Advertisement

ಪೆಸ್ತಮ್‌ ಸಾಗರ್‌ ಕರ್ನಾಟಕ ಸಂಘ:ಮಹಿಷಮರ್ದಿನಿ ಯಕ್ಷಗಾನ

12:33 PM Sep 20, 2017 | |

 ಮುಂಬಯಿ: ಚೆಂಬೂರು ತಿಲಕ್‌ ನಗರದ ಪೆಸ್ತಮ್‌ ಸಾಗರ್‌ ಕರ್ನಾಟಕ ಸಂಘದ ಸದಸ್ಯರಿಂದ ಹಾಗೂ ಮಕ್ಕಳಿಂದ ಮಹಿಷ ಮರ್ದಿನಿ ಯಕ್ಷಗಾನ ಪ್ರದರ್ಶನವು ಸೆ. 16 ರಂದು ಅಪರಾಹ್ನ ಚೆಂಬೂರು ಸಾಗರ್‌ ಸಿನೇಮಾ ಸಮೀಪದ ರಘುವಂಶಿ ಸಭಾಗೃಹದಲ್ಲಿ ಕಿಕ್ಕಿರಿದು ತುಂಬಿದ ಸಭಾಗೃಹದಲ್ಲಿ ನಡೆಯಿತು.

Advertisement

ಇದೇ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ನ್ಯಾಯವಾದಿ ನಿತ್ಯಾನಂದ ಕೆ. ಶೆಟ್ಟಿ ಅವರು, ಯಕ್ಷಗಾನ ಪ್ರದರ್ಶನ ಯಶಸ್ವಿಯಾಗಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು. ಸದಸ್ಯರ ಹಾಗೂ ಕಲಾವಿದರ ಪ್ರೋತ್ಸಾಹ ಹಾಗೂ ಯಕ್ಷಗಾನದ ಮೇಲಿನ ಪ್ರೀತಿಯು ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಇಲ್ಲಿ ಸೇರಲು ಸಹಕಾರಿಯಾಗಿದೆ. ಈ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ನನ್ನ ವೈಯಕ್ತಿಕ ಹಾಗೂ ಸಂಘದ ಪರವಾಗಿ ಹೃದಯಪೂರ್ವಕವಾಗಿ ಅಭಿನಂದನೆ ಸಲ್ಲಿಸುತ್ತಿದ್ದೇನೆ. ನಾಡಿನ ಕಲೆ, ಸಂಸ್ಕೃತಿಯನ್ನು ಉಳಿಸಿ-ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದ್ದು, ಯುವಪೀಳಿಗೆಗೆ ಇದರ ಮಹತ್ವದ ಅರಿವು ಮೂಡಿಸುವ ಇಂಥ ಕಾರ್ಯಕ್ರಮಗಳಿಗೆ ಎಲ್ಲರ ಸಹಕಾರ, ಪ್ರೋತ್ಸಾಹ ಅಗತ್ಯಎಂದರು.

ಕಾರ್ಯಕ್ರಮದಲ್ಲಿ ಯಕ್ಷಗಾನ ಪ್ರದರ್ಶನದ ಯಶಸ್ಸಿಗೆ ಸಹಕರಿಸಿದ ಯಕ್ಷಗಾನ ನಿರ್ದೇಶಕ ಹಾಗೂ ಯಕ್ಷಗುರುಗಳಾದ ಟಿ. ಆರ್‌. ಶೆಟ್ಟಿ, ನಾರಾಯಣ ಶೆಟ್ಟಿ ಕುಂಬ್ಳೆ ಹಾಗೂ ಭಾಗವತರಾದ ಜಯಲಕ್ಷ್ಮೀ ದೇವಾಡಿಗ, ಮೋಹನ್‌ದಾಸ್‌ ಕೆ. ರೈ, ಚೆಂಡೆಯಲ್ಲಿ ಸಹಕರಿಸಿದ ಪ್ರವೀಣ್‌ ಶೆಟ್ಟಿ ಕಟೀಲು, ಮದ್ದಳೆವಾದಕ ಹರೀಶ್‌ ಸಾಲ್ಯಾನ್‌ ಅವರನ್ನು ಸಂಘದ ಪದಾಧಿಕಾರಿಗಳು ಶಾಲು ಹೊದೆಸಿ, ಫಲಪುಷ್ಪವನ್ನಿತ್ತು ಗೌರವಿಸಿ ಸಮ್ಮಾನಿಸಿ ಶುಭ ಹಾರೈಸಿದರು.

ಸಮ್ಮಾನಕ್ಕೆ ಉತ್ತರಿಸಿದ ಟಿ. ಆರ್‌. ಶೆಟ್ಟಿ ಅವರು, ಸದಸ್ಯರಿಗೆ ಯಕ್ಷಗಾನದ ಮೇಲಿನ ಅಭಿರುಚಿಯೇ ಈ ಯಕ್ಷಗಾನ ಪ್ರದರ್ಶನವು ಉತ್ತಮ ರೀತಿಯಲ್ಲಿ ಯಶಸ್ವಿಯಾಗಲು ಕಾರಣವಾಯಿತು. ಭವಿಷ್ಯದಲ್ಲೂ ಅಭಿರುಚಿ ಇರುವವರಿಗೆ ಯಕ್ಷಗಾನ ಕಲಿಸಲು ನಾನು ಸಿದ್ಧನಿದ್ದೇನೆ ಎಂದರು.

Advertisement

ಸಂಘದ ಗೌರವ ಸಲಹೆಗಾರ ಜಯ ಎ. ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ರಾಮಣ್ಣ ದೇವಾಡಿಗ, ಗೌರವ ಪ್ರಧಾನ ಕಾರ್ಯದರ್ಶಿ ಚಂದ್ರಹಾಸ ಎನ್‌. ಶೆಟ್ಟಿ, ಗೌರವ ಪ್ರಧಾನ ಕೋಶಾಧಿಕಾರಿ ಜಯಂತಿ  ಆರ್‌. ಮೊಲಿ, ಜತೆ ಕಾರ್ಯದರ್ಶಿ ಆನಂದ್‌ ಕೆ. ಶೆಟ್ಟಿ, ಜತೆ ಕೋಶಾಧಿಕಾರಿ ದಯಾನಂದ ಎಂ. ದೇವಾಡಿಗ ಹಾಗೂ ಸಂಘದ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ನಾಗವೇಣಿ ಎಸ್‌. ಶೆಟ್ಟಿ, ಉಪ ಕಾರ್ಯಾಧ್ಯಕ್ಷೆ ಶಾಲಿನಿ ಎಸ್‌. ಶೆಟ್ಟಿ, ಕಾರ್ಯದರ್ಶಿ ಮಾಲತಿ ಜೆ. ಮೊಲಿ, ಕೋಶಾಧಿಕಾರಿ ಸಂಗೀತಾ ಸಿ. ಶೆಟ್ಟಿ, ಜತೆ ಕಾರ್ಯದರ್ಶಿ ಸುಧಾ ರಾವ್‌, ಜತೆ ಕೋಶಾಧಿಕಾರಿ ಸುಕಲತಾ ಸಿ. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಭರತ್‌ ವಿ. ಶೆಟ್ಟಿ, ಗೌರವ ಸಲಹೆಗಾರರಾದ ಶೇಖರ್‌ ಶೆಟ್ಟಿ, ಸತೀಶ್‌ ಆರ್‌. ಶೆಟ್ಟಿ, ಶ್ರೀಧರ ಕೆ. ಶೆಟ್ಟಿ, ಜಯ ಎ. ಶೆಟ್ಟಿ, ಜೆ. ಕೆ. ಮೊಲಿ ಹಾಗೂ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು ಸಹಕರಿಸಿದರು. ಸಂಘದ ಸದಸ್ಯ ಬಾಂಧವರಿಂದ ಮಹಿಷ ಮರ್ದಿನಿ ಯಕ್ಷಗಾನ ಪ್ರದರ್ಶನಗೊಂಡಿತು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next