Advertisement
ಈ ಗಣಿಗಾರಿಕೆಯಿಂದ ಮಡೆಪ್ಪಾಡಿ, ಮಂದಿಲ, ಮಾನ್ಯ, ಪಾಲೇದು, ಬಾಳಿಂಜ, ಹೊಸಮನೆ, ಪೆಜಕೊಡಂಗೆ, ಆಚಾರಿಬೆಟ್ಟು ಮೊದಲಾದ ಪ್ರದೇಶದ ನಿವಾಸಿಗಳ ಮನೆಗಳು ಬಿರುಕು ಬಿಡ ಲಾರಂಭಿಸಿವೆ. ಈ ಸಮಸ್ಯೆಯನ್ನು ಬಗೆಹರಿಸಿ ಎಂದು ಗ್ರಾಮಸ್ಥರು ದ.ಕ. ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.
ಗಣಿಗಾರಿಕೆಯಿಂದಾಗಿ ಸುಮಾರು 1 ಎಕ್ರೆ ಪ್ರದೇಶದಲ್ಲಿ ಸುಮಾರು 300 ಅಡಿ ಆಳಕ್ಕೆ ಬೃಹತ್ ಹೊಂಡ ವಾಗಿದ್ದು, ಮಳೆಗಾಲದಲ್ಲಿ ನೀರು ತುಂಬಿಕೊಳ್ಳುತ್ತಿದೆ. ಇದರ ಸನಿಹದಲ್ಲೇ ಗ್ರಾಮಸ್ಥರು, ಶಾಲಾ ಮಕ್ಕಳು, ಜಾನುವಾರುಗಳು ಓಡಾಡು ತ್ತಿದ್ದು, ಯಾವ ಕ್ಷಣದಲ್ಲಿ ದುರಂತ ಸಂಭವಿಸುತ್ತದೋ ಎಂಬ ಭಯ ಗ್ರಾಮಸ್ಥರದ್ದು.
Related Articles
ಕಲ್ಲು ಗಣಿಗಾರಿಕೆ ನಡೆಯುವಲ್ಲಿ ಅತ್ಯಂತ ಅಪಾಯಕಾರಿಯಾಗಿ ಯಂತ್ರದ ಮೂಲಕ ಕಲ್ಲು ಸಿಡಿಸಲಾಗುತ್ತಿದೆ. ಇದರ ಕಾರ್ಮಿಕರು ನೆಲದಿಂದ ಸುಮಾರು 200 ಅಡಿ ಎತ್ತರದಲ್ಲಿ ಕಲ್ಲು ಬಂಡೆಯ ಮಧ್ಯೆ ಕುಳಿತು ಕಲ್ಲು ಸಿಡಿಸುವುದು ಕಂಡು ಬಂದಿದ್ದು, ಇವರಿಗೆ ಯಾವುದೇ ಸುರûಾ ವ್ಯವಸ್ಥೆ ಕಲ್ಪಿಸಿಲ್ಲ. ಇಲ್ಲಿ ಎಲ್ಲ ಸುರûಾ ನಿಯಮಾವಳಿಗಳನ್ನು ಗಾಳಿಗೆ ತೂರಲಾಗಿದೆ ಎಂದು ಆಪಾದಿಸ ಲಾಗಿದೆ.
Advertisement
ಕಲ್ಲು ಗಣಿಗಾರಿಕೆ ನಡೆಯುವ ಜಮೀನಿಂದ 40 ಮೀಟರ್ ಅಂತರದಲ್ಲಿ ಕುದ್ರಡ್ಕ-ಪಾಲೇದು-ಲಿಂಗಸ್ಥಳ- ಕಕ್ಕೆಪದವು ರಸ್ತೆ ಸಂಪರ್ಕ ಇದ್ದು, ಗಣಿಗಾರಿಕೆಯ ಸ್ಫೋಟಕ್ಕೆ ರಸ್ತೆ ಬಿರುಕು ಬಿಡುತ್ತಿದೆ. ಅ ಧಿಕ ಭಾರದ ಕಲ್ಲು ಹೇರಿಕೊಂಡು ಹೋಗುವ ಲಾರಿಗಳಿಂದಾಗಿ ರಸ್ತೆಯ ಉದ್ದಕ್ಕೂ ಹೊಂಡಗಳು ನಿರ್ಮಾಣ ಆಗುತ್ತಿದ್ದು, ರಸ್ತೆ ಡಾಮರು ಕಾಮಗಾರಿ ನಡೆಸಿದ್ದರೂ ಪ್ರಯೋಜನಕ್ಕೆ ಬಾರದಂತಾಗಿದೆ ಎಂದು ದೂರಲಾಗಿದೆ. ಪರಿಸರದ ಸುಮಾರು 50ಕ್ಕೂ ಮಿಕ್ಕಿ ಗ್ರಾಮಸ್ಥರು ದೂರಿನಲ್ಲಿ ಸಹಿ ಮಾಡಿದ್ದಾರೆ. ಜಿಲ್ಲಾ ಧಿಕಾರಿಗಳು ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿ ಕ್ರಮ ಕೈಗೊಳ್ಳಲು ಮನವಿ ಮಾಡಲಾಗಿದೆ.
ಅರಣ್ಯದೊಳಗೆ ಅಕ್ರಮ ರಸ್ತೆ; ಇಲಾಖೆಯಿಂದ ಬಂದ್ಆಪಾದಿತರು ಕಲ್ಲು ಕೋರೆಯಿಂದ ಕ್ರಶರ್ ಮಧ್ಯೆ ಅರಣ್ಯ ಪ್ರದೇಶದೊಳಗೆ ಅಕ್ರಮವಾಗಿ ರಸ್ತೆ ನಿರ್ಮಿಸಿಕೊಂಡಿದ್ದರು. ಈ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ್ದು, ಅದರಂತೆ ಉಪ್ಪಿನಂಗಡಿ ವಲಯ ಅರಣ್ಯ ಇಲಾಖೆ ಸಿಬಂದಿ ಆ ರಸ್ತೆಯನ್ನು ಮಂಗಳವಾರ ಹಿಟಾಚಿ ಮೂಲಕ ಹೊಂಡ ತೋಡಿ ಬಂದ್ ಮಾಡಿದ್ದಾರೆ. ಪರವಾನಿಗೆ ಹೊಂದಿದ್ದೇವೆ
ಕಲ್ಲು ಗಣಿಗಾರಿಕೆಗೆ ಪರವಾನಗಿ ಹೊಂದಿದ್ದು, ಅರಣ್ಯ ಭೂಮಿ ಒತ್ತುವರಿ ಮಾಡಿಲ್ಲ ಎನ್ನುತ್ತಾರೆ ಕಲ್ಲು ಗಣಿಗಾರಿಕೆ ಮಾಲಕಿ ಸುನೀತಾ ಅವರ ಪರವಾಗಿ ಅವರ ಪತಿ ತಣ್ಣೀರುಪಂಥ ಗ್ರಾ.ಪಂ. ಸದಸ್ಯ ಸದಾನಂದ ಶೆಟ್ಟಿ.