ಹೊಸದಿಲ್ಲಿ: ದೇಶದಲ್ಲಿ ಪೆಟ್ರೋಲ್ ದರ ಮತ್ತೆ ಗಗನಕ್ಕೇರುವ ಸಾಧ್ಯತೆಗಳು ನಿಶ್ಚಲವಾಗಿದೆ. ಇತ್ತೀಚಿನ ಒಂದು ತಿಂಗಳಲ್ಲಿ ಪೆಟ್ರೋಲ್ ದರಗಳು ಪೈಸೆ ಲೆಕ್ಕದಲ್ಲಿ ಏರಿಕೆಯಾಗುತ್ತಿದ್ದು ಇದೀಗ 80 ರೂ. ಗಳ ಆಸುಪಾಸಿಗೆ ಬಂದಿದೆ.
ಸೋಮವಾರ ಪೆಟ್ರೋಲ್ ಲೀಟರ್ ಒಂದಕ್ಕೆ 9 ಪೈಸೆ ಹೆಚ್ಚಳವಾಗಿದ್ದು, ಡಿಸೇಲ್‌ಗೆ 26 ಪೈಸೆ ಹೆಚ್ಚಾಗಿದೆ.ಈ ವರ್ಷದ ಕಡೆಯ ತಿಂಗಳಲಿನಲ್ಲಿ ಪೆಟ್ರೋಲ್ ವಾರ್ಷಿಕ ಗರಿಷ್ಟ ಮೊತ್ತದತ್ತ ದಾಪುಗಾಳು ಇಡುವ ಸಾಧ್ಯತೆ ಇದೆ. ಆಯಾ ರಾಜ್ಯಗಳಲ್ಲಿ ದರ ಏರಿಕೆಯಲ್ಲಿ ವ್ಯತ್ಯಾಸಗಳು ಇವೆ.
ಹೊಸದಿಲ್ಲಿಯಲ್ಲಿ ಲೀಟರ್ ಪೆಟ್ರೋಲ್‌ಗೆ 75 ರೂ.ಗಳಿದ್ದು, ಡಿಸೇಲ್‌ಗೆ 66.04 ರೂ.ಗಳಿವೆ. ಮುಂಬಯಿನಲ್ಲಿ ಪೆಟ್ರೋಲ್ ಮತ್ತು ಡಿಸೇಲ್‌ಗೆ ಕ್ರಮವಾಗಿ 80.65 ಮತ್ತು 69.27 ಪೈಸೆ ಇದೆ. ಬೆಂಗಳೂರಿನಲ್ಲಿನ ಪೆಟ್ರೋಲ್ 77.57 ಡಿಸೇಲ್ 68.29 ರೂ.ಗಳಿವೆ. ಇನ್ನು ಹೈದರಾಬಾದ್‌ನಲ್ಲಿ ಪೆಟ್ರೋಲ್ ಮತ್ತು ಡಿಸೇಲ್ 70 ರೂ.ಗಳ ಮೇಲೆ ಇದ್ದು, ಪೆಟ್ರೋಲ್‌ಗೆ 79.81 ಮತ್ತು ಡಿಸೇಲ್‌ಗೆ 72.07 ರೂ.ಗಳಿಗೆ ಇಂದು ಮಾರಾಟವಾಗಿದೆ.
ಮುಂಬರುವ ದಿನಗಳಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಸೇರಿದಂತೆ ಇತರ ಇಂಧನಗಳ ದರಗಳಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ. ಸೌದಿ ಅರೇಬಿಯಾ ಈಗಾಗಲೇ ನಿರ್ಧರಿಸಿದಂತೆ ಕಚ್ಚಾತೈಲ ಉತ್ಪಾದನೆಯನ್ನು ಸ್ವಲ್ಪ ಕಡಿತಗೊಳಿಸಲಿದೆ. ಇದು ಮುಂಬರುವ ದಿನಗಳಲ್ಲಿ ಬೇಡಿಕೆಯನ್ನು ಆಧರಿಸಿ ದರ ಏರಿಕೆಗೆ ಕಾರಣವಾಗಲಿದೆ.
ಪ್ರಮುಖ ನಗರಗಳಲ್ಲಿ ಇಂಧನ ದರಗಳು
ನಗರ ಪೆಟ್ರೋಲ್ ಡಿಸೇಲ್
ದಿಲ್ಲಿ 74.86 65.84
ಕಲ್ಕತ್ತಾ 77.54 68.25
ಮುಂಬಯಿ 80.51 69.06
ಚೆನ್ನೈ 77.83 69.59