Advertisement

ಕೀಟನಾಶಕ ಸಿಂಪಡಣೆ ಯಂತ್ರ ಶೋಧನೆ

10:59 AM Mar 18, 2019 | |

ಭಾಲ್ಕಿ: ಅತೀ ಕಡಿಮೆ ವೆಚ್ಚದಲ್ಲಿ ಹೆಚ್ಚು ಕಾರ್ಯ ನಿರ್ವಹಿಸುವ ಸ್ವಯಂಚಾಲಿತ ಪವರ್‌ ಸ್ಪ್ರೇ ಯಂತ್ರವನ್ನು ಕೊರೂರ
ಗ್ರಾಮದ ಯುವಕ ರಹೀಂ ಮಹಿಬೂಬಸಾಬ್‌ ಸಂಶೋಧಿಸಿದ್ದಾರೆ. ರೈತರು ಹೊಲಗಳಲ್ಲಿ ಬೆಳೆಗಳಿಗೆ ಕೀಟನಾಶಕ ಸಿಂಪಡಿಸಲು ಹಲವಾರು ಪವರ್‌ ಸ್ಪ್ರೇಗಳನ್ನು ಬಳಸುತ್ತಿದ್ದರು. ಈ ಪವರ್‌ ಸ್ಪ್ರೇಗಳಿಗೆ ನೀರು ಹಾಕಲು ಒಬ್ಬರು, ಯಂತ್ರ ಚಾಲನೆ ಮಾಡಿ ಹೊಲದಲ್ಲಿ ಸುತ್ತುತ್ತಾ ಬೆಳೆಗೆ ಸಿಂಪಡಿಸಲು ಒಬ್ಬರು, ಹೀಗೆ ಇಬ್ಬರು-ಮೂವರು ಆಳುಗಳು ಬೇಕಿತ್ತು. ಅಲ್ಲದೆ ಒಂದು ಯಂತ್ರದಿಂದ ಎಕರೆ ಬೆಳೆಗೆ ಸಿಂಪಡಿಸಲು ಎರಡರಿಂದ ಮೂರು ಗಂಟೆ ಸಮಯ ಬೇಗಾಗುತ್ತದೆ. 

Advertisement

ಆದರೆ ರಹೀಂ ಮಹಿಬೂಬಸಾಬ್‌ ಸಂಶೋಧಿಸಿರುವ ಸೂಪರ್‌ ಫಾಸ್ಟ್‌ ಪವರ್‌ ಸ್ಪ್ರೇ ಯಂತ್ರದಿಂದ ಕಡಿಮೆ ಸಮಯದಲ್ಲಿ ಒಬ್ಬರೇ ಕೆಲಸಗಾರರಿಂದ ಸಂಪೂರ್ಣ ಹೊಲಕ್ಕೆ ಕೀಟನಾಷಕ ಸಿಂಪಡಿಸಬಹುದಾಗಿದೆ. ಹೊಂಡಾ ಯಾಕ್ಟಿವ್‌ ಬೈಕ್‌ನ ಜೋಡಣೆಯೊಂದಿಗೆ ಈ ಯಂತ್ರ ನಡೆಯುತ್ತಲಿದ್ದು, ಒಂದು ಲೀಟರ್‌ ಪೆಟ್ರೋಲ್‌ನಲ್ಲಿಯೇ ಸುಮಾರು 10 ಎಕರೆ ಹೊಲದ ಬೆಳೆಗೆ ಕೀಟನಾಶಕ ಸಿಂಪಡಿಸಲು ಈ ಯಂತ್ರ ಸಹಾಯ ಮಾಡುತ್ತದೆ. ಹೀಗಾಗಿ ರೈತರಿಗೆ ಸಮಯದೊಂದಿಗೆ ಕೆಲಸದ ಆಳು ಮತ್ತು ಹಣವೂ ಉಳಿತಾಯವಾಗುತ್ತದೆ.

ಈ ಯಂತ್ರವು ಪ್ರಾಯೋಗಿಕವಾಗಿದ್ದು, ಉತ್ಪಾದನಾ ಕಾರ್ಖಾನೆಯವರು ಹೆಚ್ಚು ಯಂತ್ರಗಳನ್ನು ತಯಾರಿಸಿ ರೈತರಿಗೆ ಇದರ ಉಪಯೋಗವಾಗುವಂತೆ ಮಾಡಬೇಕು ಎನ್ನುತ್ತಾರೆ ಗ್ರಾಮದ ಹಿರಿಯರಾದ ಶಂಕರರಾವ್‌ ಚವ್ಹಾಣ.

„ಜಯರಾಜ ದಾಬಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next