Advertisement

ಸಲಿಂಗ ವಿವಾಹದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ

09:12 PM Apr 03, 2023 | Team Udayavani |

ನವದೆಹಲಿ: ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ವಿರೋಧಿಸಿ ಜಮೀಯತ್‌ ಉಲೆಮಾ- ಇ -ಹಿಂದ್‌ ಸೋಮವಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

Advertisement

ಜತೆಗೆ, ಮದುವೆ, ಸಂತಾನ ಮತ್ತು ಕುಟುಂಬ ಎಂಬ ಮೂಲಕ ರಚನೆಗೆ ಧಕ್ಕೆ ತರುವಂಥ ಪಾಶ್ಚಿಮಾತ್ಯ ಪರಿಕಲ್ಪನೆಯನ್ನು ಇಲ್ಲಿ ತರದಂತೆ ನ್ಯಾಯಾಂಗಕ್ಕೆ ಮನವರಿಕೆ ಮಾಡಿಕೊಡಿ ಎಂದು ಕೇಂದ್ರ ಸರ್ಕಾರವನ್ನೂ ಕೇಳಿಕೊಂಡಿದೆ.

ಸಲಿಂಗ ವಿವಾಹವು ಕುರಾನ್‌ಗೆ ವಿರುದ್ಧವಾದದ್ದು. ಜೀವನಾಂಶ, ಉತ್ತರಾಧಿಕಾರ, ಪೋಷಕತ್ವ ಇತ್ಯಾದಿ ವಿಚಾರಗಳು ಬಂದಾಗ ಲಿಂಗ ಎನ್ನುವುದು ಇಸ್ಲಾಮಿಕ್‌ ಕಾನೂನಿನಲ್ಲಿ ಪ್ರಮುಖ ಪ್ರಾಶಸ್ತ್ಯವನ್ನು ಹೊಂದಿದೆ.

ಸಲಿಂಗ ವಿವಾಹ ಎನ್ನುವುದು ಹಲವು ಶತಮಾನ ಹಳೆಯದಾದ ಪಾಶ್ಚಿಮಾತ್ಯ ಲೈಂಗಿಕ ಸ್ವಾತಂತ್ರ್ಯ ಚಳವಳಿಯ ಪರಿಕಲ್ಪನೆಯಾಗಿದೆ ಎಂದು ಅದು ಪ್ರತಿಪಾದಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next