ಈ ಸಂದರ್ಭ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, ಸಾರ್ವಜನಿಕರ ಹಣವನ್ನು ದೇಗುಲದ ಒಳಗಿನವರೇ ಪೋಲು ಮಾಡಿ ಅವ್ಯವಹಾರದಲ್ಲಿ ತೊಡಗಿದ್ದಾರೆ ಎನ್ನುವುದು ಸಾಬೀತಾದರೆ ಈ ಕುರಿತು ಸೂಕ್ತ ಕ್ರಮವನ್ನು ಕೈಗೊಳ್ಳಲಾಗುವುದು.ಸಾರ್ವಜನಿಕರು ದೇವರ ಕೆಲಸಕ್ಕೆ ನೀಡಿದ ಹಣವನ್ನು ಈ ರೀತಿ ದುರ್ಬಳಕೆ ಮಾಡಲು ಅವಕಾಶ ನೀಡುವುದಿಲ್ಲ ಎಂದರು.
Advertisement
ಏನು ದೂರು: ದೇಗುಲದಲ್ಲಿ ಸಂಗ್ರಹ ವಾದ ಹಣಗಳ ಬಗ್ಗೆ ಸಾರ್ವ ಜನಿಕರು ಮತ್ತು ಭಕ್ತಾದಿಗಳನ್ನು ಕತ್ತಲೆಯಲ್ಲಿಟ್ಟು ಅವ್ಯವಹಾರಗಳು ನಡೆಯುತ್ತಿವೆ. ಕಾಣಿಕೆ ಡಬ್ಬಿಗಳು ಕಾಣೆಯಾಗಿವೆ. ದೇವಸ್ಥಾನದ ಆಡಳಿತಾಧಿಕಾರಿಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಸಾರ್ವಜನಿಕರಿಂದ ಸಂಗ್ರಹವಾದ ಹಣಗಳಿಗೆ ರಶೀದಿ ನೀಡುವ ಪದ್ಧತಿ ಇಲ್ಲ, ಇಲ್ಲಿ ಸಿಸಿ ಕೆಮರಾವನ್ನು ಸ್ಥಗಿತಗೊಳಿಸಿ ಹಣ ತೆಗೆಯಲಾಗುತ್ತಿದೆ. ಭಕ್ತರಿಗೆ ಧಮ್ಕಿ ಹಾಕುವ ಸಂಪ್ರದಾಯ ನಡೆಯುತ್ತಿದೆ, ಸಭಾಭವನದ ಬಾಡಿಗೆ ಬಂದ ಮೊತ್ತದ ಯಾವುದೇ ದಾಖಲೆಗಳು ಇಲ್ಲ. ಸರಕಾರಕ್ಕೆ ತಪ್ಪು ಲೆಕ್ಕ ಪತ್ರ ಹಾಗೂ ದಾಖಲೆಗಳನ್ನು ನೀಡಲಾಗಿದೆ. ಆಡಳಿತ ದುರುಪಯೋಗ ನಡೆಯುತ್ತಿದೆ ಎಂದು ಸಾರ್ವಜನಿಕರು ತಹಶೀಲ್ದಾರ್ ಅವರಿಗೆ ದೂರು ನೀಡಿದ್ದರು.
ದೇಗುಲವನ್ನು ಪರಿಶೀಲನೆ ನಡೆಸುವ ಸಂದರ್ಭದಲ್ಲಿ ನಾಲ್ಕು ಕಾಣಿಕೆ ಡಬ್ಬಿಗಳು ಪತ್ತೆಯಾಗಿದ್ದು ಸಾರ್ವಜನಿಕರು ದೇಗುಲಕ್ಕೆ ಕಾಣಿಕೆ ರೂಪದಲ್ಲಿ ಸಲ್ಲಿಸಿದ ಹಣವನ್ನು ಅಡಗಿಸಿಟ್ಟ ಡಬ್ಬಿಗಳು ಇವೆಂದು ಹೇಳಲಾಗಿದೆ. ದೇಗುಲದಲ್ಲಿ ಅವ್ಯವಹಾರ ನಡೆದಿದೆ ಎನ್ನುವ ದೂರಿನ ಆಧಾರದ ಮೇಲೆ ಸಮಗ್ರ ತನಿಖೆಯನ್ನು ಕೈಗೊಂಡಿದ್ದೇವೆ. ತನಿಖೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗುವುದು.
-ಟಿ.ಜಿ. ಗುರುಪ್ರಸಾದ್, ಕಾರ್ಕಳ ತಹಶೀಲ್ದಾರ್