Advertisement

ದಾಖಲೆಯ ಗರಿಷ್ಠ ಮಟ್ಟಕ್ಕೇರಿದ ಪೆಟ್ರೋಲ್,ಡೀಸೆಲ್‌ ದರ

07:13 PM Jun 21, 2020 | sudhir |

ನವದೆಹಲಿ: ಸರಕಾರಿ ತೈಲ ಮಾರುಕಟ್ಟೆ ಕಂಪನಿಗಳು ಡೀಸೆಲ್‌ ದರವನ್ನು ಪ್ರತಿ ಲೀಟರ್‌ಗೆ 60 ಪೈಸೆ ಮತ್ತು ಪೆಟ್ರೋಲ್‌ ದರವನ್ನು 35 ಪೈಸೆ ಹೆಚ್ಚಿಸಿದ್ದು, ಡೀಸೆಲ್‌ ಬೆಲೆ ಭಾನುವಾರ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ.

Advertisement

ಕಳೆದ ಹದಿನೈದು ದಿನಗಳಿಂದ ಪೆಟ್ರೋಲ್‌ ಹಾಗೂ ಡೀಸೆಲ್‌ ದರಗಳು ಸತತವಾಗಿ ಏರಿಕೆಯಾಗುತ್ತಿದ್ದು, ಡೀಸೆಲ್‌ ಬೆಲೆ 8.88 ಮತ್ತು ಪೆಟ್ರೋಲ್‌ ಬೆಲೆ ಲೀಟರ್‌ಗೆ 7.97 ರೂ. ಹೆಚ್ಚಳವಾಗಿದೆ.

ಸದ್ಯ ದರ ಹೆಚ್ಚಳ ಕುರಿತು ವಾಹನ ಸವಾರರಿಗೆ ಅಸಮಾಧನವಾಗಿದ್ದು, ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ದೆಹಲಿಯಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ಗೆ 78.88 ರೂ.ಗಳಿಂದ 79.23 ರೂ.ಗೆ ಏರಿಕೆಯಾಗಿದ್ದು, ಡೀಸೆಲ್‌ ದರ 77.67 ರೂ.ಗಳಿಂದ 78.27 ರೂ.ಳಿಗೆ ಜಿಗಿದಿದೆ.

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ ದರಗಳ ಪಟ್ಟಿಯಲ್ಲಿಯೂ ಪರಿಷ್ಕರಣೆ ಆಗಿದ್ದು, ಮುಂಬಹಿಯಲ್ಲಿ ಪ್ರತಿ ಲೀ. ಪೆಟ್ರೋಲ್‌ ದರ 86.04 ರೂ.ಮತ್ತು ಡೀಸೆಲ್‌ 76.69 ರೂ. ಇದ್ದು, ಬೆಂಗಳೂರಿನಲ್ಲಿ ಪೆಟ್ರೋಲ್‌ಗೆ 81.81 ಮತ್ತು ಡೀಸೆಲ್‌ 74.43 ರೂ. ಹಾಗೂ ಚೆನ್ನೈನಲ್ಲಿ ಪೆಟ್ರೋಲ್‌ 82.58 ಮತ್ತು ಡೀಸೆಲ್‌ 75.80 ರೂ. ಮತ್ತು ಹೈದರಾಬಾದ್‌ ಅಲ್ಲಿ ಪೆಟ್ರೋಲ್‌ 82.25 ಮತ್ತು ಡೀಸೆಲ್‌ 76.49 ರೂ.ಗಳಷ್ಟು ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next