Advertisement

ಜಯಲಲಿತಾ ಜರತಾರಿ ಸೀರೆಗಳನ್ನು ಬೆಂಗಳೂರಿಗೆ ಸ್ಥಳಾಂತರಿಸಲು ಅರ್ಜಿ

11:01 PM Jul 07, 2023 | Team Udayavani |

ಚೆನ್ನೈ: ಭ್ರಷ್ಟಾಚಾರ ಆರೋಪದಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾರಿಂದ ವಶಪಡಿಸಿಕೊಳ್ಳಲಾಗಿದ್ದ ಕೋಟ್ಯಂತರ ರೂ. ಬೆಲೆಬಾಳುವ ಜರತಾರಿ ಸೀರೆಗಳು, ಬೆಳ್ಳಿಲೇಪಿತ ಸಾಮಗ್ರಿಗಳನ್ನು ಬೆಂಗಳೂರಿಗೆ ಸ್ಥಳಾಂತರಿಸಿ… ಹೀಗೆಂದು ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ಟಿ.ನರಸಿಂಹಮೂರ್ತಿ, ವಿಚಕ್ಷಣಾ ಮತ್ತು ಭ್ರಷ್ಟಾಚಾರ ನಿಯಂತ್ರಣ ಮಹಾನಿರ್ದೇಶನಾಲಯ (ಡಿವಿಎಸಿ)ಕ್ಕೆ ಅರ್ಜಿ ಸಲ್ಲಿಸಿದ್ದಾರೆ.

Advertisement

ಜು.3ರಂದು ಸಲ್ಲಿಸಿರುವ ಈ ಅರ್ಜಿಯಲ್ಲಿ ಜಯಲಲಿತಾರಿಂದ ವಶಪಡಿಸಿಕೊಳ್ಳಲಾದ 28 ವಸ್ತುಗಳನ್ನು ಹರಾಜು ಹಾಕಲು ಬೆಂಗಳೂರು ಕೋರ್ಟ್‌ನ ವಶಕ್ಕೊಪ್ಪಿಸುವಂತೆ ಆಗ್ರಹಿಸಿದ್ದಾರೆ.

ಈ ವಸ್ತುಗಳನ್ನು 1996ರ ಡಿಸೆಂಬರ್‌ನಲ್ಲಿ ಚೆನ್ನೈನ ಅವರ ನಿವಾಸದಿಂದ ಜಪ್ತಿ ಮಾಡಿಕೊಂಡಿತ್ತು. 700 ಕೆ.ಜಿ. ಬೆಳ್ಳಿ ಸಾಮಗ್ರಿಗಳು, ಬೆಲೆಬಾಳುವ 11,344 ಸೀರೆಗಳು, 44 ಎಸಿ, 131 ಸೂಟ್‌ಕೇಸ್‌ಗಳು, 91 ವಾಚ್‌ಗಳು, 146 ಚೇರ್‌ಗಳು, 750 ಚಪ್ಪಲಿಗಳು, 215 ಗ್ಲಾಸ್‌ಗಳು, 27 ಗೋಡೆ ಗಡಿಯಾರಗಳು, 86 ಫ್ಯಾನ್‌ಗಳು, 146 ಅಲಂಕಾರಿಕ ಪರಿಕರಗಳು, 81 ತೂಗುದೀಪಗಳು, 20 ಸೋಫಾ ಸೆಟ್‌ಗಳು, 250 ಶಾಲ್‌ಗ‌ಳು, 12 ಫ್ರಿಡ್ಜ್ಗಳು, 10 ಟಿ.ವಿ. ಸೆಟ್‌ಗಳು, 8 ಸಿವಿಆರ್‌ಗಳು ಮತ್ತು 140 ವೀಡಿಯೋ ಕ್ಯಾಸೆಟ್‌ಗಳು ಇವುಗಳಲ್ಲಿ ಸೇರಿವೆ.

Advertisement

Udayavani is now on Telegram. Click here to join our channel and stay updated with the latest news.

Next