Advertisement

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಆಸೀಸ್ ಘಾತಕ ವೇಗಿ

09:54 AM Dec 30, 2019 | Team Udayavani |

ಮೆಲ್ಬೋರ್ನ್: ಆಸ್ಟ್ರೇಲಿಯಾ ತಂಡದ ಘಾತಕ ವೇಗಿ ಪೀಟರ್ ಸಿಡಲ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ.

Advertisement

ನ್ಯೂಜಿಲ್ಯಾಂಡ್ ವಿರುದ್ಧದ ಮೂರನೆ ಪಂದ್ಯದಲ್ಲಿ ಸ್ಥಾನ ಪಡೆಯದ ಕಾರಣ ಪೀಟರ್ ಸಿಡಲ್ ನಿವೃತ್ತಿ ನಿರ್ಧಾರ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.

35ರ ಹರೆಯದ ವೇಗಿ ಪೀಟರ್ ಸಿಡಲ್ ಆಸ್ಟ್ರೇಲಿಯಾ ಪರ ಹೆಚ್ಚಾಗಿ ಟೆಸ್ಟ್ ಪಂದ್ಯಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. 67 ಪಂದ್ಯಗಳಿಂದ ಪೀಟರ್ 221 ವಿಕೆಟ್ ಕಬಳಿಸಿದ್ದಾರೆ.

2008ರಲ್ಲಿ ಭಾರತದ ವಿರುದ್ಧ ಮೊಹಾಲಿಯಲ್ಲಿ ಪದಾರ್ಪಣಾ ಟೆಸ್ಟ್ ಪಂದ್ಯವಾಡಿದ್ದ ಸಿಡಲ್ ಮೊದಲ ವಿಕೆಟ್ ಕಬಳಿಸಿದ್ದು ಲೆಜೆಂಡ್ ಸಚಿನ್ ತೆಂಡೂಲ್ಕರ್ ರದ್ದು.

2010ರ ಆಷಸ್ ನ ಬ್ರಿಸ್ಬೆನ್ ಟೆಸ್ಟ್ ಪಂದ್ಯದಲ್ಲಿ ಅಲಿಸ್ಟರ್ ಕುಕ್, ಮ್ಯಾಟ್ ಪ್ರಯರ್, ಸ್ಟುವರ್ಟ್ ಬ್ರಾಡ್ ವಿಕೆಟ್ ಪಡೆಯುವ ಮೂಲಕ ಟೆಸ್ಟ್ ಹ್ಯಾಟ್ರಿಕ್ ಪಡೆದ ಒಂಬತ್ತನೇ ಆಸೀಸ್ ಬೌಲರ್ ಆಗಿ ಮೂಡಿ ಬಂದಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next