Advertisement
“ಬಿರುಸಾದ ಬೇಸಿಗೆ ಮಳೆ ಬರುವುದಕ್ಕೆ ಮುಂಚೆ ಜಮೀನನ್ನು ಚೆನ್ನಾಗಿ ಉಳುಮೆ ಮಾಡು ವುದು ಸೂಕ್ತ.ಏಪ್ರಿಲ… 15ರ ಆಸುಪಾಸಿನಲ್ಲಿ ಸಾಮಾನ್ಯವಾಗಿ ರಭಸದ ಮಳೆ ಬೀಳುತ್ತದೆ. ಹೀಗಾಗಿ, ಹೊಲವನ್ನು ಉತ್ತು ಹದ ಮಾಡಿದರೆ ಮುಂದಿನ ಹಂಗಾಮಿನಲ್ಲಿ ಬೆಳೆ ಇಳುವರಿ ಸಮೃದ್ಧ. ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಜೊತೆಗೆ ಪರಿಣಾಮಕಾರಿಯಾಗಿಕೀಟಗಳನ್ನು ನಿಯಂತ್ರಿಸಬಹುದು’ ಎನ್ನುತ್ತಾರೆ, ಕೀಟ ನಿಯಂತ್ರಣಾ ವಿಧಾನಗಳ ಸಂಶೋಧಕ ಲೋಕೇಶ್ ಮಾಕಮ್.ಬೇಸಿಗೆ ಮತ್ತು ಮುಂಗಾರುಮಳೆ ಆರಂಭಕ್ಕೂ ಮುನ್ನ ಉಳುಮೆ ಮಾಡುವುದರಿಂದ ಹೆಂಟೆಗಳು ಹೊಡೆಯುತ್ತವೆ. ಮಣ್ಣಿನ ಕಣಗಳರಚನೆಯೂ ಸುಧಾರಿಸುತ್ತದೆ. ಮಣ್ಣು ತುಂಬ ಸಡಿಲವಾಗಿರುವುದರಿಂದ, ಬಿದ್ದ ಮಳೆನೀರು ಹರಿದು ಹೋಗದೇ ಒಳಗೆ ಇಳಿಯುತ್ತದೆ. ಇದರಿಂದ ಜಮೀನು ದೀರ್ಘಕಾಲ ಹಸಿರಾಗಿ, ಸುತ್ತಲಿನ ಅಂತರ್ಜಲ ಮಟ್ಟ ಗಣನೀಯವಾಗಿ ಹೆಚ್ಚಳವಾಗಿ, ತೆರೆದ ಕೊಳವೆ ಬಾವಿಗಳಲ್ಲಿ ನೀರು ಸಮೃದ್ಧವಾಗಿರುತ್ತದೆ. ಉಳುಮೆ ಮಾಡಿದ ನಂತರ ಗಟ್ಟಿಯಾದ ಬದುಗಳನ್ನು ನಿರ್ಮಿಸಬೇಕು. ಇದರಿಂದ ನೀರು ಹೊರಗೆ ಹರಿದು ಹೋಗಲು ಆಸ್ಪದವಿರುವುದಿಲ್ಲ. ಜಮೀನಿನ ಇಳಿಜಾರಿಗೆ ಅಡ್ಡಲಾಗಿ ಉಳುಮೆ ಮಾಡುವುದು ಸೂಕ್ತ.
ಸಂದರ್ಭದಲ್ಲಿ ಮಣ್ಣಿನ ಮೇಲ್ಪದರದಿಂದ ಕೆಳಗೆ ಇರುವ ಕೋಶಗಳಿಂದ ಹಿಲಿಯೋಥಿಸ್ ಕೋಶಗಳು ಹೊರ ಬೀಳುತ್ತವೆ. ಜೂನ್ ತಿಂಗಳಿನಿಂದಲೇ ಚಟುವಟಿಕೆ ಪ್ರಾರಂಭಿಸುವ ಈ ಪತಂಗಗಳು ರಾತ್ರಿ ಸಮಯ ಹೆಚ್ಚು ಚಟುವಟಿಕೆಯಿಂದಿರುತ್ತವೆ. ಒಂದೇ ಬೆಳೆ ಬೇಡ ಹಿಲಿಯೋಥಿಸ್ ಕೀಟಗಳು 181 ಕ್ಕೂ ಹೆಚ್ಚು ವಿವಿಧ ತಳಿಗಳನ್ನು ಆಶ್ರಯಿಸಿವೆ. ನೆಲಗಡಲೆ, ಉದ್ದು, ಅಲಸಂದೆ, ಹೆಸರು, ಸಾಸಿವೆ, ಸೂರ್ಯಕಾಂತಿ, ಕುಸುಬೆ, ತೊಗರಿ, ಜೋಳ, ಗೋವಿನ ಜೋಳ, ಆಲೂಗಡ್ಡೆ, ಈರುಳ್ಳಿ, ಕ್ಯಾರೆಟ್, ಬೆಂಡೆಕಾಯಿ, ಟೊಮೆಟೊ,
ಎಲೆಕೋಸು, ಬಟಾಣಿ ಮುಂತಾದ ಬೆಳೆಗಳಿಗೆ ಇವುಗಳು ಮಾಡುವ ಹಾನಿ ಅಪಾರ. ಮುಖ್ಯವಾಗಿ ಹತ್ತಿ, ಕಡಲೆ, ತೊಗರಿ ಮತ್ತು ಸೂರ್ಯಕಾಂತಿಗೆ ಇವುಗಳ ಬಾಧೆ ತೀವ್ರ. ಇವುಗಳು ವೃದ್ಧಿಸಿದರೆ ನಿಯಂತ್ರಣ ಬಹಳ ಕಷ್ಟ. ಇಂಥ ಕೀಟಗಳು ಕಳೆ ಸಸ್ಯಗಳಲ್ಲಿ ಆಶ್ರಯ ಪಡೆದಿರುತ್ತವೆ. ಬೇಸಿಗೆಮಳೆಗೂ ಮುನ್ನ ಉಳುಮೆ ಮಾಡಿದಾಗ ಇವುಗಳ ಕೋಶಗಳು ಮಣ್ಣಿನ ಮೇಲು ಭಾಗಕ್ಕೆ ಬರುತ್ತವೆ. ಪ್ರಖರ ಬಿಸಿಲಿನಿಂದ ಸಾಯುತ್ತವೆ. ಕೀಟಭಕ್ಷಕಗಳಿಗೆ ಆಹಾರವಾಗುತ್ತವೆ ಎನ್ನುತ್ತಾರೆ ಲೋಕೇಶ್. ಒಂದೇ ಬೆಳೆಯನ್ನು ನಿರಂತರವಾಗಿ ಬೆಳೆಯುವುದರಿಂದಲೂಕೀಟ ಬಾಧೆ, ಸಸ್ಯರೋಗಗಳು ಹೆಚ್ಚಾಗುವುದಲ್ಲದೇ ಬೆಳೆ ಇಳುವರಿಯೂ ಕುಗ್ಗುತ್ತದೆ. ಇವುಗಳಲ್ಲದೇ ಮಣ್ಣಿನ ಫಲವತ್ತತೆಯೂಗಣನೀಯವಾಗಿ ಕಡಿಮೆಯಾಗುತ್ತದೆ. ಇಂಥ ಅನೇಕ ಸಮಸ್ಯೆಗಳನ್ನು ಬೆಳೆ ಪರಿವರ್ತನೆ ಮಾಡುವುದರಿಂದ ಪರಿಣಾಮಕಾರಿಯಾಗಿ
ತಡೆಗಟ್ಟಬಹುದು.
Related Articles
Advertisement