ಹೊಸದಿಲ್ಲಿ : ನಿರಂತರ ಹದಿನಾರು ದಿನಗಳಿಂದ ಏರುತ್ತಾ ಬಂದಿರುವ ಪೆಟ್ರೋಲ್ ಮತ್ತು ಡೀಸಿಲ್ ದರಗಳು ಇಂದು ಕೊನೆಗೂ ಇಳಿದಿವೆ – ಆದರೆ ಕೇವಲ 1 ಪೈಸೆಯಷ್ಟು !
ಚೋದ್ಯದ ಸಂಗತಿ ಎಂದರೆ ಐಓಸಿ ವೆಬ್‌ಸೈಟ್‌ನಲ್ಲಿ ಇಂದು ದಿಲ್ಲಿ ಮತ್ತು ಮುಂಬಯಿ ಯಲ್ಲಿ ಪೆಟ್ರೋಲ್ ಮತ್ತು ಡೀಸಿಲ್ ದರಗಳು ಅನುಕ್ರಮವಾಗಿ ಲೀಟರ್‌ಗೆ 60 ಮತ್ತು 59 ಪೈಸೆ ಇಳಿದಿರುವುದಾಗಿ ಪ್ರಕಟಿಸಲಾಗಿತ್ತು.
ಅದಾಗಿ ಸ್ವಲ್ಪವೇ ಹೊತ್ತಿನ ಬಳಿಕ ಐಓಸಿ ತನ್ನ ಈ ಪ್ರಕಟನೆಯನ್ನು ಸರಿಪಡಿಸಿ ಪೆಟ್ರೋಲ್ , ಡೀಸಿಲ್ ದರ ಕೇವಲ 1 ಪೈಸೆ ಇಳಿದಿರುವುದಾಗಿ ಸ್ಪಷ್ಟಪಡಿಸಿತು.
ಅಂತೆಯೇ ನಾಲ್ಕು ಮೆಟ್ರೋಪಾಲಿಟನ್ ನಗರಗಳಾಗಿರುವ ದಿಲ್ಲಿ, ಕೋಲ್ಕತ, ಮುಂಬಯಿ ಮತ್ತು ಚೆನ್ನೈನಲ್ಲಿ ಪೆಟ್ರೋಲ್ ದರ ಲೀಟರಿಗೆ ಅನುಕ್ರಮವಾಗಿ 78.42, 81.05, 86.25 ಮತ್ತು 81.42 ರೂ ಇರುವುದಾಗಿ ಐಓಸಿ ಅಧಿಕೃತವಾಗಿ ಹೇಳಿದೆ.
ಹಾಗೆಯೇ ದಿಲ್ಲಿ, ಕೋಲ್ಕತ, ಮುಂಬಯಿ ಮತ್ತು ಚೆನ್ನೈನಲ್ಲಿ ಡೀಸಿಲ್ ಲೀಟರ್ ದರ ಅನುಕ್ರಮವಾಗಿ 69.30, 71.85, 73.78 ಮತ್ತು 73.17 ರೂ. ಇರುವುದಾಗಿ ಅದು ತಿಳಿಸಿತು.