Advertisement

ಪಿಇಎಸ್‌ ತಾಂತ್ರಿಕ ವಿವಿಯಲ್ಲಿ ವಾರ್ಷಿಕ ಪದವಿ ಪ್ರದಾನ

11:48 AM Sep 19, 2017 | Team Udayavani |

ಬೆಂಗಳೂರು: ಜಗತ್ತು ಈಗ ಸಂಪರ್ಕ ಜಾಲದೊಂದಿಗೆ ಸಮಗ್ರವಾಗಿದ್ದು, ವಿದ್ಯಾರ್ಥಿಗಳಿಗೆ ಮತ್ತು ಪದವೀಧರರಿಗೆ ಅನ್ವೇಷಿಸಲು ಸಾಕಷ್ಟು ವಿಷಯಗಳು ಕಾಯುತ್ತಿವೆ. ಕ್ಷಿಪ್ರ ಬದಲಾವಣೆಗೆ ಜಗತ್ತಿನಲ್ಲಿ ವಿಫುಲ ಅವಕಾಶಗಳು ಹುಟ್ಟಿಕೊಂಡಿವೆ ಎಂದು ಐಟಿ-ಬಿಟಿ ಕ್ಷೇತ್ರದ ಕೌಶಲ್ಯ ಸಮಿತಿ ಮತ್ತು ನಾಸ್ಕಾಮ್‌ ಉಪಾಧ್ಯಕ್ಷೆ ಡಾ. ಸಂಧ್ಯಾ ಚಿಂತಲ ಅಭಿಪ್ರಾಯಪಟ್ಟರು.

Advertisement

ಇತೀ¤ಚೆಗೆ ನಗರದ ಪಿಇಎಸ್‌ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಪದವಿ ಪ್ರಧಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಡಾ. ಸಂಧ್ಯಾ ಚಿಂತಲ ಅವರು ರ್‍ಯಾಂಕ್‌ ಪಡೆದ ವಿದ್ಯಾರ್ಥಿಗಳಿಗೆ ಪದಕ ಮತ್ತು ಪ್ರಶಸ್ತಿ ಪತ್ರ ನೀಡಿ ತಮ್ಮ ಅನುಭವ ಹಂಚಿಕೊಂಡರು.

ಪೆಸಿಟ್‌ ವಿವಿ ಕುಲಪತಿ ಡಾ. ಎಂ.ಆರ್‌.ದೊರೆಸ್ವಾಮಿ ಮಾತನಾಡಿ, ಪಿಇಎಸ್‌ ಸದಾ ಉತ್ತಮ ಫಲಿತಾಂಶ ಹಾಗೂ ಹೊಸ ಮೈಲಿಗಲ್ಲುಗಳನ್ನು ಸಾಧಿಸಲು ಉತ್ಸುಕವಾಗಿದೆ. ಮಕ್ಕಳು ಪಿಇಎಸ್‌ ಸಂಸ್ಥೆಗಳನ್ನು ಸೇರಲು ಬಯಸುವುದನ್ನು ಗಮನಿಸಿದಾಗ ಸಂಸ್ಥೆಯ ಸಾಧನೆಯ ಅರಿವಾಗುತ್ತದೆ. ಪದವಿ ಪ್ರದಾನ ಸಮಾರಂಭಗಳು ನಮಗೆ ಪವಿತ್ರ ಕಾರ್ಯಕ್ರಮಗಳಿದ್ದಂತೆ. ಪದವಿ ಪಡೆದ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ಸಿಗಲಿ ಎಂದು ಹರಸಿದರು.

ಈ  ಸಂದರ್ಭದಲ್ಲಿ ರ್‍ಯಾಂಕ್‌ ಗಳಿಸಿದ 94 ವಿದ್ಯಾರ್ಥಿಗಳಿಗೆ ಸ್ವರ್ಣ ಪದಕ ಮತ್ತು ಪ್ರಮಾಣ ಪತ್ರ ನೀಡಲಾಯಿತು ಹಾಗೂ 1132 ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್‌ ಪದವಿ ಪತ್ರಗಳನ್ನು ವಿತರಿಸಲಾಯಿತು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ಕರಿಸಿದ್ದಪ್ಪ, ಪ್ರೊ. ಡಿ. ಜವಾಹರ್‌, ಪಿಆರ್‌ಒ ಚಾನ್ಸೆಲರ್‌, ಪಿಇಎಸ್‌ ವಿವಿ ಮತ್ತು ಸಿಇಒ ಪಿಇಎಸ್‌ ಶಿಕ್ಷಣ ಸಂಸ್ಥೆಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next