ಸರ್ಕಾರದೊಂದಿಗೆ ಸಂಘರ್ಷ ನಡೆಸುವ ಬದಲಿಗೆ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವ ಸಲುವಾಗಿ ದೇಶವ್ಯಾಪಿ
ಮುಷ್ಕರ ಕೈಬಿಡಲು ಪೆಟ್ರೋಲಿಯಂ ಡೀಲರ್ ಸಂಘಟನೆಗಳು ನಿರ್ಧರಿಸಿವೆ.
Advertisement
ಗಾಂಧಿ ಜಯಂತಿಯಂದು ಕೇಂದ್ರ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಕೈಬಿಡುವುದು ಸೇರಿದಂತೆ ನಾನಾ ಬೇಡಿಕೆಈಡೇರಿಕೆಗೆ ಒತ್ತಾಯಿಸಿ ರಾಷ್ಟ್ರಮಟ್ಟದ ಮೂರು ಸಂಘಟನೆಗಳು ಒಟ್ಟುಗೂಡಿ “ಯುನೈಟೆಡ್ ಪೆಟ್ರೋಲಿಯಂ ಫ್ರಂಟ್’ನ
ನೇತೃತ್ವದಲ್ಲಿ ಅ.13ರಂದು ದೇಶವ್ಯಾಪಿ ಮುಷ್ಕರ ನಡೆಸಲು ನಿರ್ಧರಿಲಾಗಿತ್ತು. ಆದರೆ ಮುಷ್ಕರಕ್ಕೆ ಬದಲಾಗಿ ಮಾತುಕತೆ
ಮೂಲಕವೇ ಸಮಸ್ಯೆ ಬಗೆಹರಿಸಿಕೊಳ್ಳಲು ನಿರ್ಧರಿಸಿರುವುದರಿಂದ ಅ.13ರ ಮುಷ್ಕರ ಕೈಬಿಡಲು ಬುಧವಾರ ನಿರ್ಧರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಪೆಟ್ರೋಲಿಯಂ ಡೀಲರ್ ಸಂಘದ ಅಧ್ಯಕ್ಷ ಎಚ್.ಎಸ್. ಮಂಜಪ್ಪ ತಿಳಿಸಿದರು.