Advertisement

ಪೂಜಾ ಸ್ಥಳ ಕಾಯ್ದೆಯ ವಿರುದ್ಧ ಸುಪ್ರೀಂಗೆ ಸಂತರ ಸಮಿತಿ ಅರ್ಜಿ

01:28 AM Jan 07, 2025 | Team Udayavani |

ಹೊಸದಿಲ್ಲಿ: 1991ರ ಪೂಜಾ ಸ್ಥಳ ಕಾಯ್ದೆ ಜಾರಿ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕು ಎಂದು ಅಖೀಲ ಭಾರತ ಸಂತರ ಸಮಿತಿ ಆಗ್ರಹಿಸಿದೆ. ಆ ಬಗ್ಗೆ ಅದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಈ ಕಾಯ್ದೆಯು ಆಕ್ರಮಣಕಾರರು ನಿರ್ಮಿಸಿದ ಸ್ಥಳ ಗಳಿಗೆ ಮಾನ್ಯತೆ ನೀಡಿದೆ. ಕಾಯ್ದೆಯಲ್ಲಿನ ಸೆಕ್ಷನ್‌ 3 ಮತ್ತು 4 ಅಂಶಗಳು ತಾರತಮ್ಯದಿಂದ ಕೂಡಿವೆ ಎಂದು ಅದು ಆರೋಪಿಸಿದೆ. ಸೆಕ್ಷನ್‌ 3ರ ಅನ್ವಯ 1947 ಆ.15ರ ಬಳಿಕ ಧಾರ್ಮಿಕ ಕೇಂದ್ರಗಳು ಹೊಂದಿರುವ ಯಥಾ ಸ್ಥಿತಿಯನ್ನು ಕಾಪಾಡುವುದು ಮತ್ತು ಸೆಕ್ಷನ್‌ 4 ಧಾರ್ಮಿಕ ವಿವಾದ ವಿಚಾರಣೆಗೆ ಕೋರ್ಟ್‌ಗಳ ಪ್ರವೇಶಕ್ಕೆ ತಡೆಯೊಡ್ಡುತ್ತವೆ. ಈ ಅಂಶಗಳನ್ನು ತೆಗೆದು ಹಾಕಬೇಕು ಎಂದು ಆಗ್ರಹಿಸಲಾಗಿದೆ. ಮುಂದಿನ ತಿಂಗಳು ಅರ್ಜಿಯ ವಿಚಾರಣೆ ನಡೆಯುವ ಸಾಧ್ಯತೆ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next