Advertisement
ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್‌ನ ಎನ್.ಎ. ಹ್ಯಾರೀಸ್ ಪ್ರಸ್ತಾವಕ್ಕೆ ಸಚಿವ ಶ್ರೀರಾಮುಲು ಪರವಾಗಿ ಉತ್ತರಿಸಿದ ಅವರು, ಕೊರೊನಾ ಹಾವಳಿ, ನಾಲ್ಕು ವರ್ಷಗಳಿಂದ ಬಸ್ ದರ ಏರಿಕೆ ಮಾಡದಿರುವುದು, ಡೀಸೆಲ್ ದರ ಹೆಚ್ಚಳ ಕಾರಣಗಳಿಂದ ಸಾರಿಗೆ ಸಂಸ್ಥೆಗಳು ನಷ್ಟದಲ್ಲಿವೆ. ಇದನ್ನು ಲಾಭದಾಯಕ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
Related Articles
ಇದಕ್ಕೂ ಮುನ್ನ ಮಾತನಾಡಿದ ಹ್ಯಾರೀಸ್, ರಾಜ್ಯ ರಸ್ತೆ ಸಾರಿಗೆ ನಿಗಮಗಳ ನಷ್ಟಕ್ಕೆ ಕಾರಣಗಳೇನು ಎನ್ನುವ ಬಗ್ಗೆ ಅಧ್ಯಯನ ನಡೆಸಲು ಜಂಟಿ ಸದನ ಸಮಿತಿ ರಚಿಸಿ. ಮೂರು ವರ್ಷಗಳಲ್ಲಿ ನಾಲ್ಕೂ ನಿಗಮಗಳು 2900 ಕೋಟಿ ರೂ. ನಷ್ಟ ಅನುಭವಿಸಿವೆ. ನಾಲ್ಕೈದು ಬಸ್ ಇಟ್ಟುಕೊಂಡಿರುವವರು ಇಂದು ಲಾಭದಲ್ಲಿದ್ದಾರೆ. ಆದರೆ, ಸಾರಿಗೆ ಸಂಸ್ಥೆ ನಷ್ಟದಲ್ಲಿದೆ ಎಂದರು. ಇದಕ್ಕೆ ಮಧ್ಯಪ್ರವೇಶಿಸಿದ ಸ್ಪೀಕರ್ ಕಾಗೇರಿ, ಸಾರಿಗೆ ಸಂಸ್ಥೆಗಳು ಲಾಭಕ್ಕೆ ಬರುವ ಆಶಾಭಾವನೆ ಇದೆಯಾ ನಿಮಗೆ. ನಮ್ಮಲ್ಲಿ ಬಿಳಿ ಆನೆಗಳು ಸಾಕಷ್ಟಿವೆಯಲ್ಲವೇ, ಅವುಗಳನ್ನೇನು ಮಾಡೋದು ಎಂದು ಚಟಾಕಿ ಹಾರಿಸಿದರು.
Advertisement