Advertisement
ಬೇಕಾಗುವ ಸಾಮಗ್ರಿಬೂದುಕುಂಬಳಕಾಯಿ- 1 ಕೆ.ಜಿ.
ಸಕ್ಕರೆ – 3 ಕಪ್
ನೀರು – 3 ಕಪ್
ಹಾಲು- 1 ಟೀ ಸ್ಪೂನ್
ಏಲಕ್ಕಿ-ಸ್ವಲ್ಪ
ಕುಂಬಳಕಾಯಿಯ ಸಿಪ್ಪೆ ತೆಗೆದು ಅದನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿಕೊಳ್ಳಿ. ಅನಂತರ ಒಂದು ಪಾತ್ರೆಯಲ್ಲಿ 3 ಕಪ್ ನೀರು ತೆಗೆದುಕೊಂಡು ಅದಕ್ಕೆ ಸ್ವಲ್ಪ ಸುಣ್ಣದ ತುಂಡನ್ನು ಹಾಕಿ ಕಲಡಿಸಿಕೊಂಡು ಅದಕ್ಕೆ ಕುಂಬಳಕಾಯಿ ತುಂಡುಗಳನ್ನು ಹಾಕಿ. ಒಂದೆರಡು ಗಂಟೆಗಳ ಬಳಿಕ ಇನ್ನೊಂದು ಪಾತ್ರೆಯಲ್ಲಿ ನೀರು ಹಾಕಿ ಅದನ್ನು ಕುದಿಸಿಕೊಳ್ಳಿ. ಕುದಿಯುವ ನೀರಿಗೆ ತೊಳೆದ ಕುಂಬಳಕಾಯಿ ತುಂಡುಗಳನ್ನು ಹಾಕಿ. ಅದು ಚೆನ್ನಾಗಿ ಬೇಯುವವರೆಗೂ ಕುದಿಸಿಕೊಳ್ಳಿ. ಪಾಕದ ಮಾದರಿಯಾಗುವವರೆಗೂ ಬೇಯಿಸಿಕೊಳ್ಳಿ. ಅನಂತರ ದೊಡ್ಡ ಪಾತ್ರೆಯಲ್ಲಿ ಸಕ್ಕರೆ, ಏಲಕ್ಕಿ, ಕೇಸರಿ ಹಾಕಿ ಅದಕ್ಕೆ ನೀರು ಹಾಕಿ ಸಕ್ಕರೆಯನ್ನು ಸರಿಯಾಗಿ ಕಲಸಿಕೊಂಡು ಅದನ್ನು ಕುದಿಸಿಕೊಳ್ಳಿ. ಅನಂತರ ಅದಕ್ಕೆ ಬೇಯಿಸಿದ ಬೂದು ಕುಂಬಳಕಾಯಿಯನ್ನು ಸೇರಿಸಿ. ಸ್ವಲ್ಪ ಗಟ್ಟಿಯಾದ ಈ ಪಾಕವನ್ನು ಒಂದು ತಟ್ಟೆಗೆ ಹಾಕಿ. ಅನಂತರ ಅದನ್ನು ಬೇಕಾದ ಆಕಾರಕ್ಕೆ ಕತ್ತರಿಸಿಕೊಂಡರೆ ಸವಿ ಸವಿಯಾದ ಪೇಥಾ ಸವಿಯಲು ಸಿದ್ಧ.