Advertisement

ಪೆಸ್ತೂಮ್‌ ಸಾಗರ್‌ ಕರ್ನಾಟಕ ಸಂಘ: ಕ್ಯಾರಿಯರ್‌ ಗೈಡೆನ್ಸ್‌ ಶಿಬಿರ

04:22 PM Oct 26, 2019 | Suhan S |

ಮುಂಬಯಿ, ಅ. 25: ಚೆಂಬೂರು ತಿಲಕ್‌ ನಗರದ ಪೆಸ್ತೂಮ್‌ ಸಾಗರ್‌ ಕರ್ನಾಟಕ ಸಂಘದ ಶಿಕ್ಷಣ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗಾಗಿ ಕ್ಯಾರಿಯರ್‌ ಗೈಡೆನ್ಸ್‌ ಶಿಬಿರವು ಅ. 20ರಂದು ನವದುರ್ಗಾ ಮಿತ್ರ ಮಂಡಳಿ ತಿಲಕ್‌ ನಗರದಲ್ಲಿ ನಡೆಯಿತು.

Advertisement

ಶಿಬಿರವನ್ನು ಎಸ್‌ಎಸ್‌ಸಿ ಮತ್ತು ಎಚ್‌ಎಸ್‌ಸಿ ವಿದ್ಯಾರ್ಥಿ ಗಳಿಗೆ ಆಯೋಜಿಸಲಾಗಿತ್ತು. ಪೆಸ್ತೂಮ್‌ ಸಾಗರ್‌ ಕರ್ನಾ ಟಕ ಸಂಘದ ಅಧ್ಯಕ್ಷ ರಾಮಣ್ಣ ಬಿ. ದೇವಾಡಿಗ, ಶಿಕ್ಷಣಸಮಿತಿಯ ಕಾರ್ಯಾಧ್ಯಕ್ಷೆ ಜಯಂತಿ ಮೊಯಿಲಿ, ಸತೀಶ್‌ ಸಾಲಿಯಾನ್‌, ಚಂದ್ರಹಾಸ್‌ ಎನ್‌. ಶೆಟ್ಟಿ, ನಾಗವೇಣಿ ಎಸ್‌. ಶೆಟ್ಟಿ, ಶೇಖರ್‌ ಶೆಟ್ಟಿ, ಶ್ರೀಧರ ಶೆಟ್ಟಿ, ಚಿತ್ರೇಶ್‌ ಶೆಟ್ಟಿ, ಅರುಣ್‌ ಕುಮಾರ್‌ ಶೆಟ್ಟಿ, ಸಂಪತ್‌ ಶೆಟ್ಟಿ ಮತ್ತು ಸುಧಾಕರ ಸಫಲಿಗ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಜಯಂತಿ ಮೊಯಿಲಿ ಸ್ವಾಗತಿಸಿದರು. ಮೈಂಡ್‌ ಮವರ್ಸ್‌ ಆ್ಯಂಡ್‌ ಡೆವಲಪರ್ನ ಸತೀಶ್‌ ಸಾಲಿಯಾನ್‌ ಅವರು ವಿದ್ಯಾರ್ಥಿಗಳಿಗೆ ಕ್ಯಾರಿಯರ್‌ ಗೈಡೆನ್ಸ್‌ ಮತ್ತು ಚೂಸ್‌ ದ ರೈಟ್‌ ಲ್ಡ್‌, ಟೈಮ್‌ ಮ್ಯಾನೇಜೆಮ್ಮೆಂಟ್ ಮತ್ತು ಇನ್ನಿತರ ವಿಷಯಗಳ ಬಗ್ಗೆ ಉದಾಹರಣೆಯ ಸಹಿತ ಸ್ಪರ್ಧೆಗಳ ಮೂಲಕ ಅವರಿಗೆ ತಿಳಿಸಿದರು. ಚೆಂಬೂರು ವಲಯ ಶಾಲೆಯಿಂದ ಸುಮಾರು 76 ವಿದ್ಯಾರ್ಥಿ ಗಳು ಮತ್ತು 20 ಪೋಷಕರು ಉಪಸ್ಥಿತರಿದ್ದರು.

ಶಾಲಿನಿ ಶೆಟ್ಟಿಯವರು ಪ್ರಾಥನೆಗೈದರು. ಶಿವಛತ್ರಪತಿ ಪುರಸ್ಕೃತ ಜಯ ಎ. ಶೆಟ್ಟಿ ಮತ್ತು ಇಂಟರ್‌ನ್ಯಾಷನಲ್‌ ಮ್ಯಾರಥಾನ್‌ ರನ್ನರ್ ಸತೀಶ್‌ ಸಾಲಿಯಾನ್‌ ಇವರನ್ನು   ಪುಷ್ಪಗುತ್ಛವನ್ನಿತ್ತು ಗೌರವಿಸಲಾಯಿತು. ಜಯಂತಿ ಮೊಯಿಲಿಯವರು ಸಹಕರಿಸಿದ ಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಸಂಘದ ಗೌರವ ಅಧ್ಯಕ್ಷ ಸತೀಶ್‌ ಶೆಟ್ಟಿ ಅವರ ಸೇವಾರ್ಥವಾಗಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next