Advertisement
“ಇದೇ ವರ್ಷ ಅಕ್ಟೋಬರ್ ಒಂದನೇ ತಾರೀಖೀನಂದು ಪೆಸ್ಟಿಸೈಡ್ ವಿಷಕ್ಕೆ ನನ್ನ ಅಪ್ಪ ಬಲಿಯಾದ ನಂತರ ನಮ್ಮ ಹಳ್ಳಿಯಲ್ಲಿ ಪೆಸ್ಟಿಸೈಡ್ ಸಿಂಪಡಿಸಲು ಜನರು ಹೆದರುತ್ತಿದ್ದಾರೆ. ಜನರ ಪ್ರಾಣಕ್ಕೆ ಕುತ್ತಾಗುವಂತಹ ಪೆಸ್ಟಿಸೈಡ್ ಕ್ರಿಮಿ ನಾಶಕದ ಬಳಕೆ ಮಾಡಲಿಕ್ಕೆ ಸರಕಾರ ಯಾಕೆ ಬಿಡುತ್ತಿದೆ?’ ಇದು, 20 ವರುಷ ವಯಸ್ಸಿನ ಪ್ರತೀಕ್ಷಾ ಜಿ. ಫುಲ್ಮಾಲಿ ಅವಳ ಪ್ರಶ್ನೆ. ಆಕೆ ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯ ಕಲಂಬ… ತಾಲೂಕಿನ ಸವರ್ಗಾಂವ್ ಹಳ್ಳಿಯವಳು.
Related Articles
Advertisement
ಇಷ್ಟೆಲ್ಲ ಸಾವುಗಳ ಆಗಿರುವಾಗ ಸರಕಾರ ಏನು ಮಾಡುತ್ತಿದೆ? ಈ ವರುಷ ಯವತ್ಮಾಲ… ಜಿಲ್ಲೆಯಲ್ಲಿ ರೈತರ ಮರಣಕ್ಕೆ ಕಾರಣವಾದ ಮೊನೊಕ್ರೊಟೊಫಾಸ್ ಮತ್ತು ಆಕ್ಸಿಡೆಮೆಟೊನ್-ಮಿಥೈಲ… ಇವು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯು.ಎಚ….ಓ.) ಪ್ರಕಾರ ಕ್ಲಾಸ್-1 ಪೀಡೆನಾಶಕಗಳೆಂದು ವರ್ಗೀಕರಿಸಲ್ಪಟ್ಟಿವೆ. ಇದಕ್ಕೆ ಕಾರಣ ಅವುಗಳ ಘೋರ ವಿಷ! ಒಬ್ಬ ಸಾಮಾನ್ಯ ವಯಸ್ಕ ವ್ಯಕ್ತಿಯನ್ನು ಕೊಲ್ಲಲು ಕ್ಲಾಸ್-1 ಪೀಡೆನಾಶಕಗಳ ಕೆಲವೇ ಗ್ರಾಮ… ಸಾಕು! ಯುರೋಪಿಯನ್ ಯೂನಿಯನ್ ಸಹಿತ ಹಲವು ದೇಶಗಳು ಇವುಗಳ ಬಳಕೆ ನಿಷೇಧಿಸಿವೆ. ಆದರೆ ಭಾರತದಲ್ಲಿ ಇವುಗಳ ಬಳಕೆ ವ್ಯಾಪಕ!
ಪೀಡೆನಾಶಕಗಳ ನೋಂದಾವಣೆಯ ಜವಾಬ್ದಾರಿ ಕೇಂದ್ರ ಕೀಟನಾಶಕಗಳ ಮಂಡಲಿ ಮತ್ತು ನೋಂದಾವಣೆ ಸಮಿತಿಯದ್ದು (ಸಿಐಬಿಆರ್ಸಿ). ಅಲ್ಲಿ ನೋಂದಾವಣೆ ಆಗಿರುವ ಕ್ಲಾಸ್-1 ಪೀಡೆನಾಶಕಗಳ ಸಂಖ್ಯೆ 18. ಇವೆಲ್ಲ ಭಾರತದ ಉದ್ದಗಲದಲ್ಲಿ ಬಳಕೆಯಾಗುತ್ತಿವೆ. ಕೇಂದ್ರ ಕೃಷಿ ಮತ್ತು ಕೃಷಿಕ ಕಲ್ಯಾಣ ಮಂತ್ರಾಲಯದ ಅಂಗಸಂಸ್ಥೆಯ ಮಾಹಿತಿಯ ಅನುಸಾರ, ಭಾರತದಲ್ಲಿ 2015-16ರಲ್ಲಿ ಒಟ್ಟು ಬಳಕೆಯಾದ 7,717 ಟನ್ ಕೀಟನಾಶಕಗಳಲ್ಲಿ ಶೇ.30ರಷ್ಟು (2,254 ಟನ…) ಈ ಮಾರಕ ಕ್ಲಾಸ್-1 ಕೀಟನಾಶಕಗಳಾಗಿವೆ!
2003ರಲ್ಲೇ, ಅನುಪಮ… ವರ್ಮಾ (ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ನಿವೃತ್ತ ಪೊ›ಫೆಸರ್) ಚೇರ್ಮನ್ ಆಗಿದ್ದ ಪರಿಣತರ ಸಮಿತಿಯನ್ನು ಕೇಂದ್ರ ಸರಕಾರ ನೇಮಿಸಿತ್ತು. ಇತರ ಹಲವು ದೇಶಗಳಲ್ಲಿ ನಿಷೇಧಿತವಾದ, ಆದರೆ ಭಾರತದಲ್ಲಿ ಬಳಕೆಯಲ್ಲಿರುವ 66 ಪೀಡೆನಾಶಕಗಳ ಪರಿಶೀಲನೆಗಾಗಿ. ಆ ಸಮಿತಿಯ ಶಿಫಾರಸ್ ಪ್ರಕಾರ, 2018 ಮತ್ತು 2021ರಲ್ಲಿ ಒಟ್ಟು ಏಳು ಪೀಡೆನಾಶಕಗಳನ್ನು ನಿಷೇಧಿಸಲು ಕೇಂದ್ರ ಮಂತ್ರಾಲಯವು ಯೋಚಿಸುತ್ತಿದೆ. ಆದರೆ, ಆ ಏಳು ಪೀಡೆನಾಶಕಗಳಲ್ಲಿ, ಯವತ್ಮಾಲಿನಲ್ಲಿ ರೈತರ ಬಲಿ ತಗೊಂಡ ಆ ಎರಡು ಘೋರ ಪೀಡೆನಾಶಕಗಳು ಸೇರಿಲ್ಲ!
ಪ್ರತಿ ವರುಷ ಭಾರತದಲ್ಲಿ ಪೀಡೆನಾಶಕ ವಿಷಬಾಧೆಯ ಸುಮಾರು 10,000 ಪ್ರಕರಣಗಳು ವರದಿಯಾಗಿವೆ. ಈ ಪ್ರಮಾಣದಲ್ಲಿ ಪೀಡೆನಾಶಕಗಳ ಅಸುರಕ್ಷಿತ ಬಳಕೆಗೆ ಕೇಂದ್ರ ಮಂತ್ರಾಲಯ ಮತ್ತು ರಾಜ್ಯ ಕೃಷಿ ಇಲಾಖೆಗಳೇ ಕಾರಣ ಎನ್ನುತ್ತಾರೆ ಡೆಲ್ಲಿಯ ಸೆಂಟರ್ ಫಾರ್ ಸೈನ್ಸ್ ಆಂಡ್ ಎನ್ವಿರಾನ್ಮೆಂಟಿನ ಉಪಮಹಾನಿರ್ದೇಶಕ ಚಂದ್ರಭೂಷಣ್. ನಮ್ಮ ದೇಶದಲ್ಲಿ ಮಾರಕ ಪೀಡೆನಾಶಕಗಳ ಬಳಕೆಯ ಅವಾಂತರಗಳ ಅರಿವಾದರೆ, ರೈತರ ಹಾಗೂ ಅವರ ಕುಟುಂಬದವರ ಎದೆಯೊಡೆದು ಹೋದೀತು. ವಿವೇಚನಾರಹಿತ ಬಳಕೆ ಮತ್ತು ಸುರಕ್ಷತಾ ನಿಯಮಗಳ ಬಗ್ಗೆ ಅಸಡ್ಡೆ ಇದರಿಂದಾಗಿ ನೂರಾರು ರೈತರು ಮತ್ತು ಕೃಷಿ ಕೆಲಸಗಾರರು ಪೀಡೆನಾಶಕಗಳ ವಿಷಕ್ಕೆ ಸುಲಭ ಬಲಿ ಆಗುತ್ತಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ, ಪ್ರತೀಕ್ಷಾಳ ಪ್ರಶ್ನೆಗೆ ಉತ್ತರ ನೀಡಬೇಕಾದ ಸವಾಲು ನಮ್ಮೆದುರಿಗಿದೆ. ಘೋರ ವಿಷಗಳಾದ ಕ್ಲಾಸ್-1 ಪೀಡೆನಾಶಕಗಳನ್ನು ಸರಕಾರ ನಿಷೇಧಿಸುವ ವರೆಗೆ ನಮ್ಮ ರೈತರು ಕಾಯಬೇಕೆ ಅಥವಾ, ತಮ್ಮ ಪ್ರಾಣ ರಕ್ಷಣೆಗಾಗಿ ಅಂತಹ ರಾಸಾಯನಿಕ ವಿಷಗಳ ಬಳಕೆ ಕೈಬಿಡಬೇಕೇ? ಈ ಪ್ರಶ್ನೆಗಳ ಉತ್ತರ ರೈತರ ಕೈಯಲ್ಲಿದೆ.
ಅಡ್ಡೂರು ಕೃಷ್ಣ ರಾವ್