Advertisement

ಇಳಿಕೆಯಾಗದ ತೈಲ ಬೆಲೆ: ಮಹಾನಗರಗಳಲ್ಲಿ ಮಾರ್ಚ್ 09ರ ಪೆಟ್ರೋಲ್, ಡೀಸೆಲ್ ದರ ಹೀಗಿದೆ…

12:13 PM Mar 09, 2021 | Team Udayavani |

ನವದೆಹಲಿ: ಪೆಟ್ರೋಲ್, ಡೀಸೆಲ್ ದರ ನಿರಂತರವಾಗಿ ಏರಿಕೆಯಾಗುತ್ತಿದ್ದು, ಸತತ ಹತ್ತನೇ ದಿನವಾದ ಮಂಗಳವಾರ(ಮಾರ್ಚ್ 09)ವೂ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ತೈಲ ಮಾರುಕಟ್ಟೆ ಕಂಪನಿಗಳು ದರವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಿದೆ.

Advertisement

ಇದನ್ನೂ ಓದಿ:ಕಾಂಗ್ರೆಸ್ ನಿಂದ ಮುಂದುವರಿದ ಬಹಿಷ್ಕಾರ: ಸಿಎಂ ಬಂದು ಕಾದರು ಸಭೆಗೆ ಬಾರದ ಸಿದ್ದರಾಮಯ್ಯ!

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೋಮವಾರ(ಮಾರ್ಚ್ 08) ಮಂಡಿಸಿದ್ದ ಬಜೆಟ್ ನಲ್ಲಿ ಪೆಟ್ರೋಲ್, ಡೀಸೆಲ್ ಮೇಲೆ ಯಾವುದೇ ಹೆಚ್ಚಿನ ತೆರಿಗೆಯನ್ನು ಹೊರಿಸಿಲ್ಲ ಎಂದು ಘೋಷಿಸಿದ್ದರು.

ಮಹಾನಗರಗಳಲ್ಲಿ ಇಂದಿನ ಪೆಟ್ರೋಲ್, ಡೀಸೆಲ್ ದರ ಎಷ್ಟು ಎಂಬ ಮಾಹಿತಿ ಇಲ್ಲಿದೆ:

ಉದ್ಯಾನನಗರಿ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 94.22 ರೂಪಾಯಿ, ಡೀಸೆಲ್ ಲೀಟರ್ ಬೆಲೆ 86.37 ರೂಪಾಯಿ.

Advertisement

ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್ ಬೆಲೆ 91.17 ರೂಪಾಯಿ, ಡೀಸೆಲ್ ಲೀಟರ್ ಬೆಲೆ 81.47 ರೂಪಾಯಿ.

ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್ ದರ ಲೀಟರ್ ಗೆ 97.57 ರೂಪಾಯಿ, ಡೀಸೆಲ್ ದರ ಲೀಟರ್ ಗೆ 88.60 ರೂಪಾಯಿ.

ಚೆನ್ನೈನಲ್ಲಿ ಪೆಟ್ರೋಲ್ ಲೀಟರ್ ಗೆ 93.11 ರೂಪಾಯಿಯಾಗಿದ್ದು, ಡೀಸೆಲ್ ಪ್ರತಿ ಲೀಟರ್ ಗೆ 86.45 ರೂಪಾಯಿ.

ಕೋಲ್ಕತಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 91.35 ರೂಪಾಯಿ, ಡೀಸೆಲ್ ಪ್ರತಿ ಲೀಟರ್ ಗೆ 84.35 ರೂಪಾಯಿ.

ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು ವಿಧಿಸುತ್ತದೆ. ಅಲ್ಲದೇ ಆಯಾ ರಾಜ್ಯಗಳು ಸರ್ಕಾರಗಳ ವ್ಯಾಟ್, ಮಾರಾಟಗಾರರ ಕಮಿಷನ್, ಸೆಸ್ ಅನ್ನು ಹಾಕುತ್ತದೆ. ಪೆಟ್ರೋಲ್, ಡೀಸೆಲ್ ಬೆಲೆಯನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯ ಬೆಲೆ ಪ್ರಕಾರ ದಿನಂಪ್ರತಿ ಪರಿಷ್ಕರಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next