ಪೇಶಾವರ : ಜನವರಿ 30 ರಂದು ಪಾಕಿಸ್ತಾನದ ಪೇಶಾವರದ ಮಸೀದಿಯೊಳಗೆ 100 ಕ್ಕೂ ಹೆಚ್ಚು ಜನರ ಸಾವಿಗೆ ಕಾರಣನಾದ ಆತ್ಮಾಹುತಿ ಬಾಂಬರ್, ದಾಳಿ ನಡೆಸುವ ವೇಳೆ ಪೊಲೀಸ್ ಸಮವಸ್ತ್ರದಲ್ಲಿದ್ದನಂತೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.
ಆತ್ಮಹತ್ಯಾ ಬಾಂಬರ್ ತನ್ನನ್ನು ತಾನು ಸ್ಫೋಟಿಸಿಕೊಂಡಾಗ ಮಸೀದಿಯೊಳಗೆ ಸುಮಾರು 400ಕ್ಕೂ ಅಧಿಕ ಮಂದಿ ಹಾಜರಿದ್ದರು ಎನ್ನಲಾಗಿದೆ. ಅಲ್ಲದೆ ಸ್ಪೋಟದಲ್ಲಿ ಸುಮಾರು ನೂರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು ಇದರಲ್ಲಿ 27 ಮಂದಿ ಪೊಲೀಸರು ಸೇರಿದ್ದಾರೆ ಎಂದು ವರದಿ ತಿಳಿಸಿದೆ.
ಆತ್ಮಹತ್ಯಾ ಬಾಂಬರ್ ಪೊಲೀಸ್ ಸಮವಸ್ತ್ರವನ್ನು ಧರಿಸಿದ್ದರು ಮತ್ತು ಸ್ಫೋಟದ ಹಿಂದಿನ ಭಯೋತ್ಪಾದಕ ಜಾಲವನ್ನು ಪೊಲೀಸರು ಮರೆಮಾಚಿದ್ದಾರೆ ಎಂದು ಖೈಬರ್ ಪಖ್ತುನ್ಖ್ವಾ ಪೊಲೀಸ್ ಮುಖ್ಯಸ್ಥ ಮೊಜಾಮ್ ಜಾಹ್ ಅನ್ಸಾರಿ ಗುರುವಾರ ಬಹಿರಂಗಪಡಿಸಿದ್ದಾರೆ.
ಸ್ಫೋಟದ ಸ್ಥಳದಲ್ಲಿ ಪತ್ತೆಯಾದ ತುಂಡರಿಸಿದ ತಲೆಯು ಬಾಂಬರ್‌ನದ್ದಾಗಿದೆ ಎಂದು ಖಚಿತಪಡಿಸಿದ ಪೊಲೀಸರು, ಅವರು ಮುಖವಾಡ ಮತ್ತು ಹೆಲ್ಮೆಟ್ ಧರಿಸಿದ್ದರು ಎಂದು ಹೇಳಿದರು. ಸಿಸಿಟಿವಿ ಚಿತ್ರ ಪರಿಶೀಲಿಸಿದ ಬಳಿಕ ಬಾಂಬರ್ ಯಾರೆಂಬುದರ ಬಗ್ಗೆ ಮನವರಿಕೆಯಾಗಿದೆ ಎಂದು ವರದಿ ಹೇಳಿದೆ.
ಇಷ್ಟೊಂದು ಮಂದಿ ಪೊಲೀಸರು ಇದ್ದರೂ ಘಟನೆ ನಡೆಯಲು ಭದ್ರತಾ ಲೋಪವೇ ಕಾರಣ ಅದೂ ಅಲ್ಲದೆ ದಾಳಿ ನಡೆಸಿದ ವ್ಯಕ್ತಿಯು ಪೊಲೀಸ್ ಸಮವಸ್ತ್ರದಲ್ಲಿ ಇದ್ದ ಕಾರಣ ಅಧಿಕಾರಿಗಳು ಪರಿಶೀಲನೆ ನಡೆಸಲಿಲ್ಲ ಎಂದು ಪೊಲೀಸ್ ಮುಖ್ಯಸ್ಥರೊಬ್ಬರು ಹೇಳಿಕೆ ನೀಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ : Budget 2023: ಭಾರತದಿಂದ ಅಫ್ಘಾನಿಸ್ತಾನಕ್ಕೆ 200 ಕೋಟಿ ರೂ. ನೆರವಿನ ಘೋಷಣೆ: ತಾಲಿಬಾನ್ ಪ್ರತಿಕ್ರಿಯೆ ಏನು?