ಹೊಸದಿಲ್ಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಆರು ದಿನಗಳಲ್ಲಿ ಐದನೇ ಬಾರಿಗೆ ಏರಿಕೆಯಾಗಿದೆ. ಭಾನುವಾರವು ಪೆಟ್ರೋಲ್ ಬೆಲೆ 50 ಪೈಸೆ ಏರಿಕೆ ಕಂಡಿದೆ.
ದೆಹಲಿಯಲ್ಲಿ ಪೆಟ್ರೋಲ್ ಬೆಲೆ 50 ಪೈಸೆ ಹೆಚ್ಚಳದೊಂದಿಗೆ ಲೀಟರ್‌ಗೆ 99.11 ರೂ.ಗೆ ಏರಿದೆ, ಡೀಸೆಲ್ ಬೆಲೆ ಈಗ 55 ಪೈಸೆ ಏರಿಕೆಯಾಗಿ ಲೀಟರ್‌ಗೆ 90.42 ರೂ. ಗೆ ತಲುಪಿದೆ.
ಮುಂಬೈನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ 53 ಪೈಸೆ ಮತ್ತು 58 ಪೈಸೆ ಏರಿಕೆಯಾಗಿದೆ. ಪ್ರತಿ ಲೀಟರ್ ಪೆಟ್ರೋಲ್ ಬೆಲೆ 113.88 ರೂ. ಮತ್ತು ಡೀಸೆಲ್ ಬೆಲೆ 98.13 ರೂ. ಇದೆ,
ಮಂಗಳವಾರದಿಂದ ಇಂಧನ ಬೆಲೆಯಲ್ಲಿ ಲೀಟರ್‌ಗೆ 3.20 ರೂ.ಗೂ ಅಧಿಕ ಏರಿಕೆಯಾಗಿದೆ. ಮಾರ್ಚ್ 22 ರಂದು ಕೆಲವು ತಿಂಗಳ ಬಳಿಕ ಮೊದಲ ಬಾರಿ ದರದಲ್ಲಿ ಪರಿಷ್ಕರಣೆಯಾಗಿದ್ದು, ಲೀಟರ್ ಗೆ 80 ಪೈಸೆ ಏರಿಕೆ ಕಂಡಿತ್ತು.
ಇದನ್ನೂ ಓದಿ:ಮದುವೆಗೆ ಬಂದವರು ಮಸಣ ಸೇರಿದರು! 50ಅಡಿ ಪ್ರಪಾತಕ್ಕೆ ಬಿದ್ದಬಸ್; 7ಮಂದಿ ಸಾವು, 45ಜನರಿಗೆ ಗಾಯ
ಭಾರತವು ತನ್ನ ತೈಲ ಅಗತ್ಯಗಳನ್ನು ಪೂರೈಸಲು ಆಮದುಗಳನ್ನು ಅವಲಂಬಿಸಿರುವುದರಿಂದ, ಚಿಲ್ಲರೆ ದರಗಳು ಜಾಗತಿಕ ಬೆಲೆ ಬದಲಾವಣೆಗಳಿಗೆ ಅನುಗುಣವಾಗಿ ಬದಲಾಗುತ್ತದೆ.