Advertisement

ಪೆರುವಾಯಿ ಗ್ರಾಮಸಭೆ: ರಸ್ತೆ ಕಾಂಕ್ರೀಟ್‌ ಕಾಮಗಾರಿಗೆ 35 ಲ.ರೂ.ಮಂಜೂರು

02:45 AM Jul 11, 2017 | |

ವಿಟ್ಲ : ಪಂಚಾಯತ್‌ ವತಿಯಿಂದ 2017-18 ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆ ಮತ್ತು ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಪ್ರಥಮ ಹಂತದ ಸಾಮಾಜಿಕ ಪರಿಶೋಧನಾ ಸಭೆಯು ಪೆರುವಾಯಿ ರಾಜರಾಜೇಶ್ವರಿ  ಭಜನಾ ಮಂದಿರದ  ಸಭಾಂಗಣದಲ್ಲಿ ಜರಗಿತು.

Advertisement

ಪೆರುವಾಯಿ ಗ್ರಾಮ ಪಂಚಾಯತ್‌  ಅಧ್ಯಕ್ಷ  ರಾಲ್ಫ್ ಡಿ’ಸೋಜ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ.ಅಧ್ಯಕ್ಷ ರಾಲ್ಫ್  ಡಿ ‘ಸೋಜ ಅವರು ಮಾಹಿತಿ ನೀಡಿ, ಶಾಸಕರ ಅನುದಾನದಿಂದ  ಪೆರುವಾಯಿ ರಸ್ತೆ ಕಾಂಕ್ರೀಟ್‌ ಕಾಮಗಾರಿಗೆ   35 ಲಕ್ಷ ರೂಪಾಯಿ ಮಂಜೂರಾಗಿದ್ದು, ಕೆಲಸ ಆರಂಭವಾಗಲಿದೆ ಎಂದರು.

ಮಳೆ ಕೊಯ್ಲಿಗೆ ಆದ್ಯತೆ
ಅಂತರ್ಜಲವೃದ್ಧಿ ಸಲು ಎಲ್ಲಾ  ಮನೆಗಳಲ್ಲಿ ಮಳೆ ನೀರಿನ ಕೊಯ್ಲು ಆಳವಡಿಸುವುದು,ಕೊಳವೆ ಬಾವಿಗಳಿಗೆ ಮರುಪೂರಣ ಘಟಕ ನಿರ್ಮಿಸುವುದು,ಉದ್ಯೋಗ ಖಾತ್ರಿ ಯೋಜನೆಯಿಂದ  ಪ್ರತಿಯೊಬ್ಬರುತೆರೆದ ಬಾವಿ ನಿರ್ಮಿಸುವುದು. ಸರಕಾರದಿಂದ ಸಿಗುವ  ಕೃಷಿ ಭಾಗ್ಯದ  ಕೃಷಿ ಹೊಂಡ ಯೋಜನೆ ಯ ಸವಲತ್ತು ಪಡೆದು  ನೀರಿನ ಜಲಮಟ್ಟ ವೃದ್ಧಿಸಲು  ಎಲ್ಲರೂ ಶ್ರಮ ವಹಿಸಿ, ಕೆಲಸ ಮಾಡುವುದು. 94ಸಿ ಯ ಅರ್ಜಿಯನ್ನುಸಲ್ಲಿಸಲು ಬಾಕಿಯಾದ ಫಲಾನುಭವಿಗಳಿಗೆ  ಅವಕಾಶವಿದೆ ಎಂದರು.

ಕೃಷಿ ಸಾಲ ರೂ 50 ಸಾವಿರ ಮನ್ನಾ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಭಿನಂದಿಸಲಾಯಿತು. ಪೆರುವಾಯಿ ಗ್ರಾಮ ಉದ್ಯೋಗ ಖಾತ್ರಿ ಹಾಗೂ ಗ್ರಾಮ ಸಭೆಯ ನೋಡಲ್‌ ಅಧಿಕಾರಿಯಾಗಿ ಕೇಂದ್ರ  ಶಿಕ್ಷಣ ಸಂಪನ್ಮೂಲ  ಕೇಂದ್ರದ  ಅಧಿಕಾರಿ ರಾಜೇಶ್‌ ಅವರು ನಡೆಸಿ ಕೊಟ್ಟರು. ಉದ್ಯೋಗ  ಖಾತ್ರಿ  ಯೋಜನೆ  ಬಗ್ಗೆ ಸಮಗ್ರ ಮಾಹಿತಿ  ನೀಡಿದರು. ಮುಂದಿನ ದಿನಗಳಲ್ಲಿ  ಉದ್ಯೋಗ ಖಾತರಿ ಯೋಜನೆ ಯಶಸ್ವಿ ಅನುಷ್ಠಾನದ  ಬಗ್ಗೆ  ಎಲ್ಲರೂ ಮುತುವರ್ಜಿ ವಹಿಸಬೇಕೆಂದರು. ಅಧಿಕಾರಿಗಳು ವಿವಿಧ  ಇಲಾಖೆಗಳ  ಮಾಹಿತಿ ನೀಡಿದರು.

ಶಾಖೆಗಾಗಿ ಮನವಿ
ಸಾಮಾಜಿಕ ಕಾರ್ಯಕರ್ತ ಮಂಜುನಾಥ ಶೆಟ್ಟಿ ಅವರು ಪೆರುವಾಯಿಯಲ್ಲಿ ರಾಷ್ಟ್ರೀಯ ಬ್ಯಾಂಕ್‌ ಶಾಖೆ ಮಂಜೂರು ಮಾಡುವಂತೆ ಬ್ಯಾಂಕಿನ ಅಧಿಕಾರಿಗಳಿಗೆ ಮನವಿ ಮಾಡಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ  ಶೇ.25 ಪ.ಜಾತಿ ಹಾಗೂ ಪಂಗಡದ ವಿದ್ಯಾ ವೇತನ, ಮತ್ತು  ದೀರ್ಘ‌ಕಾಲದಿಂದ  ಕಾಯಿಲೆಯಿಂದ ಬಳಲುತ್ತಿರುವವರಿಗೆ ಚೆಕ್‌ ವಿತರಿಸಲಾಯಿತು.

Advertisement

ಗ್ರಾ.ಪಂ ಉಪ್ಯಾಧ್ಯಕ್ಷೆ ಮಾಲತಿ, ಸದಸ್ಯರಾದ ಗೋಪಾಲಕೃಷ್ಣ ನಾಯ್ಕ , ಗೋಪಾಲಕೃಷ್ಣ ಶೆಟ್ಟಿ,  ಉಮಾವತಿ, ಹರಿಣಾಕ್ಷಿ, ರೇವತಿ, ಮಾಜಿ ಅಧ್ಯಕ್ಷೆ ಪುಪ್ಪಲತಾ ಎಂ. ಶೆಟ್ಟಿ,  ಮಾಜಿ ಅಧ್ಯಕ್ಷ ವಾಸು ಪೂಜಾರಿ, ಪಂಚಪಾಲ ಶೆಟ್ಟಿ ಹಾಗೂ ಸಿಬಂದಿ ವರ್ಗ ಉಪಸ್ಥಿತರಿದ್ದರು. ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಅಶೋಕ ಎನ್‌.ಜಿ. ಸ್ವಾಗತಿಸಿ, ಗ್ರಾಮ ಪಂ. ಸದಸ್ಯ ಬಾಲಕೃಷ್ಣ ಪೂಜಾರಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next