಬಳಿಕ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಅಮನ್‌ ಅರೋರಾ ಈ ಕುರಿತು ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ದೀರ್ಘ‌ಕಾಲದಿಂದ ಬೆಲೆ ಹೆಚ್ಚಳವಾಗಿಲ್ಲ. ಜತೆಗೆ ರಾಜ್ಯದ ಆದಾಯ ಉತ್ಪತ್ತಿಗೆ ಅಗತ್ಯವಾಗಿರುವ ಹಿನ್ನೆಲೆ ಸೆಸ್‌ ವಿಧಿಸಲು ನಿರ್ಧರಿಸಲಾಗಿದೆ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next