Advertisement

Cauvery ಪ್ರಾಧಿಕಾರದ ಆದೇಶಕ್ಕೆ ತಡೆ ಕೋರಿ ಸುಪ್ರೀಂಗೆ ಅರ್ಜಿ; ಇಂದು ವಿಚಾರಣೆ

12:39 AM Sep 21, 2023 | Team Udayavani |

ಬೆಂಗಳೂರು: ತಮಿಳು ನಾಡಿಗೆ ಕಾವೇರಿ ನೀರು ಬಿಡಬೇಕು ಎಂಬ ಕಾವೇರಿ ನದಿ ನಿರ್ವ ಹಣ ಪ್ರಾಧಿ ಕಾ ರದ ಆದೇಶಕ್ಕೆ ತಡೆ ನೀಡುವಂತೆ ಕೋರಿ ಕರ್ನಾಟಕ ಬುಧವಾರ ಸುಪ್ರೀಂ ಕೋರ್ಟ್‌ನ ಕದ ತಟ್ಟಿದೆ. ಇದರ ನಡು ವೆಯೇ ಕಾವೇರಿ ನೀರಿ ಗಾಗಿ ತಮಿಳು ನಾಡು ಸಲ್ಲಿಸಿದ್ದ ಮುಖ್ಯ ಅರ್ಜಿಯೂ ಗುರುವಾರ ವಿಚಾರಣೆ ಬರಲಿದೆ.

Advertisement

ಈಗಾಗಲೇ ಎರಡು ಬಾರಿ ಸರ್ವ ಪಕ್ಷ ಸಭೆ ನಡೆಸಿದ್ದ ರಾಜ್ಯ ಸರಕಾರ, ಕಾವೇರಿ ನದಿ ನಿರ್ವ ಹಣ ಪ್ರಾಧಿ ಕಾ ರದ ಆದೇಶ ಬೆನ್ನಲ್ಲೇ ಮಂಗಳವಾರ ದಿಲ್ಲಿಯಲ್ಲಿ ರಾಜ್ಯದಿಂದ ಪ್ರತಿನಿಧಿಸುವ ಕೇಂದ್ರ ಸಚಿ ವರು ಮತ್ತು ಸಂಸದ ರೊಂದಿಗೆ ಸಭೆ ನಡೆಸಿದೆ. ಗುರುವಾರ ಬೆಳಗ್ಗೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಅವರನ್ನೂ ಭೇಟಿ ಮಾಡಲಿರುವ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌, ಕಾವೇರಿ ಕೊಳ್ಳದ ನೀರಿನ ಪರಿಸ್ಥಿತಿ ಸಹಿತ ಒಟ್ಟಾರೆ ಬರಗಾಲದ ಬಗ್ಗೆ ವಿವರಿಸಲಿದ್ದಾರೆ.

ಈ ನಡುವೆ, ಬೆಂಗಳೂರಿಗೆ 21 ಟಿಎಂಸಿ ಹಾಗೂ ಇತರ ನಗರ ಪ್ರದೇಶ  ಗಳಲ್ಲಿ 15 ಟಿಎಂಸಿ ಸಹಿತ ಒಟ್ಟು 36 ಟಿಎಂಸಿ ನೀರು ಬೇಕಿದ್ದು, ಈ ಪ್ರದೇಶ ಗಳ ನೀರಿನ ಬವಣೆ ನೀಗಿಸು ವಂತೆ ವಕೀಲ ವಿವೇಕ್‌ ರೆಡ್ಡಿ ಮೂಲಕ ಬೆಂಗಳೂರು ನಿವಾಸಿಗಳ ಸಂಘ, ಸ್ಯಾಂಕಿಟ್ಯಾಂಕ್‌ ನಿವಾಸಿಗಳ ಸಂಘ ಸಹಿತ ವಿವಿಧ ಸಂಘಟನೆಗಳು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿವೆ.

ಹೀಗಿದ್ದರೂ ತಮಿಳು ನಾಡಿಗೆ ನೀರು ಹೋಗುತ್ತಿದ್ದು,ಇದನ್ನು ವಿರೋಧಿಸಿ ಪ್ರತಿಭಟನೆಗಳು ಮುಂದು ವರಿದಿವೆ. ನೀರು ನಿಲ್ಲಿಸು ವಂತೆ ಒತ್ತಾಯಿಸಿ ಗುರು ವಾರ ನಾರಾಯಣಗೌಡ ಬಣದ ಕನ್ನಡ ರಕ್ಷಣ ವೇದಿಕೆಯು ವಿಧಾನಸೌಧ ಚಲೋ ಹಮ್ಮಿಕೊಂಡಿದೆ.

ಸಂಕಷ್ಟ ಸೂತ್ರ ಇಲ್ಲದಿರುವುದು ಸಮಸ್ಯೆ ಹೆಚ್ಚಲು ಕಾರಣ. ಎರಡೂ ರಾಜ್ಯದವರನ್ನು ಕರೆದು ಅಹ ವಾಲು ಕೇಳುವ ಅಧಿಕಾರ ವ್ಯಾಪ್ತಿ ಪ್ರಧಾನಿಗೆ ಇದ್ದು, ನಾವು ಪ್ರಧಾನಿ ಮಧ್ಯಪ್ರವೇಶಕ್ಕೆ ಮನವಿ ಮಾಡಿದ್ದೇವೆ. ನೀರು ಬಿಡಬೇಕೆಂಬ ಪ್ರಾಧಿಕಾರದ ಆದೇಶಕ್ಕೆ ತಡೆ ನೀಡುವಂತೆ ಸುಪ್ರೀಂಗೂ ಮನವಿ ಮಾಡಿದ್ದೇವೆ.
– ಸಿದ್ದರಾಮಯ್ಯ, ಸಿಎಂ

Advertisement

ಕಾವೇರಿ ನದಿ ನೀರು ವಿಚಾರದಲ್ಲಿ ಒಗ್ಗಟ್ಟಿನ ಕಾನೂನು ಹೋರಾಟ ನಡೆಸಲು ಪಕ್ಷಾತೀತ ತೀರ್ಮಾನ ಆಗಿದೆ. ಅದರಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಸಮರ್ಥ ವಾದ ಮಂಡಿಸಲು ವಕೀಲರ ತಂಡ ಸಿದ್ಧವಿದೆ. ಕೇಂದ್ರ ಸಚಿವರಿಗೂ ನಾಡಿನ ನೀರಿನ ಪರಿಸ್ಥಿತಿ ವಿವರಿಸುತ್ತೇವೆ.
-ಡಿ.ಕೆ. ಶಿವಕುಮಾರ್‌, ಡಿಸಿಎಂ

ನಾವಂತೂ ಕರ್ನಾಟಕದ ಹಿತ ಕಾಯುವ ಪಕ್ಷದಲ್ಲಿ ಇದ್ದೇವೆ. ಇದರಲ್ಲಿ ಯಾವುದೇ ಪಕ್ಷಪಾತ ಇಲ್ಲ. ದೋಸ್ತಿ, ಘಟಬಂಧನಕ್ಕಾಗಿ ನೀರು ಹರಿಸಿ, ಅದರ ಆರೋಪವನ್ನು ಕೇಂದ್ರದ ಮೇಲೆ ಹೊರಿಸಲು ಬಿಡುವುದಿಲ್ಲ. ಸುಪ್ರೀಂ ಮುಂದೆ ಅರ್ಜಿ ಇದೆ. ಈ ಹಂತದಲ್ಲಿ ಪ್ರಧಾನಿ ಭೇಟಿ ಸರಿಯಲ್ಲ. ಈ ವಿಚಾರದಲ್ಲಿ ರಾಜಕೀಯ ಬೇಡ ಎಂದಿದ್ದೇವೆ.
-ಪ್ರಹ್ಲಾದ್‌ ಜೋಷಿ, ಕೇಂದ್ರ ಸಚಿವ

ಅತ್ತ ನೀರು ಬಿಟ್ಟು, ಇತ್ತ ಸಭೆ ಕರೆಯುತ್ತೀರಿ. ಮತ್ತೆ 25 ಸಂಸದರು ಏನು ಮಾಡಿದ್ದೀರಿ ಎಂದು ಕೇಳುತ್ತೀರಿ. ಕಾವೇರಿ ವಿಚಾರ ಇರಬಹುದು, ಬರಗಾಲದ ವಿಚಾರ ಇರಬಹುದು. ಇದುವರೆಗೆ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡದೆ ಪತ್ರ ವ್ಯವಹಾರ ಮಾಡಿದ್ದರು. ನಾವು ಹೇಳಿದ ಬಳಿಕ ಕೇಂದ್ರ ಸಚಿವರ ಭೇಟಿಗೆ ಮುಂದಾಗಿದ್ದಾರೆ.
-ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ

Advertisement

Udayavani is now on Telegram. Click here to join our channel and stay updated with the latest news.

Next