Advertisement
ಕಚ್ಚಾ ತೈಲವನ್ನು ಅತಿ ಹೆಚ್ಚು ಆಮದು ಮಾಡಿಕೊಳ್ಳುವ ರಾಷ್ಟ್ರಚೀನ. ಕೊರೊನಾ ಬಾಧೆಯಿಂದಾಗಿ ಅಲ್ಲಿನ ಹಲವು ಕೈಗಾರಿಕೆಗಳು ಮುಚ್ಚಿವೆ ಹಾಗೂ ಹಲವು ಕಡೆ ಸಾರಿಗೆ ವ್ಯವಸ್ಥೆಯನ್ನೇ ಸ್ಥಗಿತ ಗೊಳಿಸಲಾಗಿದೆ. ಈ ಎಲ್ಲ ಕಾರಣಗಳಿಂದಾಗಿ ಕಚ್ಚಾ ತೈಲದ ಆಮದನ್ನು ಚೀನ ಕಡಿಮೆ ಮಾಡಿದೆ. ಬೇಡಿಕೆ ಇಳಿಕೆಯಾದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗಿದೆ.
ಸಾವಿನ ಸಂಖ್ಯೆ ಕಡಿಮೆಯಾಗಿಲ್ಲ. ಇದರ ನೇರ ಪರಿಣಾಮ ಅಂ.ರಾ.ಮಾರುಕಟ್ಟೆ ಮೇಲೆ ಬೀರಿದ್ದು, ಕಚ್ಚಾತೈಲ ಮತ್ತು ಡಾಲರ್ ಬೆಲೆ ಕಡಿಮೆಯಾಗುತ್ತಿದೆ. ಇದೇ ಕಾರಣಕ್ಕೆ ಪೆಟ್ರೋಲ್, ಡೀಸೆಲ್ ಕುಸಿಯುತ್ತಿದೆ. 2 ವಾರದಲ್ಲಿ ಪೆಟ್ರೋಲ್ 1.28 ರೂ., ಡೀಸೆಲ್ 1.51 ರೂ. ಇಳಿಕೆ ಕಳೆದ ಒಂದು ವಾರಕ್ಕೆ ಹೋಲಿಸಿದರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಮಂಗಳೂರು ನಗರದಲ್ಲಿ ಫೆ. 1ರಂದು ಲೀಟರ್‌ಗೆ 74.97 ರೂ. ಇದ್ದ ಪೆಟ್ರೋಲ್ ಬೆಲೆ ಫೆ. 14ಕ್ಕೆ 73.69ಕ್ಕೆ ಇಳಿದಿದೆ. ಒಟ್ಟಾರೆ ಎರಡು ವಾರದಲ್ಲಿ 1.28 ರೂ. ಕಡಿಮೆಯಾಗಿದೆ. ಅದೇ ರೀತಿ ಫೆ. 1ರಂದು 67.80 ರೂ. ಇದ್ದ ಡೀಸೆಲ್ ಬೆಲೆ ಫೆ. 14ಕ್ಕೆ 66.29 ರೂ.ಗೆ ಇಳಿದಿದೆ. ಅಂದರೆ ಒಂದೇ ವಾರ 1.51 ರೂ. ಕಡಿಮೆಯಾಗಿದೆ. ಉಡುಪಿಯಲ್ಲಿ ಫೆ. 14ರಂದು ಪೆಟ್ರೋಲ್ ಬೆಲೆ ಲೀಟರಿಗೆ 73.08 ರೂ., ಡೀಸೆಲ್‌ಗೆ 66.56 ರೂ. ಇದೆ. ಬೆಂಗಳೂರಿನಲ್ಲಿ ಪೆಟ್ರೋಲ್‌ಗೆ 74.39 ರೂ. ಮತ್ತು ಡೀಸೆಲ್‌ಗೆ 66.97 ರೂ., ಮೈಸೂರಿನಲ್ಲಿ ಪೆಟ್ರೋಲ್‌ಗೆ 73.98 ರೂ., ಡೀಸೆಲ್‌ಗೆ 66.6 ರೂ. ಇತ್ತು.
Related Articles
ಈ ಮಾಸಾರಂಭದಿಂದಲೇ ಪೆಟ್ರೋಲ್-ಡೀಸೆಲ್ ಬೆಲೆ ಪ್ರತೀ ದಿನ ಇಳಿಮುಖವಾಗುತ್ತಿದೆ. ಚೀನದಲ್ಲಿ ಕೊರೊನಾ ವೈರಸ್ ಭೀತಿಯಿಂದಾಗಿ ಅಲ್ಲಿನ ವ್ಯಾಪಾರ-ವಹಿವಾಟು ಕುಸಿದಿರುವುದರ ಪರಿಣಾಮ ಇದು. ಫೆಬ್ರವರಿ ಅಂತ್ಯದ ವರೆಗೂ ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆ ಕಾಣಿಸುತ್ತಿದೆ.
– ಆನಂದ್ ಕಾರ್ನಾಡ್, ಕರ್ನಾಟಕ ರಾಜ್ಯ ಪೆಟ್ರೋಲಿಯಂ ಫೆಡರೇಶನ್ ಕಾರ್ಯದರ್ಶಿ
Advertisement