Advertisement

ಬಂಕ್‌ ಶೌಚಾಲಯ ಸಾರ್ವಜನಿಕರಿಗಲ್ಲ

06:00 AM Jul 22, 2018 | Team Udayavani |

ಹೊಸದಿಲ್ಲಿ: ದೇಶದ ಯಾವುದೇ ಪೆಟ್ರೋಲ್‌ ಬಂಕ್‌ಗಳಲ್ಲಿನ ಶೌಚಾಲಯಗಳನ್ನು ಸಾರ್ವಜನಿಕ ಶೌಚಾಲಯದಂತೆ ಬಳಸುವಹಾಗಿಲ್ಲ ಎಂದು ಪೆಟ್ರೋಲಿಯಂ ಮತ್ತು  ಸ್ಪೋಸುರಕ್ಷಾ ಸಂಸ್ಥೆ (ಪೆಸ್ಕೋ) ಸ್ಪಷ್ಟಪಡಿಸಿದೆ. ಆಂಧ್ರಪ್ರದೇಶ ಪೆಟ್ರೋಲಿಯಂ ಅಸೋಸಿಯೇಷನ್‌ ಪ್ರಕರಣವೊಂದಕ್ಕೆ ಪೆಸ್ಕೋ ಈ ಸ್ಪಷ್ಟನೆ ನೀಡಿದೆ.  ಪೆಟ್ರೋಲ್‌ ಬಂಕ್‌ಗಳಲ್ಲಿನ ಶೌಚಾಲಯಗಳು ಆಯಾ ಬಂಕ್‌ಗಳಿಗೆ ಇಂಧನ ತುಂಬಿಸಿಕೊಳ್ಳಲು ಬರುವ ವಾಹನ ಸವಾರರು ಹೊರತುಪಡಿಸಿ ಇತರರ ಉಪಯೋಗಕ್ಕೆ ಬೇಡ ಎಂದು ಪೆಸ್ಕೋ ತಿಳಿಸಿದೆ. ಈ ಹೇಳಿಕೆ, ಪುಣೆ ಮಹಾನಗರ ಪಾಲಿಕೆ ಹಾಗೂ ಪುಣೆಯ ಪೆಟ್ರೋಲ್‌ ಮಾರಾಟಗಾರರ ಸಂಘದ ನಡುವಿನ ವಿವಾದವೊಂದಕ್ಕೂ ಪರಿಹಾರ ಕಲ್ಪಿಸಿದೆ. ಇತ್ತೀಚೆಗೆ, ಪುಣೆ ಪಾಲಿಕೆ, ತನ್ನ ವ್ಯಾಪ್ತಿಯ ಪೆಟ್ರೋಲ್‌ ಬಂಕ್‌ಗಳಲ್ಲಿನ ಶೌಚಾಲಯಗಳ ಮೇಲೆ ಸ್ವತ್ಛ ಭಾರತ ಅಭಿಯಾನದ ಚಿಹ್ನೆ ಹಾಕಬೇಕು ಹಾಗೂ ಆ ಮೂಲಕ ಅವುಗಳನ್ನು ಸಾರ್ವಜನಿಕರ ಬಳಕೆಗೆ ಅನುವು ಮಾಡಿಕೊಡಬೇಕು ಎಂದು ಆದೇಶ ಹೊರಡಿಸಿತ್ತು. ಇದರ ವಿರುದ್ಧ ಪುಣೆಯ ಪೆಟ್ರೋಲ್‌ ಮಾರಾಟಗಾರರು ಹಾಗೂ ವಿತರಕರು ಅಸಮಾಧಾನ ವ್ಯಕ್ತಪಡಿಸಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next