ಬೆಂಗಳೂರು: ನಿರಂತರ ಆರ್ಥಿಕ ನಷ್ಟ ಎದುರಿಸುತ್ತಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಪರ್ಯಾಯ ಆದಾಯ ಮೂಲಗಳತ್ತ ಮುಖಮಾಡುತ್ತಿದ್ದು,ಈ ನಿಟ್ಟಿನಲ್ಲಿ ಪೆಟ್ರೋಲ್- ಡೀಸೆಲ್ ಮಾರಾಟಕ್ಕೆ ಮುಂದಾಗಿದೆ! ಇದಕ್ಕಾಗಿ ಪೆಟ್ರೋಲ್ ಬಂಕ್‌ಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದ್ದು, ಈ ಸಂಬಂಧ ಶಾಂತಿನಗರ, ಮೈಸೂರು ರಸ್ತೆ ಸೇರಿದಂತೆ ಕೇಂದ್ರಭಾಗದಲ್ಲಿರುವ ಆಯ್ದ ಹತ್ತು ಘಟಕಗಳನ್ನು ಗುರುತಿಸಲಾಗಿದೆ. ಅಲ್ಲಿ ಖಾಸಗಿ ವಾಹನಗಳಿಗೆ ಪೆಟ್ರೋಲ್ ಮತ್ತು ಡೀಸೆಲ್ ತುಂಬಲಿದೆ.
ಬಿಎಂಟಿಸಿ ಡಿಪೋಗಳಲ್ಲಿ ಖಾಲಿ ಜಾಗಗಳಿವೆ. ಅದನ್ನು ಬಂಕ್ ಸ್ಥಾಪನೆಗಾಗಿ ಬಾಡಿಗೆ ಕೊಡಬಹುದು ಅಥವಾ ಸ್ವತಃ ಸಾರಿಗೆ ಸಂಸ್ಥೆಯು ಡೀಲರ್‌ಶಿಪ್ ತೆಗೆದುಕೊಂಡು ನೇರವಾಗಿ ಗ್ರಾಹಕರಿಗೆ ಪೆಟ್ರೋಲ್-ಡೀಸೆಲ್ ಮಾರಾಟ ಮಾಡಬಹುದು. ಈ ಎರಡೂ ಮಾದರಿಗಳು ತನ್ನ ಮುಂದಿವೆ. ಸೂಕ್ತವಾದುದನ್ನು ಆಡಳಿತ ಮಂಡಳಿ ಮುಂದಿಟ್ಟು ತೀರ್ಮಾನ ಕೈಗೊಳ್ಳಲಿದೆ ಎಂದು ಮೂಲ ಗಳು ತಿಳಿಸಿವೆ. ಮೂಲಗಳಪ್ರಕಾರ ಡೀಲರ್‌ಶಿಪ್‌ಪಡೆಯಲುಬಿಎಂ ಟಿಸಿ ಆಸಕ್ತಿ ಹೊಂದಿದೆ. ಇದಕ್ಕಾಗಿ ಟೆಂಡರ್ ಕರೆಯಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಒಂದು ವೇಳೆ ಇದೆಲ್ಲವೂ ಅಂದುಕೊಂಡಂತಾದರೆ, ಪೆಟ್ರೋಲ್- ಡೀಸೆಲ್ ನೇರ ಮಾರಾಟದಿಂದಲೇ ತಲಾ ಒಂದು ಬಂಕ್‌ನಿಂದ ಸಂಸ್ಥೆಗೆ ಕನಿಷ್ಠ ಐದು ಲಕ್ಷ ರೂ. ಆದಾಯ ಬರುತ್ತದೆ ಎಂದು ಅಂದಾಜಿಸಲಾಗಿದೆ.
ಆರಂಭದಲ್ಲಿ ಹತ್ತು ಡಿಪೋಗಳನ್ನು ತೆಗೆದುಕೊಂಡರೂ 50 ಲಕ್ಷ ರೂ. ಆಗುತ್ತದೆ. ಕೋವಿಡ್ ನಂತರ ಬಿಎಂಟಿಸಿ ಕಾರ್ಯಾಚರಣೆ ಆದಾಯ ಒಂದೂವರೆಕೋಟಿ ರೂ. ಇದೆ. ಅಂದರೆ ಹೆಚ್ಚು-ಕಡಿಮೆ ಶೇ. 30-40ರಷ್ಟು ಆದಾಯ ಹೆಚ್ಚು ಶ್ರಮವಿಲ್ಲದೆ, ಅನಾಯಾಸವಾಗಿ ಬರುತ್ತದೆ ಎನ್ನಲಾಗಿದೆ. ಸರ್ಕಾರದಒಂದುಅಂಗಸಂಸ್ಥೆಪೆಟ್ರೋಲ್-ಡೀಸೆಲ್ ಮಾರಾಟ ಮಾಡುವುದರಿಂದ ಗ್ರಾಹಕರಿಗೆ ಹೆಚ್ಚು ವಿಶ್ವಾಸ ಇರುತ್ತದೆ. ಅಲ್ಲದೆ, ಕೇಂದ್ರ ಭಾಗದಲ್ಲಿ ಡಿಪೋಗಳಿವೆ. ಈ ಕಾರಣಗಳಿಂದ ಸಹಜವಾಗಿ ಗ್ರಾಹಕರುಬಿಎಂಟಿಸಿಬಂಕ್ ಗಳಿಗೆ ಬರುತ್ತಾರೆ. ಬಂಕ್‌ಗಳಿಗೆ ಲೈಟ್ ಡ್ಯುಟಿಗೆ ನೇಮಿಸುವವರನ್ನು (ಸಾಮಾನ್ಯವಾಗಿ 50 ವರ್ಷ ಮೇಲ್ಪಟ್ಟವರು) ನಿಯೋಜಿಸಲು ಉದ್ದೇಶಿಸಲಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಉದಯವಾಣಿಗೆ ತಿಳಿಸಿದರು.
ಉಳಿತಾಯ ಮತ್ತು ಸಂಪನ್ಮೂಲ ಕ್ರೋಢೀಕರಣಕ್ಕಾಗಿ ಕೆಲಸಕ್ಕೆಕತ್ತರಿ,ಕಡ್ಡಾಯ ಸ್ವಯಂ ನಿವೃತ್ತಿಯಂತಹ ಹಲವು ಆಯ್ಕೆಗಳು ಬಿಎಂಟಿಸಿ ಮುಂದಿವೆ. ಆದರೆ, ಮುಂದಿನ ದಿನಗಳಲ್ಲಿ ಕೊರೊನಾ ಅಲೆಗಳುಬರುತ್ತಲೇ ಇರುತ್ತವೆ.ಹಾಗಾಗಿ,ಜನವೈಯಕ್ತಿಕ ವಾಹನಗಳತ್ತ ಮುಖಮಾಡುತ್ತಿದ್ದಾರೆ. ಈ ಮಧ್ಯೆ ನಮ್ಮ ಮೆಟ್ರೋ ಜಾಲ ವಿಸ್ತರಣೆಯಾಗುತ್ತಿದೆ. ಉಪನಗರ ರೈಲು ಕೂಡ ಬರುತ್ತಿದೆ. ಪರಿಣಾಮ ಮಹಾನಗರ ಸಾರಿಗೆ ಸಂಸ್ಥೆ ತನ್ನ ಪ್ರಯಾಣಿಕರನ್ನು ಕಳೆದುಕೊಳ್ಳುತ್ತಿದೆ. ಆದ್ದರಿಂದ ಶಾಶ್ವತಆದಾಯ ಮೂಲಕ್ಕಾಗಿ ಪೆಟ್ರೋಲ್ ಬಂಕ್‌ಗಳನ್ನು ತೆರೆಯಲು ಅದು ಆಸಕ್ತಿ ಹೊಂದಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು. ಮುಂದಿನ ದಿನಗಳಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇದೇ ಬಂಕ್‌ಗಳ ಆವರಣದಲ್ಲಿ ವಾಣಿಜ್ಯ ಮಳಿಗೆಗಳನ್ನು ತೆರೆಯಲೂ ಬಿಎಂಟಿಸಿ ಚಿಂತನೆ ನಡೆಸಿದೆ. ಇಲ್ಲಿ ರೈತರ ಉತ್ಪನ್ನಗಳ ನೇರ ಮಾರಾಟಕ್ಕೆ ವೇದಿಕೆಕಲ್ಪಿಸು ವುದು, ಇದರಿಂದ ಗ್ರಾಹಕರಿಗೆ ಗುಣಮಟ್ಟದ ತರಕಾರಿ- ಹಣ್ಣು ದೊರೆಯುತ್ತವೆ. ಮತ್ತೂಂದೆಡೆ ರೈತರಿಗೂ ಅನುಕೂಲ ಆಗುತ್ತದೆ.ಈನಿಟ್ಟಿನಲ್ಲಿ ರೈತ ಉತ್ಪಾದಕ ಸಂಘಗಳ ಹುಡುಕಾಟ ನಡೆದಿದೆ ಎಂದೂ ಅಧಿಕಾರಿಗಳು ಮಾಹಿತಿ ನೀಡಿದರು.