ಹೊಸದಿಲ್ಲಿ: ದೇಶದಲ್ಲಿ ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್‌ಗೆ ದಿಲಿಯಲ್ಲಿÉ ಕ್ರಮವಾಗಿ 27, 18 ಪೈಸೆ ದರ ಹೆಚ್ಚಾಗಿದೆ. ಹಿಂದಿನ ಆರು ದಿನಗಳಲ್ಲಿ ಒಟ್ಟಾರೆ, ಪ್ರತಿ ಲೀ. ಪೆಟ್ರೋಲ್‌ಗೆ 1.59 ರೂ., ಡೀಸೆಲ್‌ಗೆ 1.31ರೂ. ಏರಿಕೆಯಾಗಿದೆ. 2 ವರ್ಷಗಳಿಗೆ ಹೋಲಿಕೆ ಮಾಡಿದರೆ ಇದು ಗರಿಷ್ಠ ದರ ಏರಿಕೆಯಾಗಿದೆ. ದಿಲ್ಲಿ ಪೆಟ್ರೋಲ್‌ಗೆ ಕೋಲ್ಕತಾದಲ್ಲಿ 76.32 ರೂ., ಮುಂಬಯಿನಲ್ಲಿ 79.29 ರೂ., ಚೆನ್ನೈಯಲ್ಲಿ 76.52 ರೂ., ಹೊಸದಿಲ್ಲಿಯಲ್ಲಿ 73.62 ರೂ. ಆಗಿದ್ದರೆ, ಪ್ರತಿ ಲೀ. ಡೀಸೆಲ್‌ಗೆ ಕೋಲ್ಕತಾದಲ್ಲಿ 69.15 ರೂ., ಮುಂಬಯಿನಲ್ಲಿ 70.01 ರೂ., ಚೆನ್ನೈಯಲ್ಲಿ 70.56 ರೂ., ಹೊಸ ದಿಲ್ಲಿಯಲ್ಲಿ 66.74 ರೂ. ಆಗಿತ್ತು. ಸೌದಿ ಅರೇಬಿಯಾದ ಅರಾಮೊRàದ ಮೇಲೆ ಹುತಿ ಬಂಡುಕೋರರು ಕಳೆದ ವಾರ ದಾಳಿ ನಡೆಸಿದ ಬಳಿಕ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಗಣನೀಯ ಏರಿಕೆಯಾಗಿತ್ತು. ಡಾಲರ್ ಮತ್ತು ರೂಪಾಯಿ ಏರಿಳಿಕೆಯ ಅನ್ವಯ ಸರಕಾರಿ ಸ್ವಾಮ್ಯದ ನಾಲ್ಕು ತೈಲ ಕಂಪೆನಿಗಳು ಪ್ರತಿದಿನ ಬೆಲೆ ನಿಗದಿ ಮಾಡುತ್ತವೆ.