Advertisement

ಗೊಂದಲಕ್ಕೆ ಕಾರಣವಾದ ಪಾಕಿಸ್ಥಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ನಿಧನ ಸುದ್ದಿ

06:24 PM Jun 10, 2022 | Team Udayavani |

ದುಬೈ :ಪಾಕಿಸ್ಥಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ವೆಂಟಿಲೇಟರ್‌ನಲ್ಲಿದ್ದು, ಅವರು ನಿಧನ ಹೊಂದಿದ್ದಾರೆ ಎಂದು ಕೆಲ ಪಾಕಿಸ್ಥಾನದ ಮಾಧ್ಯಮಗಳು ವರದಿ ಮಾಡಿದ್ದು ಗೊಂದಲಕ್ಕೆ ಕಾರಣವಾಗಿದೆ.

Advertisement

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ 78 ರ ಹರೆಯದ ಮುಷರಫ್ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟ ನಂತರ ದುಬೈನಲ್ಲಿರುವ ಅಮೆರಿಕದ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು.ಅವರನ್ನು ನೋಡಲು ಅವರ ಕುಟುಂಬ ಸದಸ್ಯರು ಈಗಾಗಲೇ ದುಬೈಗೆ ಆಗಮಿಸಿದ್ದಾರೆ ಎಂದು ವರದಿಯಾಗಿದೆ.

ನಿವೃತ್ತ ಮಿಲಿಟರಿ ಜನರಲ್ ಆಗಿದ್ದ ಮುಷರಫ್ 1999 ರಲ್ಲಿ ಫೆಡರಲ್ ಸರ್ಕಾರದ ಯಶಸ್ವಿ ಮಿಲಿಟರಿ ಸ್ವಾಧೀನದ ನಂತರ ಪಾಕಿಸ್ಥಾನದ ಹತ್ತನೇ ಅಧ್ಯಕ್ಷರಾಗಿದ್ದರು. 2008 ರವರೆಗೆ ಅಧ್ಯಕ್ಷರಾಗಿದ್ದರು. ಅವರು ದೋಷಾರೋಪಣೆಯನ್ನು ತಪ್ಪಿಸಲು ರಾಜೀನಾಮೆಯನ್ನು ಸಲ್ಲಿಸಿದ್ದರು.

ಅವರು ಆಸ್ಪತ್ರೆಗೆ ದಾಖಲಾದ ತಕ್ಷಣ, ಮುಷರಫ್ ಸಾವಿನ ಬಗ್ಗೆ ವದಂತಿಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದವು. ಕೆಲವು ಪಾಕಿಸ್ಥಾನಿ ಮಾಧ್ಯಮಗಳು ಈ ಹಿಂದೆ ಮುಷರಫ್ ಆಸ್ಪತ್ರೆಯಲ್ಲಿ ನಿಧನ ಹೊಂದಿದರು ಎಂದು ವರದಿ ಮಾಡಿದ್ದವು, ಆದರೆ ನಂತರ ವರದಿಗಳನ್ನು ರದ್ದುಗೊಳಿಸಲಾಯಿತು.

ಅಂಗಾಂಗಗಳು ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆ, ಚೇತರಿಕೆ ಸಾಧ್ಯವಿಲ್ಲ ಎಂದು ಪರ್ವೇಜ್ ಮುಷರಫ್ ಕುಟುಂಬ ಹೇಳಿದೆ.

Advertisement

ಅವರು ವೆಂಟಿಲೇಟರ್‌ನಲ್ಲಿಲ್ಲ. ಕಳೆದ 3 ವಾರಗಳಿಂದ ಅವರ ಅನಾರೋಗ್ಯದ (ಅಮಿಲೋಡೋಸಿಸ್) ತೊಡಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚೇತರಿಕೆ ಸಾಧ್ಯವಾಗದ ಮತ್ತು ಅಂಗಗಳು ಅಸಮರ್ಪಕವಾಗಿ ಕಾರ್ಯನಿರ್ವಹಿಸುವ ಕಠಿಣ ಹಂತದಲ್ಲಿದ್ದಾರೆ. ಅವರ ದಿನನಿತ್ಯದ ಜೀವನ ಸುಗಮವಾಗಿರಲಿ ಎಂದು ಪ್ರಾರ್ಥಿಸಿ,’’ ಎಂದು ಪರ್ವೇಜ್ ಮುಷರಫ್ ಅವರ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಸಂದೇಶವನ್ನು ಬರೆಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next