Advertisement

ಮುಂಬಯಿ : 91 ರೂ. ದಾಟಿದ ಪೆಟ್ರೋಲ್‌ ದರ, ಡೀಸೆಲ್‌ 80 ರೂ. ಗೆ ಸನಿಹ

11:06 AM Oct 01, 2018 | Team Udayavani |

ಮುಂಬಯಿ : ಅಕ್ಟೋಬರ್‌ ತಿಂಗಳ ಮೊದಲ ದಿನವಾದ ಇಂದು ಸೋಮವಾರವೇ ಮುಂಬಯಿಯಲ್ಲಿ ಪೆಟ್ರೋಲ್‌ ಬೆಲೆ ಲೀಟರಿಗೆ 91 ರೂ ದಾಟಿದೆ. 

Advertisement

ಈ ವರ್ಷ ಆಗಸ್ಟ್‌ ಮಧ್ಯ ಭಾಗದಿಂದಲೇ ಒಂದೇ ಸಮನೆ ಏರಲು ತೊಡಗಿದ ಪೆಟ್ರೋಲ್‌ ದರ ಇಂದು ಮುಂಬಯಿಯಲ್ಲಿ ಲೀಟರಿಗೆ 24 ಪೈಸೆ ಏರಿ 91.08 ರೂ. ಗೆ ಏರಿತು.

ದಿಲ್ಲಿಯಲ್ಲಿ ಮುಂಬಯಿಗೆ ಸಮನಾದ ಏರಿಕೆ ಕಂಡು ಬಂದಿರುವ ಹೊರತಾಗಿಯೂ ಲೀಟರ್‌ ಪೆಟ್ರೋಲ್‌ ದರ 83.73 ರೂ. ಆಗಿದೆ. 

ಮುಂಬಯಿ ಯಲ್ಲಿ  ಡೀಸೆಲ್‌ ಲೀಟರ್‌ ದರ 32 ಪೈಸೆ ಏರಿ 79.72 ರೂ. ಆಗಿದೆಯಾದರೆ ದಿಲ್ಲಿಯಲ್ಲಿ 30 ಪೈಸೆ ಏರಿ 75.09 ರೂ. ಆಗಿದೆ. 

ಮುಂಬಯಿ, ದಿಲ್ಲಿಗೆ ಹೋಲಿಸಿದರೆ ಚೆನ್ನೈನಲ್ಲಿ ಇಂದು ಪೆಟ್ರೋಲ್‌ ದರ ಲೀಟರಿಗೆ 25 ಪೈಸೆ ಏರಿ 87.0ಡ ರೂ.ಆಗಿದೆ. ಡೀಸೆಲ್‌ ದರ ಲೀಟರಿಗೆ 32 ಪೈಸೆ ಏರಿ 79.40 ರೂ. ಆಗಿದೆ. 

Advertisement

ಕೋಲ್ಕತದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಲೀಟರಿಗೆ ಅನುಕ್ರಮವಾಗಿ 23 ಪೈಸೆ ಮತ್ತು 30 ಪೈಸೆ ಏರಿದೆ; ಹಾಗಾಗಿ ಇವುಗಳ ದರ ಲೀಟರಿಗೆ ಅನುಕ್ರಮವಾಗಿ 85.53 ಮತ್ತು 76.94 ರೂ. ಆಗಿದೆ. 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next