ಇಸ್ಲಾಮಾಬಾದ್ : ಪಾಕ್ ಮಾಜಿ ಪ್ರಧಾನಿ ಬೇನಜೀರ್ ಭುಟ್ಟೋ ಹತ್ಯೆ ಕೇಸಿನಲ್ಲಿ ಮಾಜಿ ಪಾಕ್ ಸರ್ವಾಧಿಕಾರಿ, ಅಧ್ಯಕ್ಷ ಪರ್ವೇಜ್ ಮುಶರ್ರಫ್ ಅವರನ್ನು ತಲೆಮರೆಸಿಕೊಂಡಿರುವ ಅಪರಾಧಿ (ಅಬ್‌ಸ್ಕಾಂಡರ್) ಎಂದು ಪಾಕಿಸ್ಥಾನದ ಉಗ್ರ ನಿಗ್ರಹ ನ್ಯಾಯಾಲಯ (ಎಟಿಸಿ) ಘೋಷಿಸಿದೆ.
ಪಾಕಿಸ್ಥಾನದ ಎರಡು ಬಾರಿಯ ಪ್ರಧಾನಿ ಬೇನಜೀರ್ ಭುಟ್ಟೋ ಅವರನ್ನು 2007 ಡಿ.27ರಂದು ರಾವಲ್ಪಿಂಡಿಯಲ್ಲಿ ಗನ್ ಮತ್ತು ಬಾಂಬ್ ದಾಳಿಯಲ್ಲಿ ಹತ್ಯೆಗೈಯಲಾಗಿತ್ತು.
ಈ ಹತ್ಯಾ ಪ್ರಕರಣದಲ್ಲಿ ವಿಚಾರಣೆಗೆ ಗುರಿಯಾಗಿದ್ದ ತೆಹರೀಕ್ ಎ ತಾಲಿಬಾನ್ ಪಾಕಿಸ್ಥಾನ್ (ಟಿಟಿಪಿ) ಉಗ್ರ ಸಂಘಟನೆಯ ಐವರು ಆರೋಪಿಗಳನ್ನು ಎಟಿಸಿ ನ್ಯಾಯಾಧೀಶ ಅಸ್‌ಘರ್ ಅಲಿ ಖಾನ್ ದೋಷಮುಕ್ತಗೊಳಿಸಿದ್ದರು.
ಬೇನಜೀರ್ ಹತ್ಯೆ ಕೇಸಿನಲ್ಲಿ ಈಗ ಜೈಲಲ್ಲಿರುವ ಇತರ ಟಿಟಿಪಿ ಸದಸ್ಯರೆಂದರೆ ರಫಾಕತ್ ಹುಸೇನ್, ಹುಸ್‌ನೇನ್ ಗುಲ್, ಶೇರ್ ಝಮಾನ್, ಐತಜಾಜ್ ಶಾ ಮತ್ತು ಅಬ್ದುಲ್ ರಶೀದ್.
ಬೇನಜೀರ್ ಹತ್ಯೆ ಕೇಸಿನಲ್ಲಿ ಪರ್ವೇಜ್ ಮುಶರ್ರಫ್ ಓರ್ವ ಆರೋಪಿ ಎಂದು ಹೆಸರಿಸಲಾಗಿದೆ.