Advertisement
ಪ್ರಮುಖ ಬೇಡಿಕೆಗಳು– ಮಂಗಳೂರು ಮೀನುಗಾರಿಕೆ ಬಂದರಿನಲ್ಲಿ ಪ್ರಸ್ತುತ 1,500ಕ್ಕೂ ಅಧಿಕ ಮೀನುಗಾರಿಕೆ ಬೋಟುಗಳಿದ್ದು, ಜಾಗದ ಕೊರತೆ ಎದುರಾಗಿದೆ. ಪ್ರತೀ ವರ್ಷ ಹೂಳೆತ್ತುವ ಕಾರ್ಯ ಮಾಡಿಸಬೇಕು. ಮಂಗಳೂರು ಹಳೆ ಬಂದರು ಮತ್ತು ಮೀನುಗಾರಿಕೆ ಬಂದರಿಗೆ ದಶಕದ ಇತಿಹಾಸವಿದ್ದರೂ ಹೂಳೆತ್ತುವ ಸಮಸ್ಯೆ ನಿರಂತರವಾಗಿ ಉದ್ಭವವಾಗುತ್ತಿದೆ. ಇದಕ್ಕಾಗಿ ಅಲೆ ತಡೆಗೋಡೆಗಳ ಅಧ್ಯಯನ ಮಾಡುವಂತೆ ಆಗ್ರಹಿಸಿದೆ.
– ಮಂಗಳೂರು ಮೀನುಗಾರಿಕೆ ಬಂದರಿನಲ್ಲಿ ಪ್ರತೀ ದಿನ 100 ಕೋಟಿ ರೂ.ಗಳಿಗೂ ಅಧಿಕ ವ್ಯವಹಾರ ನಡೆಯುತ್ತಿದೆ. ಆದರೆ ಮೀನುಗಾರರ ರಕ್ಷಣೆ, ಮಹಿಳಾ ಮೀನುಗಾರರ ಸುರಕ್ಷೆ, ಕಳ್ಳತನ ಹಾಗೂ ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣಕ್ಕೆ ಸಿಸಿ ಕೆಮರಾ ವ್ಯವಸ್ಥೆ, ಪೊಲೀಸ್ ಸಿಬಂದಿ ನಿಯೋಜಿಸಲು ಆದೇಶ ನೀಡಬೇಕು.
– ರಖಂ ಹಾಗೂ ಕಮಿಷನ್ ಮೀನು ಮಾರಾಟ ಮಂಗಳೂರು ಮೀನುಗಾರಿಕೆ ಬಂದರಿನ ಒಳಭಾಗದಲ್ಲೇ ನಡೆಯುತ್ತಿರುವುದರಿಂದ ಬೇರೆ ರಾಜ್ಯಗಳಿಂದ ಬರುವ ನೂರಾರು ವಾಹನ ಗಳಿಂದ ದಟ್ಟಣೆ ಉಂಟಾಗಿ ದೈನಂದಿನ ಚಟುವಟಿಕೆಗೆ ತೊಡಕಾ ಗುತ್ತಿದೆ. ಇದನ್ನು ಬಂದರಿನಿಂದ ದೂರಕ್ಕೆ ಸ್ಥಳಾಂತರಿಸಬೇಕು.
– 2023ನೇ ಸಾಲಿನಿಂದ ಮೀನುಗಾರಿಕೆ ಇಲಾಖೆಯ ಅಭಿವೃದ್ಧಿ ಹಾಗೂ ನಿರ್ವಹಣೆ ಕಾಮಗಾರಿಯನ್ನು ಕರ್ನಾಟಕ ಜಲ ಸಾರಿಗೆ ಮಂಡಳಿ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಮೀನುಗಾರಿಕೆ ಇಲಾಖೆಯ ಕಾಮಗಾರಿಗಳಿಗೆ ಮಂಡಳಿಯಿಂದ ಹೆಚ್ಚುವರಿಯಾಗಿ ಶೇ. 12ರಷ್ಟು ಶುಲ್ಕ ವಸೂಲಿ ಮಾಡುತ್ತಿದ್ದು, ಇದರಿಂದ ಅಭಿವೃದ್ಧಿ ಕಾಮಗಾರಿಗಳಿಗೆ ತೊಂದರೆಯಾಗುತ್ತಿದೆ. ಮಂಡಳಿ ವಿಧಿಸುತ್ತಿರುವ ಈ ಶುಲ್ಕಕ್ಕೆ ಕಡಿವಾಣ ಹಾಕಲು ಆದೇಶ ನೀಡಬೇಕು.