Advertisement
ಇಷ್ಟೊಂದು ಅಗ್ಗದ ಪೆಟ್ರೋಲ್ ಮತ್ತು ಡೀಸೆಲ್ ದರಗಳಿಗೆ ಸೇರುವ ತೆರಿಗೆ ಮತ್ತು ಡೀಲರ್ ಕಮಿಷನ್ ಪ್ರಮಾಣ ಅನುಕ್ರಮವಾಗಿ ಶೇ.96.9 ಮತ್ತು ಶೇ.60.3 ಆಗಿರುತ್ತದೆ ಎಂಬ ವಿಷಯವನ್ನು ಲೋಕಸಭೆಯಲ್ಲಿ ಇಂದು ಶುಕ್ರವಾರ ಸಹಾಯಕ ಹಣಕಾಸು ಸಚಿವ ಶಿವ ಪ್ರತಾಪ್ ಶುಕ್ಲಾ ಲಿಖೀತವಾಗಿ ತಿಳಿಸಿದರು.
Related Articles
Advertisement
ಕಳೆದ ಹಣಕಾಸು ವರ್ಷದಲ್ಲಿ ಕೇಂದ್ರ ಸರಕಾರಕ್ಕೆ ಪೆಟ್ರೋಲ್ ಮಾರಾಟದಿಂದ 73,516.80 ಕೋಟಿ ರೂ. ಅಬಕಾರಿ ಸುಂಕ ಸಿಕ್ಕಿದೆ; ಡೀಸೆಲ್ ಮಾರಾಟದಿಂದ 1.5 ಲಕ್ಷ ಕೋಟಿ ರೂ. ಸಿಕ್ಕಿದೆ ಎಂದು ಸಚಿವರು ಹೇಳಿದರು.
ಹಾಲಿ ಹಣಕಾಸು ವರ್ಷದ ಮೊದಲ ಆರು ತಿಂಗಳಲ್ಲಿ ಕೇಂದ್ರ ಸರಕಾರಕ್ಕೆ ಪೆಟ್ರೋಲ್ ಮಾರಾಟದಿಂದ 25,318.10 ಕೋಟಿ ರೂ. ಮತ್ತು ಡೀಸೆಲ್ ಮಾರಾಟದಿಂದ 46,548.80 ಕೋಟಿ ರೂ. ಅಬಕಾರಿ ಸುಂಕ ಸಂಗ್ರಹವಾಗಿದೆ ಎಂದು ಸಚಿವರು ಹೇಳಿದರು.