Advertisement

ಪೆಟ್ರೋಲ್‌, ಡೀಸೆಲ್‌ ಬೆಲೆ 25 ಪೈಸೆ ಏರಿಕೆ

08:50 AM Sep 19, 2019 | Sriram |

ಹೊಸದಿಲ್ಲಿ: ಜು.5ರ ಕೇಂದ್ರ ಬಜೆಟ್‌ ಬಳಿಕ ಇದೇ ಮೊದಲ ಬಾರಿಗೆ ಪೆಟ್ರೋಲ್‌, ಡೀಸೆಲ್‌ ಬೆಲೆ ತಲಾ 24 ಮತ್ತು 25 ಪೈಸೆ ಏರಿಕೆಯಾಗಿದೆ. ಸೌದಿ ಅರೇಬಿಯಾದಲ್ಲಿ ಕಚ್ಚಾ ತೈಲಾಗಾರಕ್ಕೆ ದಾಳಿ ಬಳಿಕ ಜಾಗತಿಕ ಮಾರುಕಟ್ಟೆಯಲ್ಲಿ ಏರಿದ ಕಚ್ಚಾತೈಲ ದರ ಏರಿಕೆ ಕಂಡಿದ್ದು, ಈ ಬೆಲೆ ಏರಲು ಕಾರಣವಾಗಿದೆ.

Advertisement

ಪೆಟ್ರೋಲ್‌ ಬೆಲೆ 25 ಪೈಸೆ ಏರಿಕೆ ಕಂಡಿದ್ದು, ದಿಲ್ಲಿಯಲ್ಲಿ ಬೆಲೆ 72.42 ರೂ. ಆಗಿದೆ. ಡೀಸೆಲ್‌ ಬೆಲೆ 24 ಪೈಸೆ ಏರಿಕೆ ಕಂಡಿದ್ದು 65.82 ರೂ. ಆಗಿದೆ. ಬಜೆಟ್‌ ಬಳಿಕ ಇಷ್ಟೊಂದು ದೊಡ್ಡ ಮೊತ್ತ ಏರಿದ್ದು ಇದೇ ಮೊದಲಾಗಿದೆ. ಬಜೆಟ್‌ ವೇಳೆ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಕೇಂದ್ರ 2.50 ರೂ. ಅಬಕಾರಿ ಸುಂಕ ಏರಿಕೆ ಮಾಡಿದ್ದು ಇದರಿಂದ ಬೆಲೆ ಏರಿಕೆಯಾಗಿತ್ತು.

ಇನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶನಿವಾರ ಕಚ್ಚಾತೈಲ ಬೆಲೆ ಶೇ.20ರಷ್ಟು ಏರಿಕೆ ಕಂಡಿತ್ತು. ಇದು ಕಳೆದ 30 ವರ್ಷಗಳಲ್ಲೇ ಅತಿ ಹೆಚ್ಚಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next